ಏಕದಿನ ವಿಶ್ವಕಪ್​ನಲ್ಲಿ ಅಧಿಕ ರನ್ ಬಾರಿಸುವ ಆಟಗಾರನನ್ನು ಹೆಸರಿಸಿದ ಸಿಡಿಲಮರಿ ಸೆಹ್ವಾಗ್

Updated on: Aug 27, 2023 | 2:13 PM

ODI World Cup 2023: ಈ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕುವ ಅವಕಾಶ ಆರಂಭಿಕರಿಗೆ ಸಿಗಲಿದೆ. ಭಾರತದ ಪಿಚ್​ಗಳು ಬ್ಯಾಟಿಂಗ್ ಸ್ನೇಹಿಯಾಗಿವೆ. ಆದ್ದರಿಂದ ಆರಂಭಿಕರಿಗೆ ಇದು ಉತ್ತಮ ಅವಕಾಶ ಎಂದು ನಾನು ಭಾವಿಸುತ್ತೇನೆ. ನನ್ನ ಮನಸ್ಸಿನಲ್ಲಿ ರೋಹಿತ್ ಅಲ್ಲದೆ ಇನ್ನೊಂದೆರಡು ಹೆಸರುಗಳಿವೆ. ಆದರೆ ನಾನು ಭಾರತೀಯನಾಗಿ, ಭಾರತೀಯ ಆಟಗಾರನನ್ನು ಆರಿಸಬೇಕು. ಆದ್ದರಿಂದ ನನ್ನ ಆಯ್ಕೆ ರೋಹಿತ್ ಶರ್ಮಾ’ ಎಂದಿದ್ದಾರೆ.

1 / 8
ವಿಶ್ವಕಪ್ ಸನಿಹವಾಗುತ್ತಿದ್ದಂತೆ ಮಾಜಿ ಕ್ರಿಕೆಟಿಗರು, ಈ ಬಾರಿಯ ವಿಶ್ವಕಪ್ ಗೆಲ್ಲುವ ತನ್ನ ನೆಚ್ಚಿನ ತಂಡ ಹಾಗೂ ಈ ವಿಶ್ವಕಪ್​ಗೆ ತಮ್ಮ ನೆಚ್ಚಿನ ತಂಡದಲ್ಲಿ ಯಾರೆಲ್ಲ ಇರಬೇಕು ಎಂಬುದನ್ನು ಊಹಿಸಲಾರಂಭಿಸಿದ್ದಾರೆ. ಇದೀಗ ಆ ಸಾಲಿಗೆ ಟೀಂ ಇಂಡಿಯಾದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ಸೇರ್ಪಡೆಗೊಂಡಿದ್ದು, ಈ ವಿಶ್ವಕಪ್​ನಲ್ಲಿ ಯಾವ ಆಟಗಾರ ಹೆಚ್ಚು ರನ್ ಕಲೆಹಾಕಲಿದ್ದಾನೆ ಎಂಬ ಪ್ರಶ್ನೆಗೆ ಟೀಂ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮಾ ಅವರ ಹೆಸರನ್ನು ಸೂಚಿಸಿದ್ದಾರೆ.

ವಿಶ್ವಕಪ್ ಸನಿಹವಾಗುತ್ತಿದ್ದಂತೆ ಮಾಜಿ ಕ್ರಿಕೆಟಿಗರು, ಈ ಬಾರಿಯ ವಿಶ್ವಕಪ್ ಗೆಲ್ಲುವ ತನ್ನ ನೆಚ್ಚಿನ ತಂಡ ಹಾಗೂ ಈ ವಿಶ್ವಕಪ್​ಗೆ ತಮ್ಮ ನೆಚ್ಚಿನ ತಂಡದಲ್ಲಿ ಯಾರೆಲ್ಲ ಇರಬೇಕು ಎಂಬುದನ್ನು ಊಹಿಸಲಾರಂಭಿಸಿದ್ದಾರೆ. ಇದೀಗ ಆ ಸಾಲಿಗೆ ಟೀಂ ಇಂಡಿಯಾದ ಮಾಜಿ ಓಪನರ್ ವೀರೇಂದ್ರ ಸೆಹ್ವಾಗ್ ಸೇರ್ಪಡೆಗೊಂಡಿದ್ದು, ಈ ವಿಶ್ವಕಪ್​ನಲ್ಲಿ ಯಾವ ಆಟಗಾರ ಹೆಚ್ಚು ರನ್ ಕಲೆಹಾಕಲಿದ್ದಾನೆ ಎಂಬ ಪ್ರಶ್ನೆಗೆ ಟೀಂ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮಾ ಅವರ ಹೆಸರನ್ನು ಸೂಚಿಸಿದ್ದಾರೆ.

2 / 8

ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಸೆಹ್ವಾಗ್, ಈ ಬಾರಿಯ ವಿಶ್ವಕಪ್​ನಲ್ಲಿ ಪ್ರಸ್ತುತ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರಮುಖ ರನ್ ಗೆಟರ್ ಆಗಲಿದ್ದಾರೆ ಎಂದು ವೀರೇಂದ್ರ ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ.

