Updated on: Jun 24, 2023 | 8:59 PM
ಲಂಡನ್ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ಅರ್ಧಶತಕ ಬಾರಿಸುವ ಮೂಲಕ ಜೋಸ್ ಬಟ್ಲರ್ ಟಿ20 ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ್ದಾರೆ.
ಡರ್ಬಿಶೈರ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಲಂಕಾಶೈರ್ ಪರ ಕಣಕ್ಕಿಳಿದ ಬಟ್ಲರ್ ಕೇವಲ 39 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್ನೊಂದಿಗೆ ಒಟ್ಟು 89 ರನ್ ಬಾರಿಸಿದರು. ಇದರೊಂದಿಗೆ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಕಲೆಹಾಕಿದ ವಿಶ್ವದ 9ನೇ ಬ್ಯಾಟರ್ ಎನಿಸಿಕೊಂಡರು.
ಇದಕ್ಕೂ ಮುನ್ನ ಈ ಸಾಧನೆ ಮಾಡಿದ ಬ್ಯಾಟರ್ಗಳ ಪಟ್ಟಿ ಈ ಕೆಳಗಿನಂತಿದೆ...
1- ಕ್ರಿಸ್ ಗೇಲ್: ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಯುನಿವರ್ಸ್ ಬಾಸ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ವೆಸ್ಟ್ ಇಂಡೀಸ್ ಅಲ್ಲದೆ ಐಪಿಎಲ್, ಸಿಪಿಎಲ್, ಬಿಪಿಎಲ್ ಸೇರಿದಂತೆ ಹಲವು ಟಿ20 ಲೀಗ್ನಲ್ಲಿ ಬ್ಯಾಟ್ ಬೀಸಿರುವ ಗೇಲ್ 455 ಇನಿಂಗ್ಸ್ಗಳಲ್ಲಿ ಒಟ್ಟು 14562 ರನ್ ಕಲೆಹಾಕಿದ್ದಾರೆ.
2- ಶೊಯೇಬ್ ಮಲಿಕ್: ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವುದು ಪಾಕಿಸ್ತಾನದ ಶೊಯೇಬ್ ಮಲಿಕ್. ಪಾಕ್ ಪರ ಅಲ್ಲದೆ, ಐಪಿಎಲ್, ಬಿಪಿಎಲ್, ಸಿಪಿಎಲ್ ಸೇರಿದಂತೆ ಹಲವು ಲೀಗ್ನಲ್ಲಿ 474 ಇನಿಂಗ್ಸ್ ಆಡಿರುವ ಮಲಿಕ್ ಒಟ್ಟು 12528 ರನ್ ಕಲೆಹಾಕಿದ್ದಾರೆ.
3- ಕೀರನ್ ಪೊಲಾರ್ಡ್: ಐಪಿಎಲ್, ಸಿಪಿಎಲ್, ಬಿಪಿಎಲ್ ಸೇರಿದಂತೆ ವಿಶ್ವದ ಪ್ರಮುಖ ಟಿ20 ಟೂರ್ನಿಗಳಲ್ಲಿ ಕಾಣಿಸಿಕೊಂಡಿರುವ ವೆಸ್ಟ್ ಇಂಡೀಸ್ನ ಕೀರನ್ ಪೊಲಾರ್ಡ್ 555 ಇನಿಂಗ್ಸ್ಗಳಿಂದ 12175 ರನ್ಗಳಿಸಿದ್ದಾರೆ.
4- ವಿರಾಟ್ ಕೊಹ್ಲಿ: ಟೀಮ್ ಇಂಡಿಯಾ, ದೆಹಲಿ ಹಾಗೂ ಆರ್ಸಿಬಿ ಪರ 367 ಟಿ20 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ ಒಟ್ಟು 11965 ರನ್ ಕಲೆಹಾಕಿದ್ದಾರೆ.
5- ಡೇವಿಡ್ ವಾರ್ನರ್: ಆಸ್ಟ್ರೇಲಿಯಾ ಪರ ಅಲ್ಲದೆ, ಐಪಿಎಲ್, ಬಿಬಿಎಲ್ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಬ್ಯಾಟ್ ಬೀಸಿರುವ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 355 ಇನಿಂಗ್ಸ್ಗಳಿಂದ ಒಟ್ಟು 11695 ರನ್ಗಳಿಸಿದ್ದಾರೆ.
6- ಆರೋನ್ ಫಿಂಚ್: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಆರೋನ್ ಫಿಂಚ್ ಐಪಿಎಲ್ ಹಾಗೂ ಬಿಬಿಎಲ್ನಲ್ಲೂ ಕಾಣಿಸಿಕೊಂಡಿದ್ದರು. ಈ ಮೂಲಕ 376 ಇನಿಂಗ್ಸ್ಗಳಿಂದ ಒಟ್ಟು 11392 ರನ್ ಕಲೆಹಾಕಿದ್ದಾರೆ.
7- ಅಲೆಕ್ಸ್ ಹೇಲ್ಸ್: ಐಪಿಎಲ್, ಟಿ20 ಬ್ಲಾಸ್ಟ್ ಸೇರಿದಂತೆ ಒಟ್ಟು 398 ಇನಿಂಗ್ಸ್ ಆಡಿರುವ ಇಂಗ್ಲೆಂಡ್ನ ಅಲೆಕ್ಸ್ ಹೇಲ್ಸ್ ಒಟ್ಟು 11214 ರನ್ಗಳಿಸಿದ್ದಾರೆ.
8- ರೋಹಿತ್ ಶರ್ಮಾ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾರತ, ಭಾರತ ಎ ಹಾಗೂ ಐಪಿಎಲ್ ತಂಡಗಳ ಪರ ಒಟ್ಟು 410 ಇನಿಂಗ್ಸ್ ಆಡಿದ್ದು, ಈ ವೇಳೆ 11035 ರನ್ ಕಲೆಹಾಕಿದ್ದಾರೆ.
9- ಜೋಸ್ ಬಟ್ಲರ್: ಇಂಗ್ಲೆಂಡ್ ಪರ ಅಲ್ಲದೆ ಜೋಸ್ ಬಟ್ಲರ್ ಐಪಿಎಲ್, ಟಿ20 ಬ್ಲಾಸ್ಟ್, ಇಂಗ್ಲೆಂಡ್ ಸೇರಿದಂತೆ ಹಲವು ಟೂರ್ನಿಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ಮೂಲಕ 350 ಇನಿಂಗ್ಸ್ಗಳಿಂದ ಒಟ್ಟು 10080 ರನ್ಗಳಿಸಿದ್ದಾರೆ.