
ಮೆಲ್ಬೋರ್ನ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಆಟಗಾರರು ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದಿದ್ದರು. ಎಂಸಿಜಿ ಮೈದಾನದಲ್ಲಿ ನಡೆದ ಈ ಪಂದ್ಯದ ಟಾಸ್ ವೇಳೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಬ್ಲ್ಯಾಕ್ ಆರ್ಮ್ಬ್ಯಾಂಡ್ನೊಂದಿಗೆ ಕಾಣಿಸಿಕೊಂಡಿದ್ದರು.

ಇದಾದ ಬಳಿಕ ಇನೀಂಗ್ಸ್ ಆರಂಭಿಸಲು ಆಗಮಿಸಿದ ಅಭಿಷೇಕ್ ಶರ್ಮಾ ಅವರ ತೋಳಿನಲ್ಲೂ ಕಪ್ಪು ಪಟ್ಟಿ ಕಾಣಿಸಿತು. ಅಲ್ಲದೆ ಸಂಜು ಸ್ಯಾಮ್ಸನ್ ಕೂಡ ಕಪ್ಪು ಪಟ್ಟಿಯೊಂದಿಗೆ ಕಣಕ್ಕಿಳಿದಿದ್ದರು. ಅತ್ತ ಆಸ್ಟ್ರೇಲಿಯಾ ಆಟಗಾರರು ಕೂಡ ತಮ್ಮ ಜೆರ್ಸಿಯ ತೋಳಿನಲ್ಲಿ ಬ್ಲ್ಯಾಕ್ ಆರ್ಮ್ಬ್ಯಾಂಡ್ ಧರಿಸಿದ್ದರು.

ಇತ್ತ ಉಭಯ ತಂಡಗಳ ಆಟಗಾರರು ಕಪ್ಪು ತೋಳು ಪಟ್ಟಿ ಧರಿಸಿ ಕಣಕ್ಕಿಳಿಯಲು ಮುಖ್ಯ ಕಾರಣ ಯುವ ಆಟಗಾರ ಬೆನ್ ಆಸ್ಟಿನ್ ಅವರ ದುರ್ಮರಣ. ಆಸ್ಟ್ರೇಲಿಯಾದ 17 ವರ್ಷ ಯುವ ಆಟಗಾರ ಬೆನ್ ಆಸ್ಟಿನ್ ಅಭ್ಯಾಸದ ವೇಳೆ ಚೆಂಡು ಬಡಿದು ಅಕ್ಟೋಬರ್ 30 ಸಾವನ್ನಪ್ಪಿದ್ದರು.

ಬೆನ್ ಆಸ್ಟಿನ್ ಮೆಲ್ಬೋರ್ನ್‌ನ ಈಸ್ಟಸ್ನಲ್ಲಿರುವ ಫರ್ನ್‌ಟ್ರೀ ಕ್ರಿಕೆಟ್ ಕ್ಲಬ್ ಪರ ಕಣಕ್ಕಿಳಿಯುತ್ತಿದ್ದರು. ಅದರಂತೆ ಅಕ್ಟೋಬರ್ 28 ರಂದು ಮುಂದಿನ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ್ದರು. ಬೌಲಿಂಗ್ ಯಂತ್ರದ ಮೂಲಕ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ಚೆಂಡು ಅವರ ಕುತ್ತಿಗೆ ಭಾಗಕ್ಕೆ ಜೋರಾಗಿ ಬಡಿದಿದೆ. ಇದರಿಂದ ಕುಸಿದು ಬಿದ್ದ ಆಸ್ಟಿನ್ ಅವರನ್ನು ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ ಬೆನ್ ಆಸ್ಟಿನ್ ಅಕ್ಟೋಬರ್ 30 ರಂದು ನಿಧನರಾಗಿದ್ದರು.

ಬೆನ್ ಆಸ್ಟಿನ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಭಾರತ ಮತ್ತು ಆಸ್ಟ್ರೇಲಿಯಾ ಆಟಗಾರರು ಅಕ್ಟೋಬರ್ 31 ರಂದು ನಡೆದ ದ್ವಿತೀಯ ಟಿ20 ಪಂದ್ಯದ ವೇಳೆ ಕಪ್ಪು ತೋಳು ಪಟ್ಟಿ ಧರಿಸಿ ಕಣಕ್ಕಿಳಿದಿದ್ದರು. ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 125 ರನ್ಗಳಿಸಿ ಆಲೌಟ್ ಆದರೆ, ಈ ಗುರಿಯನ್ನು ಆಸ್ಟ್ರೇಲಿಯಾ 13.2 ಓವರ್ಗಳಲ್ಲಿ ಚೇಸ್ ಮಾಡಿ 4 ವಿಕೆಟ್ಗಳ ಜಯ ಸಾಧಿಸಿದೆ.