Women’s Ashes 2023: ಆ್ಯಶಸ್​ನಲ್ಲಿ ದ್ವಿಶತಕ ಸಿಡಿಸಿ ದಾಖಲೆ ಬರೆದ ಟಮ್ಮಿ ಬ್ಯೂಮೊಂಟ್..!

|

Updated on: Jun 25, 2023 | 7:31 AM

Women's Ashes 2023: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವೆ ನಡೆಯುತ್ತಿರುವ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ ಟಮ್ಮಿ ಬ್ಯೂಮೊಂಟ್ ದ್ವಿಶತಕ ಸಿಡಿಸಿದ್ದಾರೆ.

1 / 8
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವೆ ನಡೆಯುತ್ತಿರುವ ಆಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ ಟಮ್ಮಿ ಬ್ಯೂಮೊಂಟ್ ದ್ವಿಶತಕ ಸಿಡಿಸಿದ್ದಾರೆ. ಇದು ಟೆಸ್ಟ್‌ನಲ್ಲಿ ಅವರ ಮೊದಲ ದ್ವಿಶತಕವಾಗಿದೆ, ಜೊತೆಗೆ ಟೆಸ್ಟ್‌ನಲ್ಲಿ ಇಂಗ್ಲಿಷ್ ಮಹಿಳಾ ಬ್ಯಾಟರ್ ಸಿಡಿಸಿದ ಮೊದಲ ದ್ವಿಶತಕವಾಗಿದೆ.

2 / 8
ಇದು ಬ್ಯೂಮೊಂಟ್ ಅವರ ಸತತ ಎರಡನೇ ದ್ವಿಶತಕವಾಗಿದೆ. ಅವರು ಈ ಹಿಂದೆ ಡರ್ಬಿಯಲ್ಲಿ ಜೂನ್ 15 ಮತ್ತು 17 ರ ನಡುವೆ ನಡೆದ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ದ್ವಿಶತಕ ಬಾರಿಸಿದ್ದರು. ಆ ಪಂದ್ಯದಲ್ಲಿ ಬ್ಯೂಮೊಂಟ್ 201 ರನ್ ಸಿಡಿಸಿದ್ದರು.

3 / 8
ವಾಸ್ತವವಾಗಿ ಇದು ಟಮ್ಮಿ ಅವರ ಎಂಟನೇ ಟೆಸ್ಟ್ ಪಂದ್ಯವಾಗಿದೆ. ಈ ಪಂದ್ಯಕ್ಕೂ ಮುನ್ನ ಅವರ ಅತ್ಯುತ್ತಮ ಸ್ಕೋರ್ 70 ರನ್ ಆಗಿತ್ತು. ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಈ ಪಂದ್ಯದಲ್ಲಿ ಟಮ್ಮಿ ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ಶತಕ ಸಿಡಿಸಿದ್ದು ಅದನ್ನು ದ್ವಿಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.

4 / 8
ಟಮ್ಮಿ ಅವರ ಈ ಇನ್ನಿಂಗ್ಸ್ ಆಧಾರದ ಮೇಲೆ ಇಂಗ್ಲೆಂಡ್ ಈ ಟೆಸ್ಟ್​ನಲ್ಲಿ ಭಿಗಿ ಹಿಡಿತ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 473 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಈ ಗುರಿ ಬೆನ್ನಟಗಟಿದ ಇಂಗ್ಲೆಂಡ್ 463 ರನ್​ಗಳಿಗೆ ಆಲೌಟ್ ಆಯಿತು.

5 / 8
ಆಸೀಸ್ ವಿರುದ್ಧ ದ್ವಿಶತಕ ಸಿಡಿಸುವುದರೊಂದಿಗೆ ಬ್ಯೂಮೊಂಟ್, ಮಹಿಳಾ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಎಂಟನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

6 / 8
ಬ್ಯೂಮೊಂಟ್ ಹೊರತಾಗಿ ಇಂಗ್ಲೆಂಡ್ ಪರ ನ್ಯಾಟ್ ಶಿವರ್ ಮತ್ತು ನಾಯಕಿ ಹೀದರ್ ನೈಟ್ ತಲಾ ಅರ್ಧಶತಕ ಸಿಡಿಸಿದರು. ಇದರಲ್ಲಿ ಬ್ಯೂಮೊಂಟ್, ಶಿವರ್ ಅವರೊಂದಿಗೆ 137 ರನ್​ಗಳ ಜೊತೆಯಾಟವನ್ನು ಹಂಚಿಕೊಂಡರು. ಇದಕ್ಕೂ ಮುನ್ನ ಅವರು ನೈಟ್ ಅವರ ಜೊತೆ 115 ರನ್ ಜೊತೆಯಾಟವನ್ನು ಹಂಚಿಕೊಂಡಿದ್ದರು.

7 / 8
ಬ್ಯೂಮೊಂಟ್ 208 ರನ್​ಗಳ ವೈಯಕ್ತಿಕ ಸ್ಕೋರ್​ನಲ್ಲಿ ಆಶ್ಲೇ ಗಾರ್ಡ್ನರ್​ಗೆ ಬಲಿಯಾದರು. ಇದರೊಂದಿಗೆ ಇಂಗ್ಲೆಂಡ್ ತಂಡ 463 ರನ್​ಗಳಿಗೆ ಆಲೌಟ್ ಆಯಿತು. ಟಮ್ಮಿ ಅವರು ತಮ್ಮ ಇನ್ನಿಂಗ್ಸ್​ನಲ್ಲಿ 331 ಎಸೆತಗಳನ್ನು ಎದುರಿಸಿ 27 ಬೌಂಡರಿಗಳ ಸಹಿತ 201 ರನ್ ಕಲೆಹಾಕಿದರು.

8 / 8
ಇನ್ನು ಆಸೀಸ್ ಇನ್ನಿಂಗ್ಸ್ ನೋಡುವುದಾದರೆ, ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿತು. ಆಸೀಸ್ ಪರ ಅನ್ನಾಬೆಲ್ ಅದ್ಭುತ ಶತಕ ಬಾರಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 184 ಎಸೆತಗಳನ್ನು ಎದುರಿಸಿದ ಅವರು 16 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 137 ರನ್ ಬಾರಿಸಿದರು. ಅವರಲ್ಲದೆ ಅಲಿಸ್ಸಾ ಪೆರಿ 99 ರನ್​ಗಳಿಗೆ ವಿಕೆಟ್ ಒಪ್ಪಿಸಿ 1 ರನ್​ಗಳಿಂದ ಶತಕ ವಂಚಿತರಾದರು. ತಹಿಲಾ ಮೆಕ್‌ಗ್ರಾತ್ 61 ರನ್‌ಗಳ ಇನಿಂಗ್ಸ್‌ ಆಡಿದರು.

Published On - 7:29 am, Sun, 25 June 23