- Kannada News Photo gallery Cricket photos Wanindu Hasaranga returns The biggest change will be the RCB playing XI for delhi capitals IPL 2023 Match
RCB Playing XI vs DC: ಇಂದು ವನಿಂದು ಹಸರಂಗ ಕಣಕ್ಕೆ: ಆರ್ಸಿಬಿ ತಂಡದ ಪ್ಲೇಯಿಂಗ್ XI ನಲ್ಲಿ ದೊಡ್ಡ ಬದಲಾವಣೆ
RCB vs DC, IPL 2023: ಐಪಿಎಲ್ 2023 ರಲ್ಲಿಂದು ಆರ್ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ವನಿಂದು ಹಸರಂಗ ಬೆಂಗಳೂರು ತಂಡ ಸೇರಿಕೊಂಡ ಕಾರಣ ಆರ್ಸಿಬಿ ಪ್ಲೇಯಿಂಗ್ ಇಲೆವೆನ್ನಲ್ಲಿ ದೊಡ್ಡ ಬದಲಾವಣೆ ಆಗಲಿದೆ. (ಫೋಟೋ ಕೃಪೆ: RCB Twitter)
Updated on:Apr 15, 2023 | 10:18 AM

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಭರ್ಜರಿ ಶುಭಾರಂಭ ಮಾಡಿದ್ದ ಫಾಪ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಂತರ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿತು.

ಇದೀಗ ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಿಕೊಳ್ಳಲು ಆರ್ಸಿಬಿ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

ಕಳೆದ ಎರಡು ಪಂದ್ಯಗಳಲ್ಲಿ ಆರ್ಸಿಬಿ ಸೋಲಲು ಮುಖ್ಯ ಕಾರಣ ಬೌಲರ್ಗಳು. ಮೊಹಮ್ಮದ್ ಸಿರಾಜ್ ಮತ್ತು ಡೇವಿಡ್ ವಿಲ್ಲೆ ಬಿಟ್ಟರೆ ಉಳಿದ ಬೌಲರ್ಗಳು ದಾರಾಳವಾಗಿ ರನ್ ಬಿಟ್ಟುಕೊಡುತ್ತಿದ್ದಾರೆ. ಹೀಗಾಗಿ ಇಂದಿನ ಪಂದ್ಯದ ಆರ್ಸಿಬಿ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಖಚಿತ.

ಮುಖ್ಯವಾಗಿ ವನಿಂದು ಹಸರಂಗ ಕೆಲ ದಿನಗಳ ಹಿಂದೆ ಆರ್ಸಿಬಿ ಕ್ಯಾಂಪ್ ಸೇರಿದ್ದು ಇಂದು ಪ್ಲೇಯಿಂಗ್ XI ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾದಲ್ಲಿ ಹಿಂದಿನ ಪಂದ್ಯದಲ್ಲಿ ಆಡಿದ ಓರ್ವ ವಿದೇಶಿ ಆಟಗಾರ ಬೆಂಚ್ ಕಾಯಬೇಕು.

ಡೇವಿಡ್ ವಿಲ್ಲೆ ಅಥವಾ ವೇಯ್ನ್ ಪಾರ್ನೆಲ್ ಪೈಕಿ ಒಬ್ಬರನ್ನು ಇಂದಿನ ಪಂದ್ಯದಿಂದ ಹೊರಗಿಡಬೇಕು. ಪಾರ್ನೆಲ್ ಚೊಚ್ಚಲ ಪಂದ್ಯದಲ್ಲಿ 3 ವಿಕೆಟ್ ಪಡೆದುಕೊಂಡಿದ್ದರು. ಆದರೆ, 41 ರನ್ ನೀಡಿದ್ದರು. ಇತ್ತ ವಿಲ್ಲೆ ವಿಕೆಟ್ ಪಡೆದುಕೊಂಡಿಲ್ಲವಾದರೂ ಕಂಟ್ರೊಲ್ ಮಾಡಿದ್ದರು.

ಹೀಗಾಗಿ ವಿಲ್ಲೆ ಅಥವಾ ಪಾರ್ನೆಲ್ ಪೈಕಿ ಯಾರನ್ನು ಹೊರಬಿಡಬೇಕು ಎಂಬುದು ನಾಯಕ ಫಾಫ್ ಡುಪ್ಲೆಸಿಸ್ಗೆ ತಲೆನೋವಾಗಿದೆ. ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ನೋಡುವುದಾದರೆ...

ಆರ್ಸಿಬಿ ಪರ ಓಪನರ್ಗಳಾಗಿ ಎಂದಿನಂತೆ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಪ್ ಡುಪ್ಲೆಸಿಸ್ ಕಣಕ್ಕಿಳಿಯಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಮಹಿಪಾಲ್ ಲೋಮ್ರೋರ್ ಆಡಲಿದ್ದಾರೆ.

ನಾಲ್ಕನೇ ಸ್ಥಾನಕ್ಕೆ ಹೇಳಿ ಮಾಡಿಸಿದ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಇದ್ದರೆ ನಂತರದಲ್ಲಿ ಶಹ್ಬಾಜ್ ಅಹ್ಮದ್ ಆಡಲಿದ್ದಾರೆ. ಫಿನಿಶಿಂಗ್ ಜವಾಬ್ದಾರಿ ದಿನೇಶ್ ಕಾರ್ತಿಕ್ ವಹಿಸಲಿದ್ದಾರೆ. ಅನುಜ್ ರಾವತ್ ಕೂಡ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳಬಹುದು.

ಲಯದಲ್ಲಿರುವ ಡೇವಿಡ್ ವಿಲ್ಲೆ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ವನಿಂದು ಹಸರಂಗ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಪ್ರಮುಖ ವೇಗಿಗಳಿದ್ದಾರೆ.

ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮಹಿಪಾಲ್ ಲೋಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹಮದ್, ದಿನೇಶ್ ಕಾರ್ತಿಕ್ (ನಾಯಕ), ಅನುಜ್ ರಾವತ್, ಡೇವಿಡ್ ವಿಲ್ಲೆ, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.
Published On - 10:17 am, Sat, 15 April 23
