
T20 World Cup 2026: ಟಿ20 ವಿಶ್ವಕಪ್ನಿಂದ ಬಾಂಗ್ಲಾದೇಶ್ ತಂಡ ಹೊರಬಿದ್ದಿದೆ. ಭಾರತದಲ್ಲಿ ಆಡಲು ನಿರಾಕರಿಸಿದ್ದ ಬಾಂಗ್ಲಾದೇಶ್ ತಂಡವನ್ನು ಟಿ20 ವಿಶ್ವಕಪ್ ಪಟ್ಟಿಯಿಂದ ಐಸಿಸಿ ಕೈ ಬಿಟ್ಟಿದೆ. ಅಲ್ಲದೆ ಬಾಂಗ್ಲಾ ಬದಲಿಗೆ ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಲಾಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ್ ಕೂಡ ಟಿ20 ವಿಶ್ವಕಪ್ನಿಂದ ಹೊರಗುಳಿಯುವ ಸುದ್ದಿಗಳು ಹರಿದಾಡುತ್ತಿದೆ.

ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ಗೆ ಬೆಂಬಲವಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಟಿ20 ವಿಶ್ವಕಪ್ನಿಂದ ಹೊರಗುಳಿಯುವ ಸಾಧ್ಯತೆಯಿದೆ. ಇದಕ್ಕೆ ಪುಷ್ಠಿ ನೀಡುವಂತೆ ನಮ್ಮ ಸರ್ಕಾರ ಹೇಳಿದರೆ ಪಾಕಿಸ್ತಾನ್ ತಂಡ ಟಿ20 ವಿಶ್ವಕಪ್ನಲ್ಲಿ ಭಾಗವಹಿಸುವುದಿಲ್ಲ ಎಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದಾರೆ.

ಇತ್ತ ಪಾಕಿಸ್ತಾನ್ ತಂಡ ಹೊರಗುಳಿದರೆ ಯಾವ ತಂಡಕ್ಕೆ ಚಾನ್ಸ್ ಸಿಗಲಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ಒಂದು ತಂಡ ಹೊರಗುಳಿದರೆ ಮತ್ತೊಂದು ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಅದರಂತೆ ಇದೀಗ ಬಾಂಗ್ಲಾದೇಶ್ ಬದಲಿಗೆ ಸ್ಕಾಟ್ಲೆಂಡ್ ತಂಡಕ್ಕೆ ಚಾನ್ಸ್ ಸಿಕ್ಕಿದೆ.

ಅದೇ ರೀತಿ ಪಾಕಿಸ್ತಾನ್ ತಂಡ ಟಿ20 ವಿಶ್ವಕಪ್ನಿಂದ ಹೊರಗುಳಿದರೆ ಉಗಾಂಡ ತಂಡಕ್ಕೆ ಅವಕಾಶ ಸಿಗಲಿದೆ. ಏಕೆಂದರೆ ಟಿ20 ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಉಗಾಂಡ ತಂಡವು 21ನೇ ಸ್ಥಾನದಲ್ಲಿದೆ. ಅಗ್ರ 20 ತಂಡಗಳು ಟಿ20 ವಿಶ್ವಕಪ್ನಲ್ಲಿ ಸ್ಥಾನ ಪಡೆದಿರುವ ಕಾರಣ ಮುಂದಿನ ಅವಕಾಶ ಉಗಾಂಡ ತಂಡಕ್ಕೆ.

ಹೀಗಾಗಿ ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್ನಿಂದ ಹೊರಗುಳಿದರೆ ಉಗಾಂಡ ತಂಡವು ನೇರವಾಗಿ ಆಯ್ಕೆಯಾಗಲಿದೆ. ಇದರಿಂದ 2024ರ ಬಳಿಕ ಉಗಾಂಡ ತಂಡಕ್ಕೆ ಮತ್ತೊಮ್ಮೆ ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲು ಅವಕಾಶ ದೊರೆಯಲಿದೆ.