- Kannada News Photo gallery Cricket photos Axar Patel all round heroics trumped as Delhi Capitals edged Sunrisers Hyderabad by 7 runs Kannada News
SRH vs DC, IPL 2023: ಹೈದರಾಬಾದ್- ಡೆಲ್ಲಿ ರೋಚಕ ಪಂದ್ಯದ ಫೋಟೋಗಳು ಇಲ್ಲಿದೆ ನೋಡಿ
IPL 2023: ಸುಲಭ ಟಾರ್ಗೆಟ್ ಬೆನ್ನಟ್ಟಿದ ಸನ್ರೈಸರ್ಸ್ ತಂಡ ಈ ಬಾರಿ ಕೂಡ ಆರಂಭಿಕ ವೈಫಲ್ಯ ಅನುಭವಿಸಿತು. ಹ್ಯಾರಿ ಬ್ರೂಕ್ ಕೇವಲ 7 ರನ್ಗೆ ಔಟಾಗಿ ನಿರ್ಗಮಿಸಿದರೆ, ರಾಹುಲ್ ತ್ರಿಪಾಠಿ 15, ಅಭಿಷೇಕ್ ಶರ್ಮಾ 5 ರನ್ಗೆ ಔಟಾದರು.
Updated on:Apr 25, 2023 | 9:25 AM

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೈದರಾಬಾದ್ನ ರಾಜಿವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ 7 ವಿಕೆಟ್ಗಳ ರೋಚಕ ಜಯ ಸಾಧಿಸಿತು.

ಕೆಲ ಬದಲಾವಣೆಯೊಂದಿಗೆ ಮೊದಲು ಬ್ಯಾಟಿಂಗ್ ಮಾಡಲು ಇಳಿದ ಡೆಲ್ಲಿ ಮೊದಲ ಓವರ್ನಲ್ಲೇ ವಿಕೆಟ್ ಕಳೆದುಕೊಂಡಿತು. ಪೃಥ್ವಿ ಶಾ ಅವರನ್ನು ಕೈಬಿಟ್ಟು ಫಿಲಿಪ್ ಸಾಲ್ಟ್ ಅವರನ್ನು ಆರಂಭಿಕನನ್ನಾಗಿ ಇಳಿಸಿದರೂ ಪ್ರಯೋಜನವಾಗಲಿಲ್ಲ. ಅವರು ಗೋಲ್ಡನ್ ಡಕ್ ಆಗಿ ಮರಳಿದರು.

ಮಿಚೆಲ್ ಮಾರ್ಶ್ 15 ಎಸೆತಗಳಲ್ಲಿ 25 ರನ್ ಗಳಿಸಿದರೆ, ನಾಯಕ ಡೇವಿಡ್ ವಾರ್ನರ್ ಆಟ ಈ ಬಾರಿ 21 ರನ್ಗೆ ಅಂತ್ಯವಾಯಿತು. ಸರ್ಫರಾಜ್ ಖಾನ್ (10), ಮನೀಶ್ ಪಾಂಡೆ ಮತ್ತು ಅಕ್ಷರ್ ಪಟೇಲ್ ತಲಾ 34 ರನ್ಗಳ ಕೊಡುಗೆ ನೀಡಿದರು.

ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 144 ರನ್ಗಳ ಅಲ್ಪ ಮೊತ್ತ ಕಲೆಹಾಕಿತು. ಹೈದರಾಬಾದ್ ಪರ ವಾಷಿಂಗ್ಟನ್ ಸುಂದರ್ 4 ಓವರ್ಗೆ 28 ರನ್ ನೀಡಿ 3 ವಿಕೆಟ್ ಕಿತ್ತು ಮಿಂಚಿದರು. ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದರು.

ಸುಲಭ ಟಾರ್ಗೆಟ್ ಬೆನ್ನಟ್ಟಿದ ಸನ್ರೈಸರ್ಸ್ ತಂಡ ಈ ಬಾರಿ ಕೂಡ ಆರಂಭಿಕ ವೈಫಲ್ಯ ಅನುಭವಿಸಿತು. ಹ್ಯಾರಿ ಬ್ರೂಕ್ ಕೇವಲ 7 ರನ್ಗೆ ಔಟಾಗಿ ನಿರ್ಗಮಿಸಿದರೆ, ರಾಹುಲ್ ತ್ರಿಪಾಠಿ 15, ಅಭಿಷೇಕ್ ಶರ್ಮಾ 5 ರನ್ಗೆ ಔಟಾದರು.

ನಾಯಕ ಆ್ಯಡಂ ಮರ್ಕ್ರಮ್ ಕೂಡ 3 ರನ್ ಗಳಿಸಿ ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಮಯಾಂಕ್ ಅಗರ್ವಾಲ್ 49 ರನ್ಗೆ ಔಟಾದರೆ, ಹೆನ್ರಿಚ್ ಕ್ಲಾಸೆನ್ 31, ವಾಷಿಂಗ್ಟನ್ ಸುಂದರ್ ಅಜೇಯ 24 ರನ್ ಗಳಿಸಿ ಗೆಲುವಿಗೆ ಹೋರಾಡಿದರೂ ಜಯ ದಕ್ಕಲಿಲ್ಲ.

ಸನ್ರೈಸರ್ಸ್ ಹೈದರಾಬಾದ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಡೆಲ್ಲಿ ಪರ ಅಕ್ಷರ್ ಪಟೇಲ್ ಹಾಗೂ ಆನ್ರಿಚ್ ನಾರ್ಟ್ಜೆ 2 ವಿಕೆಟ್ ಪಡೆದರು.
Published On - 9:25 am, Tue, 25 April 23
