‘ನನ್ನ ಸಹೋದರನಂತೆ ಕಾಣುವ ಅಪ್ಪನಿಗೆ’; ಕಿಂಗ್ ಕೊಹ್ಲಿಗೆ ಮುದ್ದಾದ ಪತ್ರ ಬರೆದ ಮಗಳು ವಮಿಕಾ

Updated on: Jun 15, 2025 | 8:05 PM

Virat Kohli Daughter: ಜೂನ್ 15ರಂದು ವಿಶ್ವ ತಂದೆಯ ದಿನಾಚರಣೆಯಂದು, ವಿರಾಟ್ ಕೊಹ್ಲಿಯ ಮಗಳು ವಮಿಕಾ ಅವರಿಗೆ ಬರೆದ ಅದ್ಭುತ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಏಳು ಸಾಲುಗಳಲ್ಲಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿರುವ ವಮಿಕಾ, ತಂದೆಯನ್ನು ಹೇಗೆ ಪ್ರೀತಿಸುತ್ತಾಳೆ ಎಂಬುದನ್ನು ವಿವರಿಸಿದ್ದಾಳೆ. ಅನುಷ್ಕಾ ಶರ್ಮಾ ಈ ಪತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

1 / 5
ಜೂನ್ 15 ರಂದು ಪ್ರಪಂಚದಾದ್ಯಂತ ತಂದೆಯ ದಿನವನ್ನು ಆಚರಿಸಲಾಗುತ್ತಿದೆ. ಈ ವಿಶೇಷ ದಿನದಂದು ಮಕ್ಕಳು ತಮ್ಮ ಅಪ್ಪಂದರಿಗೆ ಸ್ಮರಣೀಯ ಉಡುಗೊರೆಗಳನ್ನು ನೀಡುವ ಮೂಲಕ ಅಥವಾ ಪ್ರೀತಿಯ ಮಾತುಗಳ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಹೊರತಾಗಿಲ್ಲ.

2 / 5
ಎರಡು ಮಕ್ಕಳ ತಂದೆಯಾಗಿರುವ ವಿರಾಟ್ ಕೊಹ್ಲಿಗೆ ಅವರ ಮೂರು ವರ್ಷದ ಪುತ್ರಿ ವಮಿಕಾ ವಿಶೇಷ ರೀತಿಯಲ್ಲಿ ಶುಭ ಹಾರೈಸಿದ್ದಾರೆ. ವಮಿಕಾ ತನ್ನ ತಂದೆಯ ಬಗೆಗಿನ ಪ್ರೀತಿಯನ್ನು ಅಕ್ಷರ ರೂಪಕ್ಕಿಳಿಸಿದ್ದು, 7 ಸಾಲುಗಳಲ್ಲಿ ಅಪ್ಪ ಎಷ್ಟು ವಿಶೇಷ ಎಂಬುದನ್ನು ಜಗಜ್ಜಾಹೀರು ಮಾಡಿದ್ದಾರೆ. ಇದೀಗ ಅಪ್ಪನ ಬಗ್ಗೆ ಮಗಳು ಬರೆದಿರುವ ಪ್ರೀತಿಯ ಪದಗಳ ಪತ್ರವನ್ನು ಅನುಷ್ಕಾ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ.

3 / 5
ಪತ್ರದಲ್ಲಿ ವಮಿಕಾ ತನ್ನ ತಂದೆಯನ್ನು ಬಹಳಷ್ಟು ಹೊಗಳಿದ್ದಾರೆ. ಪತ್ರದಲ್ಲಿ ‘ಅವರು ನನ್ನ ಸಹೋದರನಂತೆ ಕಾಣುತ್ತಾರೆ. ಅವರು ತಮಾಷೆಯಾಗಿರುತ್ತಾರೆ. ಅವರು ನನಗೆ ಕಚಗುಳಿ ಇಡುತ್ತಾರೆ. ನಾನು ಅವರಿಗೆ ಮೇಕಪ್ ಮಾಡುತ್ತೇನೆ. ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಅವರು ಕೂಡ ನನ್ನನ್ನು ತುಂಬಾ ಪ್ರೀತಿಸುತ್ತಾರೆ. ತಂದೆಯ ದಿನಾಚರಣೆಯ ಶುಭಾಶಯಗಳು" ಎಂದು ಬರೆಯಲಾಗಿದೆ.

4 / 5
ವಮಿಕಾ ಬರೆದಿರುವ ಈ ಪತ್ರದ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿರುವ ಕೊಹ್ಲಿ ಮಡದಿ ಅನುಷ್ಕಾ ಶರ್ಮಾ ‘ನಾನು ಪ್ರೀತಿಸಿದ ಮೊದಲ ಪುರುಷನಿಗೆ ಮತ್ತು ನಮ್ಮ ಮಗಳು ಪ್ರೀತಿಸಿದ ಮೊದಲ ಪುರುಷನಿಗೆ... ಪ್ರಪಂಚದಾದ್ಯಂತದ ಎಲ್ಲಾ ಸುಂದರ ತಂದೆಗೆ ತಂದೆಯ ದಿನಾಚರಣೆಯ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

5 / 5
ಇನ್ನು ವಿರಾಟ್ ಕೊಹ್ಲಿ ಬಗ್ಗೆ ಹೇಳುವುದಾದರೆ... ಐಪಿಎಲ್‌ನಲ್ಲಿ ಆರ್​ಸಿಬಿ ತಂಡವನ್ನು ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿರುವ ವಿರಾಟ್ ಕೊಹ್ಲಿ, ಪ್ರಸ್ತುತ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಕೊಹ್ಲಿ ಟೆಸ್ಟ್ ಹಾಗೂ ಟಿ20 ಮಾದರಿಗೆ ವಿದಾಯ ಹೇಳಿರುವ ಕಾರಣ, ಅವರು ಏಕದಿನ ಪಂದ್ಯದಲ್ಲಿ ಆಡುವುದನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Published On - 7:29 pm, Sun, 15 June 25