WI vs SA: 43 ಎಸೆತಗಳಲ್ಲಿ ಸುನಾಮಿ ಬ್ಯಾಟಿಂಗ್; ಆಫ್ರಿಕಾ ಪರ ಚೊಚ್ಚಲ ಟಿ20 ಶತಕ ಸಿಡಿಸಿದ ಡಿಕಾಕ್!

|

Updated on: Mar 26, 2023 | 10:44 PM

WI vs SA: ತಮ್ಮ ಇನ್ನಿಂಗ್ಸ್​ನಲ್ಲಿ 44 ಎಸೆತ ಎದುರಿಸಿದ ಕ್ವಿಂಟನ್ 9 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 100 ರನ್ ಚಚ್ಚಿದರು. ಇದರೊಂದಿಗೆ ದಕ್ಷಿಣ ಆಫ್ರಿಕಾ ಪರ ಮೊದಲ ಟಿ20 ಶತಕ ಸಿಡಿಸಿದ ದಾಖಲೆ ಬರೆದರು.

1 / 5
ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್ ಮೈದಾನದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಉಭಯ ತಂಡಗಳಿಂದ ರನ್​ ಮಳೆಯೇ ಹರಿದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ ಜಾನ್ಸನ್ ಚಾರ್ಲ್ಸ್ ಅವರ ದಾಖಲೆಯ ಶತಕದ ಆಧಾರದ ಮೇಲೆ 258 ರನ್‌ಗಳ ದೊಡ್ಡ ಸ್ಕೋರ್ ಗಳಿಸಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಇನ್ನು 7 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ಸೇರಿತು. ಆಫ್ರಿಕಾ ಪರ ದಾಖಲೆಯ ಶತಕ ಸಿಡಿಸಿದ ಕ್ವಿಂಟನ್ ಡಿಕಾಕ್ ಗೆಲುವಿನ ಹೀರೋ ಎನಿಸಿಕೊಂಡರು.

2 / 5
ಮೊದಲ ಟಿ20 ಪಂದ್ಯದಲ್ಲಿ 0 ರನ್ ಗಳಿಸಿ ಔಟಾಗಿದ್ದ ಡಿಕಾಕ್, 2ನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೇವಲ 43 ಎಸೆತಗಳಲ್ಲಿ ಅಬ್ಬರದ ಶತಕ ಬಾರಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 44 ಎಸೆತ ಎದುರಿಸಿದ ಕ್ವಿಂಟನ್ 9 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 100 ರನ್ ಚಚ್ಚಿದರು. ಇದರೊಂದಿಗೆ ದಕ್ಷಿಣ ಆಫ್ರಿಕಾ ಪರ ಮೊದಲ ಟಿ20 ಶತಕ ಸಿಡಿಸಿದ ದಾಖಲೆ ಬರೆದರು.

3 / 5
ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್ ಮಾಡಿದ ಡಿಕಾಕ್, ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಇದು ದಕ್ಷಿಣ ಆಫ್ರಿಕಾ ಪರ ಟಿ20 ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸಿಡಿದ ಅತಿವೇಗದ ಅರ್ಧಶತಕ ಎಂಬ ಹೊಸ ದಾಖಲೆಯಾಯಿತು.

4 / 5
ವಾಸ್ತವವಾಗಿ ಡಿ ಕಾಕ್ ಒಂದು ಹಂತದಲ್ಲಿ ಬ್ಯಾಟಿಂಗ್ ಮಾಡಿದ್ದನ್ನು ನೋಡಿದಾಗ ಟಿ20 ಕ್ರಿಕೆಟ್​ನ ಅತಿ ವೇಗದ ಶತಕ ಸಿಡಿಸುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಶತಕದಂಚಿನಲ್ಲಿ ಡಿ ಕಾಕ್ ಅವರ ಬ್ಯಾಟ್ ಸೈಲೆಂಟ್ ಆಯಿತು. ಹೀಗಾಗಿ ಅವರು 43 ನೇ ಎಸೆತದಲ್ಲಿ ಶತಕವನ್ನು ಪೂರ್ಣಗೊಳಿಸಿದರು.

5 / 5
ಇದಲ್ಲದೆ ಡಿಕಾಕ್ ತಮ್ಮ ಸಹ ಆರಂಭಿಕ ಆಟಗಾರ ರೀಜಾ ಹೆಂಡ್ರಿಕ್ಸ್ ಅವರೊಂದಿಗೆ ಕೇವಲ 10.5 ಓವರ್‌ಗಳಲ್ಲಿ 152 ರನ್‌ಗಳ ಸ್ಫೋಟಕ ಜೊತೆಯಾಟವನ್ನು ಮಾಡಿದರು.  ಡಿಕಾಕ್ ಔಟಾದ ನಂತರ, ಹೆಂಡ್ರಿಕ್ಸ್ ಮತ್ತು ಕ್ಯಾಪ್ಟನ್ ಮಾರ್ಕ್ರಾಮ್ ಕೂಡ ವೇಗವಾಗಿ ಬ್ಯಾಟಿಂಗ್ ಮಾಡಿ ದಕ್ಷಿಣ ಆಫ್ರಿಕಾ ತಂಡವನ್ನು ಗೆಲುವಿನ ದಡ ಸೇರಿಸಿದರು.