IPL 2023: ಈ ಸಲ ಪಕ್ಕಾ RCB ಫೈನಲ್​ ಆಡಲಿದೆಯಂತೆ..!

| Updated By: ಝಾಹಿರ್ ಯೂಸುಫ್

Updated on: Apr 24, 2023 | 11:52 PM

IPL 2023 Kannada: RCB ತಂಡಕ್ಕೆ ಗ್ರೀನ್ ಜೆರ್ಸಿ ಅನ್​ಲಕ್ಕಿ ಎಂದೇ ಪರಿಗಣಿಸಲಾಗುತ್ತದೆ. ಏಕೆಂದರೆ 12 ಬಾರಿ ಆರ್​ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿದು ಗೆದ್ದಿರುವುದು ಕೇವಲ ನಾಲ್ಕು ಬಾರಿ ಮಾತ್ರ.

1 / 8
IPL 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ತಂಡವು ರೋಚಕ ಜಯ ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ಆರ್​ಸಿಬಿ ಅಭಿಮಾನಿಗಳ ಹೊಸ ಲೆಕ್ಕಾಚಾರ ಶುರುವಾಗಿದೆ. ಅದು ಅಂತಿಂಥ ಲೆಕ್ಕಾಚಾರವಲ್ಲ. ಬದಲಾಗಿ ಫೈನಲ್​ ಆಡುವುದು ಖಚಿತ ಎಂಬ ಆತ್ಮವಿಶ್ವಾಸದ ಲೆಕ್ಕಾಚಾರ.

2 / 8
ಹೌದು, ಆರ್​ಸಿಬಿ ತಂಡಕ್ಕೆ ಗ್ರೀನ್ ಜೆರ್ಸಿ ಅನ್​ಲಕ್ಕಿ ಎಂದೇ ಪರಿಗಣಿಸಲಾಗುತ್ತದೆ. ಏಕೆಂದರೆ 12 ಬಾರಿ ಆರ್​ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿದು ಗೆದ್ದಿರುವುದು ಕೇವಲ ನಾಲ್ಕು ಬಾರಿ ಮಾತ್ರ. ಅದರಲ್ಲೂ ಮೂರು ಬಾರಿ ಗೆದ್ದಾಗಲೂ ಆರ್​ಸಿಬಿ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದೆ.

3 / 8
ಅಂದರೆ ಆರ್​ಸಿಬಿ ಮೊದಲ ಬಾರಿಗೆ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿದು ಗೆದ್ದಿರುವುದು 2011 ರಲ್ಲಿ. ಆ ವರ್ಷ ಆರ್​ಸಿಬಿ ತಂಡವು ಫೈನಲ್​ಗೆ ಪ್ರವೇಶಿಸಿತ್ತು.

4 / 8
ಇನ್ನು 2ನೇ ಬಾರಿ ಗ್ರೀನ್ ಜೆರ್ಸಿಯಲ್ಲಿ ಆರ್​ಸಿಬಿ ಜಯ ಸಾಧಿಸಿದ್ದು 2016 ರಲ್ಲಿ. ಆ ವರ್ಷ ಕೂಡ ಆರ್​ಸಿಬಿ ತಂಡವು ಫೈನಲ್ ಪ್ರವೇಶಿಸಿ ಗೆಲುವಿನ ಸಮೀಪದಲ್ಲಿ ಎಡವಿತು.

5 / 8
ಇದಾದ ಬಳಿಕ 2022 ರಲ್ಲಿ ಗ್ರೀನ್ ಜೆರ್ಸಿಯಲ್ಲಿ ಗೆದ್ದಿದ್ದ ಆರ್​ಸಿಬಿ ಪ್ಲೇಆಫ್ ಪ್ರವೇಶಿಸಿದರೂ ಎಲಿಮಿನೇಟರ್ ಪಂದ್ಯದಲ್ಲಿ ಮುಗ್ಗರಿಸಿತ್ತು.

6 / 8
ಇದೀಗ 4ನೇ ಬಾರಿಗೆ ಆರ್​ಸಿಬಿ ತಂಡವು ಗ್ರೀನ್ ಜೆರ್ಸಿಯಲ್ಲಿ ಜಯ ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ಈ ಬಾರಿ ಕೂಡ ಆರ್​ಸಿಬಿ ಫೈನಲ್ ಪ್ರವೇಶಿಸುವುದು ಖಚಿತ ಎನ್ನುತ್ತಿದ್ದಾರೆ ಅಭಿಮಾನಿಗಳು.

7 / 8
ಇದಕ್ಕೆ ಮುಖ್ಯ ಕಾರಣ ಕಳೆದ ಎರಡು ಬಾರಿ ಗ್ರೀನ್ ಜೆರ್ಸಿಯಲ್ಲಿ ಆರ್​ಸಿಬಿ ಗೆದ್ದಾಗ ಫೈನಲ್ ಪ್ರವೇಶಿಸಿರುವುದು. ಇನ್ನು ಕಿಂಗ್ ಕೊಹ್ಲಿಯ ನಾಯಕತ್ವದಲ್ಲಿ 2016 ರಲ್ಲಿ ಆರ್​ಸಿಬಿ ಹಸಿರು ಜೆರ್ಸಿಯಲ್ಲಿ ಜಯ ಸಾಧಿಸಿದಾಗ ಎಸ್​ಆರ್​ಹೆಚ್​ ವಿರುದ್ಧ ಫೈನಲ್ ಆಡಿತ್ತು.

8 / 8
ಈ ಬಾರಿ ಕೂಡ ವಿರಾಟ್ ಕೊಹ್ಲಿಯ ನಾಯಕತ್ವದಲ್ಲಿ ಆರ್​ಸಿಬಿ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿದು ಜಯ ಸಾಧಿಸಿದೆ. ಇದೇ ಕಾರಣದಿಂದಾಗಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ ಪ್ರವೇಶಿಸಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ಆರ್​ಸಿಬಿ ಅಭಿಮಾನಿಗಳು.