3 / 8

ಮುಂದುವರೆದು ಮಾತನಾಡಿದ ಸೆಹ್ವಾಗ್, ‘ಈ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕುವ ಅವಕಾಶ ಆರಂಭಿಕರಿಗೆ ಸಿಗಲಿದೆ. ಭಾರತದ ಪಿಚ್​ಗಳು ಬ್ಯಾಟಿಂಗ್ ಸ್ನೇಹಿಯಾಗಿವೆ. ಆದ್ದರಿಂದ ಆರಂಭಿಕರಿಗೆ ಇದು ಉತ್ತಮ ಅವಕಾಶ ಎಂದು ನಾನು ಭಾವಿಸುತ್ತೇನೆ. ನನ್ನ ಮನಸ್ಸಿನಲ್ಲಿ ರೋಹಿತ್ ಅಲ್ಲದೆ ಇನ್ನೊಂದೆರಡು ಹೆಸರುಗಳಿವೆ. ಆದರೆ ನಾನು ಭಾರತೀಯನಾಗಿ, ಭಾರತೀಯ ಆಟಗಾರನನ್ನು ಆರಿಸಬೇಕು. ಆದ್ದರಿಂದ ನನ್ನ ಆಯ್ಕೆ ರೋಹಿತ್ ಶರ್ಮಾ’ ಎಂದಿದ್ದಾರೆ.

4 / 8

ಇನ್ನು ರೋಹಿತ್ ಬಗ್ಗೆ ಮೆಚ್ಚುಗೆಯ ಮಾತನಾಡಿದ ಸೆಹ್ವಾಗ್, ‘ವಿಶ್ವಕಪ್ ಬಂದಾಗ, ರೋಹಿತ್ ಅವರ ಶಕ್ತಿಯ ಮಟ್ಟ, ಅವರ ಪ್ರದರ್ಶನ ಹೆಚ್ಚಾಗುತ್ತದೆ. ಆದ್ದರಿಂದ, ಈ ವಿಶ್ವಕಪ್​ನಲ್ಲಿ ರೋಹಿತ್ ಅದ್ಭುತ ಪ್ರದರ್ಶನ ನೀಡಲಿದ್ದಾರೆ ಎಂದು ನನಗೆ ಖಚಿತವಾಗಿದೆ. ಅಲ್ಲದೆ ಈ ಬಾರಿ ಅವರೇ ತಂಡದ ನಾಯಕರಾಗಿರುವುದರಿಂದ ತಂಡಕ್ಕೆ ಪ್ರಮುಖ ಕೊಡುಗೆ ನೀಡಲಿದ್ದು, ಸಾಕಷ್ಟು ರನ್ ಗಳಿಸುತ್ತಾರೆ ಎಂದು ನನಗೆ ಖಾತ್ರಿಯಿದೆ’ ಎಂದು ಸೆಹ್ವಾಗ್ ಹೇಳಿದ್ದಾರೆ.

5 / 8

ಸೆಹ್ವಾಗ್​ ಹೇಳಿಕೆಗೆ ಪೂರಕವಾಗಿ ರೋಹಿತ್ ಅವರ ವಿಶ್ವಕಪ್ ಪ್ರದರ್ಶನ ಕೂಡ ಇದಕ್ಕೆ ಪುಷ್ಠಿ ನೀಡುತ್ತದೆ. ಇಂಗ್ಲೆಂಡ್​ನಲ್ಲಿ ನಡೆದ 2019 ರ ಏಕದಿನ ವಿಶ್ವಕಪ್​ನಲ್ಲಿ ರೋಹಿತ್ ಇಡೀ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಆಟಗಾರ ಎನಿಸಿಕೊಂಡಿದ್ದರು. ಆಡಿದ ಒಂಬತ್ತು ಪಂದ್ಯಗಳಲ್ಲಿ, ಅವರು ಐದು ಶತಕಗಳನ್ನು ಒಳಗೊಂಡಂತೆ 81 ರ ಸರಾಸರಿಯಲ್ಲಿ 648 ರನ್ ಕಲೆಹಾಕಿದ್ದರು.

6 / 8

ಒಟ್ಟಾರೆಯಾಗಿ ಭಾರತದ ಪರ 244 ಏಕದಿನ ಪಂದ್ಯಗಳನ್ನಾಡಿರುವ ರೋಹಿತ್, 48.69 ರ ಸರಾಸರಿಯಲ್ಲಿ 30 ಶತಕ ಮತ್ತು 48 ಅರ್ಧ ಶತಕಗಳೊಂದಿಗೆ 9837 ರನ್ ಬಾರಿಸಿದ್ದಾರೆ.

7 / 8

ಇನ್ನು ಈ ವರ್ಷ ರೋಹಿತ್ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ 16 ಪಂದ್ಯಗಳನ್ನಾಡಿದ್ದು, ಇದರಲ್ಲಿ 48.57 ಸರಾಸರಿಯಲ್ಲಿ 923 ರನ್ ಕಲೆಹಾಕಿದ್ದಾರೆ. ಇದು ರೋಹಿತ್ ಉತ್ತಮ ಫಾರ್ಮ್​ನಲ್ಲಿರುವ ಸೂಚಕವಾಗಿದ್ದು, ಈ ಮೆಗಾ ಈವೆಂಟ್​ನಲ್ಲಿ ರೋಹಿತ್ ಅಬ್ಬರಿಸುವ ಸಾಧ್ಯತೆಗಳಿವೆ.

8 / 8

ಇನ್ನು ಟೀಂ ಇಂಡಿಯಾ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ವಿಶ್ವಕಪ್ ಪ್ರಯಾಣವನ್ನು ಆರಂಭಿಸಲಿದೆ. ಆ ಬಳಿಕ ಅಕ್ಟೋಬರ್ 14 ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಕದನ ನಡೆಯಲ್ಲಿದೆ.

Loading...
Unable to load recommendations.
Follow Us