TNPL 2023: 10 ಫೋರ್​, 5 ಸಿಕ್ಸ್​ನೊಂದಿಗೆ ಅರುಣ್ ಅಬ್ಬರದ ಶತಕ..!

Nellai Royal Kings vs Chepauk Super Gillies: ಈ ಪಂದ್ಯದಲ್ಲಿ ಟಾಸ್ ಗೆದ್ದ ಚೆಪಾಕ್ ಸೂಪರ್ ಗಿಲ್ಲೀಸ್ ತಂಡದ ನಾಯಕ ಜಗದೀಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

TV9 Web
| Updated By: ಝಾಹಿರ್ ಯೂಸುಫ್

Updated on: Jun 24, 2023 | 11:02 PM

TNPL 2023: ತಮಿಳುನಾಡು ಪ್ರೀಮಿಯರ್ ಲೀಗ್​ನ 14ನೇ ಪಂದ್ಯದಲ್ಲಿ ನೆಲ್ಲೈ ರಾಯಲ್ ಕಿಂಗ್ಸ್ ತಂಡದ ನಾಯಕ ಅರುಣ್ ಕಾರ್ತಿಕ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಚೆಪಾಕ್ ಸೂಪರ್ ಗಿಲ್ಲೀಸ್ ತಂಡದ ನಾಯಕ ಜಗದೀಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

1 / 7
ಆದರೆ ಚೆಪಾಕ್ ಸೂಪರ್ ಗಿಲ್ಲೀಸ್ ತಂಡಕ್ಕೆ ನಿರೀಕ್ಷಿತ ಆರಂಭ ದೊರೆತಿರಲಿಲ್ಲ. ಆರಂಭಿಕರಾದ ಪ್ರದೋಶ್ ಪೌಲ್ (2) ಹಾಗೂ ಎನ್ ಜಗದೀಸನ್ (15) ಬೇಗನೆ ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಾಬಾ ಅಪರಜಿತ್ ತಂಡಕ್ಕೆ ಆಸರೆಯಾದರು.

2 / 7
ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಅಪರಜಿತ್ ಆ ಬಳಿಕ ರನ್​ ಗತಿ ಹೆಚ್ಚಿಸಲು ಮುಂದಾದರು. ಅದರಂತೆ 5 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ನೊಂದಿಗೆ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದರು. ಅಲ್ಲದೆ 51 ಎಸೆತಗಳಲ್ಲಿ 79 ರನ್​ ಬಾರಿಸಿದರು. ಅಪರಜಿತ್ ಅವರ ಈ ಅರ್ಧಶತಕದ ನೆರವಿನಿಂದ ಚೆಪಾಕ್ ಸೂಪರ್ ಗಿಲ್ಲೀಸ್ ತಂಡವು 7 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿತು.

3 / 7
160 ರನ್​ಗಳ ಸ್ಪರ್ಧಾತ್ಮಕ ಗುರಿ ಪಡೆದ ನೆಲ್ಲೈ ರಾಯಲ್ ಕಿಂಗ್ಸ್ ತಂಡಕ್ಕೆ ನಾಯಕ ಅರುಣ್ ಕಾರ್ತಿಕ್ ಬಿರುಸಿನ ಆರಂಭ ಒದಗಿಸಿದ್ದರು. ಮೊದಲ ಓವರ್​ನಿಂದಲೇ ಸ್ಪೋಟಕ ಬ್ಯಾಟಿಂಗ್​ಗೆ ಒತ್ತು ನೀಡಿದ ಅರುಣ್ ಚೆಪಾಕ್ ಬೌಲರ್​ಗಳ ಬೆಂಡೆತ್ತಿದರು.

4 / 7
ಪರಿಣಾಮ ಅರುಣ್ ಕಾರ್ತಿಕ್ ಬ್ಯಾಟ್​ನಿಂದ 10 ಫೋರ್ ಹಾಗೂ 4 ಸಿಕ್ಸ್​ಗಳು ಮೂಡಿಬಂತು. ಅಲ್ಲದೆ ತಂಡದ ಗೆಲುವಿಗೆ 5 ರನ್​ಗಳು ಬೇಕಿದ್ದ ವೇಳೆ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ 61 ಎಸೆತಗಳಲ್ಲಿ ಶತಕ ಪೂರೈಸಿದರು.

5 / 7
ಅರುಣ್ ಕಾರ್ತಿಕ್ ಅವರ ಈ ಸೆಂಚುರಿ ಇನಿಂಗ್ಸ್​ ನೆರವಿನಿಂದ ನೆಲ್ಲೈ ರಾಯಲ್ ಕಿಂಗ್ಸ್ ತಂಡವು 18.5 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 160 ರನ್​ಗಳಿಸಿ 8 ವಿಕೆಟ್​ಗಳ ಭರ್ಜರಿ ಜಯ ತನ್ನದಾಗಿಸಿಕೊಂಡಿತು.

6 / 7
ಇನ್ನು ಸೆಂಚುರಿ ಸಿಡಿಸಿ ಮಿಂಚಿದ ಅರುಣ್ ಕಾರ್ತಿಕ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.

7 / 7
Follow us