SRH vs DC, IPL 2023: ಹೈದರಾಬಾದ್- ಡೆಲ್ಲಿ ರೋಚಕ ಪಂದ್ಯದ ಫೋಟೋಗಳು ಇಲ್ಲಿದೆ ನೋಡಿ

IPL 2023: ಸುಲಭ ಟಾರ್ಗೆಟ್ ಬೆನ್ನಟ್ಟಿದ ಸನ್​ರೈಸರ್ಸ್ ತಂಡ ಈ ಬಾರಿ ಕೂಡ ಆರಂಭಿಕ ವೈಫಲ್ಯ ಅನುಭವಿಸಿತು. ಹ್ಯಾರಿ ಬ್ರೂಕ್ ಕೇವಲ 7 ರನ್​ಗೆ ಔಟಾಗಿ ನಿರ್ಗಮಿಸಿದರೆ, ರಾಹುಲ್ ತ್ರಿಪಾಠಿ 15, ಅಭಿಷೇಕ್ ಶರ್ಮಾ 5 ರನ್​ಗೆ ಔಟಾದರು.

Vinay Bhat
|

Updated on:Apr 25, 2023 | 9:25 AM

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಹೈದರಾಬಾದ್​ನ ರಾಜಿವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡ 7 ವಿಕೆಟ್​ಗಳ ರೋಚಕ ಜಯ ಸಾಧಿಸಿತು.

1 / 7
ಕೆಲ ಬದಲಾವಣೆಯೊಂದಿಗೆ ಮೊದಲು ಬ್ಯಾಟಿಂಗ್ ಮಾಡಲು ಇಳಿದ ಡೆಲ್ಲಿ ಮೊದಲ ಓವರ್​ನಲ್ಲೇ ವಿಕೆಟ್ ಕಳೆದುಕೊಂಡಿತು. ಪೃಥ್ವಿ ಶಾ ಅವರನ್ನು ಕೈಬಿಟ್ಟು ಫಿಲಿಪ್‌ ಸಾಲ್ಟ್ ಅವರನ್ನು ಆರಂಭಿಕನನ್ನಾಗಿ ಇಳಿಸಿದರೂ ಪ್ರಯೋಜನವಾಗಲಿಲ್ಲ. ಅವರು ಗೋಲ್ಡನ್‌ ಡಕ್‌ ಆಗಿ ಮರಳಿದರು.

2 / 7
ಮಿಚೆಲ್ ಮಾರ್ಶ್ 15 ಎಸೆತಗಳಲ್ಲಿ 25 ರನ್ ಗಳಿಸಿದರೆ, ನಾಯಕ ಡೇವಿಡ್ ವಾರ್ನರ್ ಆಟ ಈ ಬಾರಿ 21 ರನ್​ಗೆ ಅಂತ್ಯವಾಯಿತು. ಸರ್ಫರಾಜ್ ಖಾನ್ (10), ಮನೀಶ್ ಪಾಂಡೆ ಮತ್ತು ಅಕ್ಷರ್ ಪಟೇಲ್ ತಲಾ 34 ರನ್​ಗಳ ಕೊಡುಗೆ ನೀಡಿದರು.

3 / 7
ಡೆಲ್ಲಿ ಕ್ಯಾಪಿಟಲ್ಸ್ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 144 ರನ್​ಗಳ ಅಲ್ಪ ಮೊತ್ತ ಕಲೆಹಾಕಿತು. ಹೈದರಾಬಾದ್ ಪರ ವಾಷಿಂಗ್ಟನ್ ಸುಂದರ್ 4 ಓವರ್​ಗೆ 28 ರನ್ ನೀಡಿ 3 ವಿಕೆಟ್ ಕಿತ್ತು ಮಿಂಚಿದರು. ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದರು.

4 / 7
ಸುಲಭ ಟಾರ್ಗೆಟ್ ಬೆನ್ನಟ್ಟಿದ ಸನ್​ರೈಸರ್ಸ್ ತಂಡ ಈ ಬಾರಿ ಕೂಡ ಆರಂಭಿಕ ವೈಫಲ್ಯ ಅನುಭವಿಸಿತು. ಹ್ಯಾರಿ ಬ್ರೂಕ್ ಕೇವಲ 7 ರನ್​ಗೆ ಔಟಾಗಿ ನಿರ್ಗಮಿಸಿದರೆ, ರಾಹುಲ್ ತ್ರಿಪಾಠಿ 15, ಅಭಿಷೇಕ್ ಶರ್ಮಾ 5 ರನ್​ಗೆ ಔಟಾದರು.

5 / 7
ನಾಯಕ ಆ್ಯಡಂ ಮರ್ಕ್ರಮ್ ಕೂಡ 3 ರನ್ ಗಳಿಸಿ ಅಕ್ಷರ್ ಪಟೇಲ್ ಬೌಲಿಂಗ್​ನಲ್ಲಿ ಬೌಲ್ಡ್ ಆದರು. ಮಯಾಂಕ್ ಅಗರ್ವಾಲ್ 49 ರನ್​ಗೆ ಔಟಾದರೆ, ಹೆನ್ರಿಚ್ ಕ್ಲಾಸೆನ್ 31, ವಾಷಿಂಗ್ಟನ್ ಸುಂದರ್ ಅಜೇಯ 24 ರನ್ ಗಳಿಸಿ ಗೆಲುವಿಗೆ ಹೋರಾಡಿದರೂ ಜಯ ದಕ್ಕಲಿಲ್ಲ.

6 / 7
ಸನ್​ರೈಸರ್ಸ್​ ಹೈದರಾಬಾದ್ ತಂಡ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಡೆಲ್ಲಿ ಪರ ಅಕ್ಷರ್ ಪಟೇಲ್ ಹಾಗೂ ಆನ್ರಿಚ್ ನಾರ್ಟ್ಜೆ 2 ವಿಕೆಟ್ ಪಡೆದರು.

7 / 7

Published On - 9:25 am, Tue, 25 April 23

Follow us