Virat Kohli: ದಾಖಲೆ ಸೃಷ್ಟಿಸಿದ ವಿರಾಟ್ ಕೊಹ್ಲಿಯ ಒಂದೇ ಒಂದು ಪೋಸ್ಟ್
Virat Kohli's Instagram Post: ಇದಕ್ಕಿಂತ ಒಳ್ಳೆಯ ದಿನದ ಕನಸು ಕಾಣಲು ಸಾಧ್ಯವಿರಲಿಲ್ಲ. ದೇವರು ದೊಡ್ಡವನು ಮತ್ತು ನಾನು ಕೃತಜ್ಞತೆಯಿಂದ ತಲೆ ಬಾಗಿಸುತ್ತೇನೆ. ಕೊನೆಗೂ ನಾವು ಗೆದ್ದೆವು ಎಂದು ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಫೋಸ್ಟ್ ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಇದೀಗ ಭಾರತದಲ್ಲಿ ಅತೀ ಹೆಚ್ಚು ಲೈಕ್ಸ್ ಪಡೆದ ಇನ್ಸ್ಟಾಗ್ರಾಮ್ ಪೋಸ್ಟ್ ಎನಿಸಿಕೊಂಡಿದೆ.
1 / 5
ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Virat Kohli) ದಾಖಲೆಗಳ ಮೇಲೆ ದಾಖಲೆ ಬರೆದಿರುವುದು ಗೊತ್ತೇ ಇದೆ. ಆದರೆ ಈ ಬಾರಿ ದಾಖಲೆ ಸೃಷ್ಟಿಯಾಗಿರುವುದು ಮೈದಾನದಲ್ಲಿ ಅಲ್ಲ. ಬದಲಾಗಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಎಂಬುದಷ್ಟೇ ವ್ಯತ್ಯಾಸ. ಅದು ಕೂಡ ಒಂದೇ ಒಂದು ಪೋಸ್ಟ್ ಮೂಲಕ ಎಂಬುದು ವಿಶೇಷ.
2 / 5
ಟಿ20 ವಿಶ್ವಕಪ್ ಗೆದ್ದ ಬಳಿಕ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಹಾಕಿದ ಪೋಸ್ಟ್ವೊಂದು ಇದೀಗ ದಾಖಲೆ ಸೃಷ್ಟಿಸಿದೆ. ಅದು ಸಹ ಅತೀ ಹೆಚ್ಚು ಲೈಕ್ಗಳನ್ನು ಪಡೆಯುವ ಮೂಲಕ. ಅಂದರೆ ಭಾರತದಲ್ಲಿ ಅತೀ ಹೆಚ್ಚು ಲೈಕ್ಸ್ ಪಡೆದ ಇನ್ಸ್ಟಾಗ್ರಾಮ್ ಪೋಸ್ಟ್ ಎನ್ನುವ ಹೆಗ್ಗಳಿಕೆಯು ಇದೀಗ ಕೊಹ್ಲಿ ಹಂಚಿಕೊಂಡ ಫೋಟೋಗಳ ಪಾಲಾಗಿದೆ.
3 / 5
ಇದಕ್ಕೂ ಮುನ್ನ ಈ ದಾಖಲೆ ಬಾಲಿವುಡ್ ತಾರಾ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಹೆಸರಿನಲ್ಲಿತ್ತು. ಈ ಜೋಡಿ ಹಂಚಿಕೊಂಡಿದ್ದ ಮದುವೆಯ ಫೋಟೋಗೆ 1 ಕೋಟಿ 40 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಒತ್ತಿದ್ದರು. ಇದೀಗ ಈ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದಿದ್ದಾರೆ.
4 / 5
ಟಿ20 ವಿಶ್ವಕಪ್ ಅನ್ನು ಎತ್ತಿ ಹಿಡಿದು ಸಂಭ್ರಮಿಸುವ ಫೋಟೋವನ್ನು ಒಳಗೊಂಡಂತೆ ವಿರಾಟ್ ಕೊಹ್ಲಿ ಒಟ್ಟು 4 ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಈಗಾಗಲೇ 18 ಮಿಲಿಯನ್ಗೂ ಅಧಿಕ ಲೈಕ್ಸ್ ಸಿಕ್ಕಿದೆ. ಅಂದರೆ 1 ಕೋಟಿ 83 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆಯುವ ಮೂಲಕ ಭಾರತದಲ್ಲಿ ಅತೀ ಹೆಚ್ಚು ಲೈಕ್ಸ್ ಪಡೆದ ಇನ್ಸ್ಟಾಗ್ರಾಮ್ ಪೋಸ್ಟ್ ಎನಿಸಿಕೊಂಡಿದೆ.
5 / 5
ವಿರಾಟ್ ಕೊಹ್ಲಿ ಹಂಚಿಕೊಂಡಿರುವ ಈ ಪೋಸ್ಟ್ಗೆ ಒಂದು ದಿನದದಲ್ಲಿ 18,303,057 ಲೈಕ್ಸ್ ಸಿಕ್ಕಿದ್ದು, 7 ಲಕ್ಷಕ್ಕೂ ಅಧಿಕ ಮಂದಿ ಕಮೆಂಟ್ ಮಾಡಿದ್ದಾರೆ. ಹೀಗೆ ಲೈಕ್ ಒತ್ತಿದವರಲ್ಲಿ ಖ್ಯಾತನಾಮರಾದ ಮಾಜಿ ಯುಎಫ್‌ಸಿ ಚಾಂಪಿಯನ್ ಕಾನರ್ ಮೆಕ್‌ಗ್ರೆಗರ್ ಮತ್ತು ಫುಟ್‌ಬಾಲ್ ಆಟಗಾರರಾದ ವಿನಿಶಿಯಸ್ ಜೂನಿಯರ್, ಜೂಡ್ ಬೆಲ್ಲಿಂಗ್‌ಹ್ಯಾಮ್, ಸಾಮಾಜಿಕ ಮಾಧ್ಯಮದ ಪ್ರಭಾವಶಾಲಿ IShowSpeed, ನಟ ರಣವೀರ್ ಸಿಂಗ್ ಅವರಂತಹ ಬಾಲಿವುಡ್ ತಾರೆಗಳು ಸೇರಿದ್ದಾರೆ.