- Kannada News Photo gallery Cricket photos When and Where India vs Netherlands ICC ODI World Cup 2023 Warm up match check here
ICC World Cup 2023: ಭಾರತದ ಎರಡನೇ ಅಭ್ಯಾಸ ಪಂದ್ಯ ಯಾವಾಗ?, ಎದುರಾಳಿ ಯಾರು?
India vs Netherlands, ICC World Cup 2023 Warm-up Match: ಟೀಮ್ ಇಂಡಿಯಾಕ್ಕೆ ಇನ್ನೊಂದು ವಾರ್ಮ್ ಅಪ್ ಮ್ಯಾಚ್ ಇದೆ. ಈ ಪಂದ್ಯ ಅಕ್ಟೋಬರ್ 3 ಮಂಗಳವಾರದಂದು ತಿರುವನಂತಪುರಂನ ಗ್ರೀನ್ ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಇಲ್ಲಿ ಭಾರತದ ಎದುರಾಳಿ ನೆದರ್ಲೆಂಡ್ಸ್ ತಂಡ.
Updated on: Oct 01, 2023 | 8:20 AM

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಅಕ್ಟೋಬರ್ 5 ರಂದು ಚಾಲನೆ ಸಿಗಲಿದೆ. ಈಗಾಗಲೇ ಎಲ್ಲ ತಂಡಗಳು ಸಕಲ ಸಿದ್ದತೆ ನಡೆಸುತ್ತಿದ್ದು, ಅಭ್ಯಾಸ ಪಂದ್ಯಗಳನ್ನು ಆಡುತ್ತಿದೆ. ಆದರೆ, ವಾರ್ಮ್-ಅಪ್ನ ಕೆಲ ಪಂದ್ಯಗಳು ಮಳೆಯಿಂದಾಗಿ ರದ್ದಾಯಿತು. ಶನಿವಾರ ಆಯೋಜಿಸಿದ್ದ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮ್ಯಾಚ್ಗೆ ಕೂಡ ವರುಣ ಅಡ್ಡಿಪಡಿಸಿದ.

ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಅಭ್ಯಾಸ ಪಂದ್ಯದ ಟಾಸ್ ಪ್ರಕ್ರಿಯೆ ನಡೆದ ಬಳಿಕ ಮಳೆ ಸುರಿಯಿತು. ಎಷ್ಟು ಹೊತ್ತು ಕಾದರೂ ಮಳೆ ನಿಲ್ಲದ ಕಾರಣ ಬಳಿಕ ಪಂದ್ಯವನ್ನು ರದ್ದು ಮಾಡಲಾಯಿತು.

ಟೀಮ್ ಇಂಡಿಯಾಕ್ಕೆ ಇನ್ನೊಂದು ವಾರ್ಮ್ ಅಪ್ ಮ್ಯಾಚ್ ಇದೆ. ಈ ಪಂದ್ಯ ಅಕ್ಟೋಬರ್ 3 ಮಂಗಳವಾರದಂದು ತಿರುವನಂತಪುರಂನ ಗ್ರೀನ್ ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಇಲ್ಲಿ ಭಾರತದ ಎದುರಾಳಿ ನೆದರ್ಲೆಂಡ್ಸ್ ತಂಡ.

ಭಾರತ-ನೆದರ್ಲೆಂಡ್ಸ್ ನಡುವಿನ ಅಭ್ಯಾಸ ಪಂದ್ಯವು ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ವೀಕ್ಷಿಸಬಹುದು. ಹಾಗೆಯೆ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮ್ ಇರಲಿದೆ.

2023ರ ವಿಶ್ವಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ಉಪ ನಾಯಕ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್.

2023ರ ವಿಶ್ವಕಪ್‌ಗೆ ನೆದರ್ಲೆಂಡ್ಸ್ ತಂಡ: ವಿಕ್ರಮ್‌ಜಿತ್ ಸಿಂಗ್ , ಮ್ಯಾಕ್ಸ್ ಓಡೌಡ್ , ವೆಸ್ಲಿ ಬ್ಯಾರೆಸಿ , ಸ್ಕಾಟ್ ಎಡ್ವರ್ಡ್ಸ್ (ನಾಯಕ) , ಶರೀಜ್ ಅಹ್ಮದ್ , ಆರ್ಯನ್ ದತ್ , ರೋಲೋಫ್ ವ್ಯಾನ್ ಡೆರ್ ಮೆರ್ವೆ , ತೇಜಾ ನಿಡಮನೂರು , ಪಾಲ್ ವಾನ್ ಮೀಕೆರೆನ್, ಲೋಗನ್ ವ್ಯಾನ್ ಬೀಕ್ , ರಿಯಾನ್ ಕ್ಲೈನ್ , ಸೈಬ್ರಂಡ್ ಎಂಗೆಲ್ಝೆಕ್ಬ್ರೆಚ್ , ಕೊಲಿನ್ ಅಕರ್ಮನ್ , ಸಕಿದ್ ಝಲ್ಫಿಕರ್ , ಬಾಸ್ ಡಿ ಲೀಡ್.




