ಭಾರತ-ಶ್ರೀಲಂಕಾ ಪಂದ್ಯಕ್ಕೆ ಇದೆಯಾ ಮಳೆಯ ಕಾಟ?: ಇಲ್ಲಿದೆ ಹವಾಮಾನ ವರದಿ

|

Updated on: Sep 12, 2023 | 9:06 AM

India vs Sri Lanka Colombo Weather Report: ಏಷ್ಯಾಕಪ್​ನಲ್ಲಿ ಇಂದು ನಡೆಯಲಿರುವ ಭಾರತ- ಶ್ರೀಲಂಕಾ ಪಂದ್ಯಕ್ಕೂ ಮಳೆಯ ಭೀತಿ ಎದುರಾಗಿದೆ. ಕೊಲಂಬೊದಲ್ಲಿ ಮಂಗಳವಾರದಂದು ಹವಾಮಾನವು ಮೋಡ ಕವಿದ ವಾತಾವರಣ, ಸಾಂದರ್ಭಿಕ ಮಳೆ ಮತ್ತು ಗುಡುಗು ಸಹಿತ ಮಳೆಯ ಸಾಧ್ಯತೆಯಿಂದ ಕೂಡಿರಲಿದೆ. ಮಳೆಯ ಪ್ರಮಾಣ ಶೇ. 84 ರಷ್ಟಿದೆ.

1 / 7
ಏಷ್ಯಾಕಪ್ 2023 ಟೂರ್ನಿ ರೋಚಕ ಘಟ್ಟದತ್ತ ತಲುಪುತ್ತಿದೆ. ಪಾಕಿಸ್ತಾನ ವಿರುದ್ಧ ಗೆದ್ದ ಬೆನ್ನಲ್ಲೇ ಭಾರತ ಇದೀಗ ಸೂಪರ್-4ನ ನಾಲ್ಕನೇ ಪಂದ್ಯದಲ್ಲಿ ಇಂದು ದಸನ್ ಶನುಕ ನಾಯಕತ್ವದ ಶ್ರೀಲಂಕಾವನ್ನು ಎದುರಿಸಲಿದೆ. ಇಂಡೋ-ಪಾಕ್ ಪಂದ್ಯ ನಡೆದ ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲೇ ಈ ಪಂದ್ಯ ಕೂಡ ನಡೆಯಲಿದೆ.

2 / 7
ಇಂಡೋ-ಲಂಕಾ ಪಂದ್ಯಕ್ಕೂ ಮಳೆಯ ಭೀತಿ ಎದುರಾಗಿದೆ. ಕೊಲಂಬೊದಲ್ಲಿ ಮಂಗಳವಾರದಂದು ಹವಾಮಾನವು ಮೋಡ ಕವಿದ ವಾತಾವರಣ, ಸಾಂದರ್ಭಿಕ ಮಳೆ ಮತ್ತು ಗುಡುಗು ಸಹಿತ ಮಳೆಯ ಸಾಧ್ಯತೆಯಿಂದ ಕೂಡಿರಲಿದೆ. ಮಳೆಯ ಪ್ರಮಾಣ ಶೇ. 84 ರಷ್ಟಿದೆ. ಪಂದ್ಯ ಆರಂಭವಾಗುವ ಸಮಯದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಶೇ. 34ರಷ್ಟಿದೆ.

3 / 7
ಸಮಯ ಕಳೆದಂತೆ ಮಳೆಯ ಪ್ರಮಾಣ ಶೇಕಡಾ 55 ಕ್ಕೆ ಇಳಿಯಲಿದೆ. ಹೀಗಾಗಿ ಆಟ ನಡೆಯಬಹುದು ಎಂದು ಹೇಳಲಾಗಿದೆ. ಆದಾಗ್ಯೂ, ಭಾರತ-ಪಾಕಿಸ್ತಾನದಂತೆ, ಈ ಪಂದ್ಯಕ್ಕೆ ಮೀಸಲು ದಿನವಿಲ್ಲ. ಮಳೆಯಿಂದ ಮ್ಯಾಚ್ ವಾಶ್‌ಔಟ್ ಆಗಿದ್ದರೆ, ಎರಡೂ ತಂಡಗಳು ತಲಾ ಒಂದೊಂದು ಪಾಯಿಂಟ್ ಹಂಚಿಕೊಳ್ಳುತ್ತವೆ.

4 / 7
ಆರ್. ಪ್ರೇಮದಾಸ ಸ್ಟೇಡಿಯಂನ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಪಂದ್ಯ ಸಾಗಿದಂತೆ ಟ್ರ್ಯಾಕ್ ನಿಧಾನವಾಗುತ್ತದೆ, ಆಗ ಬ್ಯಾಟರ್‌ಗಳಿಗೆ ರನ್ ಗಳಿಸಲು ಕಷ್ಟವಾಗುತ್ತದೆ. ಮತ್ತೊಂದೆಡೆ, ವೇಗದ ಬೌಲರ್‌ಗಳು ಕೂಡ ಈ ಮೈದಾನದಲ್ಲಿ ಯಶಸ್ಸು ಸಾಧಿಸುತ್ತಾರೆ. ಪಂದ್ಯದ ಮಧ್ಯದಲ್ಲಿ ಬ್ಯಾಟರ್‌ಗಳಿಗೆ ಈ ಪಿಚ್ ಹೆಚ್ಚು ಸಹಾಯ ಮಾಡಲಿದೆ.

5 / 7
ಟೀಮ್ ಇಂಡಿಯಾ ಬೊಂಬಾಟ್ ಫಾರ್ಮ್​ನಲ್ಲಿದೆ. ಬ್ಯಾಟಿಂಗ್-ಬೌಲಿಂಗ್​ನಲ್ಲಿ ಆಟಗಾರರು ಮಿಂಚುತ್ತಿದ್ದಾರೆ. ಇದಕ್ಕೆ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯವೇ ಸಾಕ್ಷಿ. ಓಪನರ್​ಗಳಾದ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಅರ್ಧಶತಕ ಸಿಡಿಸಿ ಮಿಂಚಿದ್ದರು.

6 / 7
 ವಿರಾಟ್ ಕೊಹ್ಲಿ ಹಾಗೂ ಇಂಜುರಿಯಿಂದ ಕಮ್​ಬ್ಯಾಕ್ ಮಾಡಿದ ಕೆಎಲ್ ರಾಹುಲ್ ಆಕರ್ಷಕ ಶತಕ ಸಿಡಿಸಿ ಅಬ್ಬರಿಸಿದ್ದರು. ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಕೂಡ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಬ್ಯಾಟಿಂಗ್ ಲೈನ್-ಅಪ್ ಬಲಿಷ್ಠವಾಗಿದೆ.

7 / 7
ಬೌಲಿಂಗ್​ನಲ್ಲಿ ಜಸ್​ಪ್ರಿತ್ ಬುಮ್ರಾ ಮಾರಕವಾಗಿ ಗೋಚರಿಸಿದ್ದಾರೆ. ಮೊಹಮ್ಮದ್ ಸಿರಾಜ್ ಕೂಡ ಎದುರಾಳಿಗೆ ಕಂಟಕವಾಗಿದ್ದಾರೆ. ಶಾರ್ದೂಲ್ ಥಾಕೂರ್ ಸಾಥ್ ನೀಡಬೇಕಷ್ಟೆ. ಸ್ಪಿನ್ ವಿಭಾಗದಲ್ಲಿ ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಉತ್ತಮ ಲಯದಲ್ಲಿದ್ದಾರೆ.