ICC World Cup Qualifiers 2023: ವೆಸ್ಟ್ ಇಂಡೀಸ್​ ತಂಡವನ್ನು ಮಕಾಡೆ ಮಲಗಿಸಿದ ಝಿಂಬಾಬ್ವೆ

ICC World Cup Qualifiers 2023: ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ ಪರ ನಾಯಕ ಕ್ರೇಗ್ ಇರ್ವಿನ್ 58 ಎಸೆತಗಳಲ್ಲಿ 47 ರನ್ ಬಾರಿಸಿದ್ದರು. ಹಾಗೆಯೇ ಮಧ್ಯಮ ಕ್ರಮಾಂಕದಲ್ಲಿ ಸಿಕಂದರ್ ರಾಝ ಹಾಗೂ ರಯಾನ್ ಬರ್ಲ್ ಅದ್ಭುತ ಇನಿಂಗ್ಸ್ ಆಡಿದ್ದರು.

TV9 Web
| Updated By: ಝಾಹಿರ್ ಯೂಸುಫ್

Updated on: Jun 24, 2023 | 9:59 PM

ICC World Cup Qualifiers 2023: ಹರಾರೆಯಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ವಿರುದ್ಧ ಝಿಂಬಾಬ್ವೆ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ಶಾಯ್ ಹೋಪ್ ಬೌಲಿಂಗ್ ಆಯ್ದುಕೊಂಡಿದ್ದರು.

1 / 7
ಅದರಂತೆ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ ಪರ ನಾಯಕ ಕ್ರೇಗ್ ಇರ್ವಿನ್ 58 ಎಸೆತಗಳಲ್ಲಿ 47 ರನ್ ಬಾರಿಸಿದ್ದರು. ಹಾಗೆಯೇ ಮಧ್ಯಮ ಕ್ರಮಾಂಕದಲ್ಲಿ ಸಿಕಂದರ್ ರಾಝ ಹಾಗೂ ರಯಾನ್ ಬರ್ಲ್ ಅದ್ಭುತ ಇನಿಂಗ್ಸ್ ಆಡಿದ್ದರು.

2 / 7
ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಸಿಕಂದರ್ ರಾಝ 58 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್​ನೊಂದಿಗೆ 68 ರನ್ ಬಾರಿಸಿದರೆ, ರಯಾನ್ ಬರ್ಲ್ 57 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್​ನೊಂದಿಗೆ 50 ರನ್ ಕಲೆಹಾಕಿದರು. ಪರಿಣಾಮ 49.5 ಓವರ್​ಗಳಲ್ಲಿ ಝಿಂಬಾಬ್ವೆ ತಂಡವು 268 ರನ್​ ಕಲೆಹಾಕಿ ಆಲೌಟ್ ಆಯಿತು.

3 / 7
269 ರನ್​ಗಳ ಸುಲಭ ಗುರಿ ಪಡೆದ ವೆಸ್ಟ್ ಇಂಡೀಸ್ ತಂಡಕ್ಕೆ ಕೈಲ್ ಮೇಯರ್ಸ್ (56) ಉತ್ತಮ ಆರಂಭ ಒದಗಿಸಿದ್ದರು. ಆದರೆ ಝಿಂಬಾಬ್ವೆ ಬೌಲರ್​ಗಳ ಕರಾರುವಾಕ್ ದಾಳಿ ಮುಂದೆ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ಕ್ರೀಸ್​ ಕಚ್ಚಿ ನಿಲ್ಲಲು ಪರದಾಡಿದರು.

4 / 7
ಪರಿಣಾಮ 44.4 ಓವರ್​ಗಳಲ್ಲಿ 233 ರನ್​ಗಳಿಸಿ ವೆಸ್ಟ್ ಇಂಡೀಸ್​ ಸರ್ವಪತನ ಕಂಡಿತು. ಈ ಮೂಲಕ ಝಿಂಬಾಬ್ವೆ ತಂಡವು 35 ರನ್​ಗಳ ಭರ್ಜರಿ ಗೆಲುವನ್ನು ತನ್ನದಾಗಿಸಿಕೊಂಡಿದೆ.

5 / 7
ಝಿಂಬಾಬ್ವೆ ಪರ ತೆಂಡೈ ಚಟಾರ 9.4 ಓವರ್​ಗಳಲ್ಲಿ 52 ರನ್ ನೀಡಿ 3 ವಿಕೆಟ್ ಪಡೆದರೆ, ಬ್ಲೆಸ್ಸಿಂಗ್ ಮುಜರಬಾನಿ ಹಾಗೂ ಸಿಕಂದರ್ ರಾಝ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.

6 / 7
ಹಾಗೆಯೇ ಆಲ್​ರೌಂಡರ್ ಪ್ರದರ್ಶನ ನೀಡುವ ಮೂಲಕ ಮಿಂಚಿದ ಸಿಕಂದರ್ ರಾಝ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

7 / 7
Follow us