Team India: ಶುಭ್​ಮನ್ ಗಿಲ್ ಸ್ಥಾನ ಪಲ್ಲಟ: ಯಶಸ್ವಿ ಜೈಸ್ವಾಲ್​ಗೆ ಮುಂಬಡ್ತಿ..!

India Test Squad: ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್).

TV9 Web
| Updated By: ಝಾಹಿರ್ ಯೂಸುಫ್

Updated on: Jun 24, 2023 | 7:08 PM

India vs West Indies: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾವನ್ನು (Team India) ಆಯ್ಕೆ ಮಾಡಲಾಗಿದೆ. 16 ಸದಸ್ಯರ ಈ ಬಳಗದಲ್ಲಿ ಹೊಸ ಮುಖಗಳಾಗಿ ರುತುರಾಜ್ ಗಾಯಕ್ವಾಡ್ (Ruturaj Gaikwad) ಹಾಗೂ ಯಶಸ್ವಿ ಜೈಸ್ವಾಲ್ (Yashasvi Jaiswal) ಕಾಣಿಸಿಕೊಂಡಿದ್ದಾರೆ.

1 / 8
ವಿಶೇಷ ಎಂದರೆ ಟೀಮ್ ಇಂಡಿಯಾದಲ್ಲಿ ಈಗ ಒಟ್ಟು ನಾಲ್ವರು ಆರಂಭಿಕರಿದ್ದಾರೆ. ಇವರಲ್ಲಿ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ ಖಾಯಂ ಸದಸ್ಯರಾದರೆ, ಯಶಸ್ವಿ ಜೈಸ್ವಾಲ್ ಹಾಗೂ ರುತುರಾಜ್ ಗಾಯಕ್ವಾಡ್ ಹೊಸ ಎಂಟ್ರಿ.

2 / 8
ಹೀಗಾಗಿಯೇ ವಿಂಡೀಸ್ ವಿರುದ್ಧ ಯಾರು ಆರಂಭಿಕರಾಗಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್.

3 / 8
ಏಕೆಂದರೆ ಈ ಬಾರಿ ತಂಡದಿಂದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್ ಚೇತೇಶ್ವರ ಪೂಜಾರ ಅವರನ್ನು ಕೈ ಬಿಡಲಾಗಿದೆ. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್ ಕಚ್ಚಿ ನಿಲ್ಲುವ ಸಾಮರ್ಥ್ಯ ಹೊಂದಿರುವ ಬ್ಯಾಟರ್​ನ ಅಗತ್ಯತೆ ಇದೆ. ಅಂತಹ ಸಾಮರ್ಥ್ಯವಿರುವ ಆಟಗಾರನೆಂದರೆ ಶುಭ್​ಮನ್ ಗಿಲ್.

4 / 8
ಶುಭ್​ಮನ್ ಗಿಲ್ ಮಧ್ಯಮ ಕ್ರಮಾಂಕದಲ್ಲಿ ಇನಿಂಗ್ಸ್ ಕಟ್ಟಬಲ್ಲ ಸಾಮರ್ಥ್ಯ ಹೊಂದಿರುವ ಬ್ಯಾಟ್ಸ್​ಮನ್. ಈಗಾಗಲೇ ರಕ್ಷಣಾತ್ಮಕ ಆಟದೊಂದಿಗೆ ಗಿಲ್ ಗಮನ ಸೆಳೆದಿದ್ದಾರೆ. ಹೀಗಾಗಿ ಪೂಜಾರ ಸ್ಥಾನದಲ್ಲಿ ಯುವ ದಾಂಡಿಗನನ್ನು ಕಣಕ್ಕಿಳಿಸಲಿದ್ದಾರೆ ಎನ್ನಲಾಗಿದೆ.

5 / 8
ಇತ್ತ ಶುಭ್​ಮನ್ ಗಿಲ್ ಅವರ ಆರಂಭಿಕನ ಸ್ಥಾನದಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ಕಣಕ್ಕಿಳಿಸಿ ಪ್ರಯೋಗ ನಡೆಸುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಆರಂಭಿಕರಾಗಿ ಕಣಕ್ಕಿಳಿಯುವ ರೋಹಿತ್ ಶರ್ಮಾ ಬಲಗೈ ಬ್ಯಾಟರ್ ಆಗಿದ್ದರೆ, ಜೈಸ್ವಾಲ್ ಎಡಗೈ ದಾಂಡಿಗ.

6 / 8
ಈ ಮೂಲಕ ಮತ್ತೊಮ್ಮೆ ರೈಟ್ ಹ್ಯಾಂಡ್-ಲೆಫ್ಟ್​ ಹ್ಯಾಂಡ್ ಕಾಂಬಿನೇಷನ್​ ಪ್ರಯೋಗಕ್ಕೆ ಟೀಮ್ ಇಂಡಿಯಾ ಮುಂದಾಗಲಿದೆ. ಈ ಪ್ರಯೋಗ ಯಶಸ್ವಿಯಾದರೆ ಯಶಸ್ವಿ ಜೈಸ್ವಾಲ್ ಆರಂಭಿಕನಾಗಿ, ಶುಭ್​ಮನ್ ಗಿಲ್​ಗೆ 3ನೇ ಅಥವಾ 4ನೇ ಕ್ರಮಾಂಕ ಖಾಯಂ ಆಗುವುದು ಖಚಿತ.

7 / 8
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನಾದ್ಕಟ್, ನವದೀಪ್ ಸೈನಿ.

8 / 8
Follow us