World Cup 2023: ಏಕದಿನ ವಿಶ್ವಕಪ್​ನಿಂದ ನ್ಯೂಜಿಲೆಂಡ್​ ತಂಡದ ಸ್ಟಾರ್ ಆಲ್​ರೌಂಡರ್ ಔಟ್..!

|

Updated on: Jun 14, 2023 | 9:21 AM

World Cup 2023: ನ್ಯೂಜಿಲೆಂಡ್‌ ತಂಡದ ಸ್ಟಾರ್ ಆಲ್ ರೌಂಡರ್ ಮೈಕಲ್ ಬ್ರೇಸ್​ವೆಲ್ ಏಕದಿನ ವಿಶ್ವಕಪ್​ನಿಂದ ಹೊರಬಿದ್ದಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

1 / 7
ಈ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಇನ್ನೂ 4 ತಿಂಗಳು ಬಾಕಿ ಇರುವಾಗಲೇ ನ್ಯೂಜಿಲೆಂಡ್‌ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ತಂಡದ ಸ್ಟಾರ್ ಆಲ್ ರೌಂಡರ್ ಮೈಕಲ್ ಬ್ರೇಸ್​ವೆಲ್ ಏಕದಿನ ವಿಶ್ವಕಪ್​ನಿಂದ ಹೊರಬಿದ್ದಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

2 / 7
ಬ್ರೇಸ್‌ವೆಲ್‌ ಇಂಜುರಿಗೆ ತುತ್ತಾಗಿದ್ದು, ಇಷ್ಟರಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ಬ್ರೇಸ್‌ವೆಲ್‌ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದೇ ಕಾರಣಕ್ಕೆ ಮೈಕಲ್ ಬ್ರೇಸ್‌ವೆಲ್ ಏಕದಿನ ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ.

3 / 7
ಇಂಗ್ಲೆಂಡ್‌ನ ಟಿ20 ಬ್ಲಾಸ್ಟ್‌ನಲ್ಲಿ ವೋರ್ಸೆಸ್ಟರ್‌ಶೈರ್ ರಾಪಿಡ್ಸ್ ಪರ ಆಡಿದ್ದ ಬ್ರೇಸ್‌ವೆಲ್‌ ಇಂಜುರಿಗೆ ತುತ್ತಾಗಿದ್ದರು. ಆ ಬಳಿಕ ಬ್ರೇಸ್‌ವೆಲ್‌ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಇದೀಗ ಇಂಜುರಿಗೊಳಗಾಗಿರುವ ಬ್ರೇಸ್‌ವೆಲ್​ಗೆ ಬ್ರಿಟನ್‌ನಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂದು ವರದಿಯಾಗಿದೆ.

4 / 7
ಬ್ರೇಸ್‌ವೆಲ್ ಇಂಜುರಿ ಬಗ್ಗೆ ಹೇಳಿಕೆ ನೀಡಿರುವ ನ್ಯೂಜಿಲೆಂಡ್ ಕ್ರಿಕೆಟ್, ಇಂಜುರಿಗೊಳಗಾಗಿರುವ ಮೈಕೆಲ್ ಬ್ರೇಸ್‌ವೆಲ್ ಅವರಿಗೆ ಯುಕೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಆ ಬಳಿಕ ಇದರಿಂದ ಚೇತರಿಸಿಕೊಳ್ಳಲು ಅವರಿಗೆ ಸುಮಾರು 6ರಿಂದ 8 ತಿಂಗಳು ಬೇಕಾಗುತ್ತದೆ ಎಂದು ಹೇಳಿಕೊಂಡಿದೆ.

5 / 7
ಬ್ರೇಸ್‌ವೆಲ್ ಅಲಭ್ಯತೆಯೊಂದಿಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪ್ರಮುಖ ಇಬ್ಬರು ಆಟಗಾರರನ್ನು ಏಕದಿನ ವಿಶ್ವಕಪ್​ಗೆ ಕಳೆದುಕೊಂಡಂತ್ತಾಗಿದೆ. ಬ್ರೇಸ್‌ವೆಲ್​ಗೂ ಮೊದಲು ತಂಡದ ನಾಯಕ ಕೇನ್ ವಿಲಿಯಮ್ಸನ್ ಕೂಡ ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುವಾಗ ಗಾಯಗೊಂಡಿದ್ದರು. ಹೀಗಾಗಿ ನಾಯಕ ಕೇನ್ ವಿಲಿಯಮ್ಸನ್ ಕೂಡ ಏಕದಿನ ವಿಶ್ವಕಪ್​ನಲ್ಲಿ ಆಡುವುದು ಅನುಮಾನವಾಗಿದೆ.

6 / 7
ಇನ್ನು ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡಿದ್ದ ಮೈಕಲ್ ಬ್ರೇಸ್‌ವೆಲ್​ಗೆ ತಂಡದಲ್ಲಿ ಆಡಲು ಹೆಚ್ಚಿನ ಅವಕಾಶ ಸಿಗಲಿಲ್ಲ. ಸಿಕ್ಕ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಬ್ರೇಸ್‌ವೆಲ್ 5 ಪಂದ್ಯಗಳಲ್ಲಿ 6 ಪ್ರಮುಖ ವಿಕೆಟ್ ಪಡೆದರು. ಹಾಗೆಯೇ ಬ್ಯಾಟಿಂಗ್​ನಲ್ಲೂ 6 ಬೌಂಡರಿ, 1 ಸಿಕ್ಸರ್ ಸಹಿತ 58 ರನ್ ಕಲೆಹಾಕಿದರು.

7 / 7
ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಈ ಐಸಿಸಿ ಪಂದ್ಯಾವಳಿಯು ಅಕ್ಟೋಬರ್ ಮೊದಲ ವಾರದಿಂದ ಪ್ರಾರಂಭವಾಗಲಿದ್ದು, ನವೆಂಬರ್ ಮಧ್ಯದವರೆಗೆ ನಡೆಯಲಿದೆ. ಇದು ಸಂಪೂರ್ಣ 45 ದಿನಗಳ ಕಾರ್ಯಕ್ರಮವಾಗಿದ್ದು, ಇದರ ಆರಂಭಿಕ ಮತ್ತು ಅಂತಿಮ ಪಂದ್ಯಗಳನ್ನು ಅಹಮದಾಬಾದ್‌ನಲ್ಲಿ ಆಡಲು ತೀರ್ಮಾನಿಸಲಾಗಿದೆ.