World Cup 2023: ‘ಅಫ್ಘಾನ್ ವಿರುದ್ಧ ಆಡುವುದಿಲ್ಲ’; ಹೊಸ ವರಸೆ ತೆಗೆದ ಪಾಕಿಸ್ತಾನ

|

Updated on: Jun 22, 2023 | 11:44 AM

World Cup 2023: ಇದೀಗ ಹೊಸ ವರಸೆ ತೆಗೆದಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಫ್ಘಾನಿಸ್ತಾನ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲು ನಿರಾಕರಿಸಿದೆ.

1 / 6
ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಆರಂಭಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಂದಿಲ್ಲೊಂದು ಬೇಡಿಕೆಗಳ ಮೂಲಕ ಐಸಿಸಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಮೊದಲು ಮೋದಿ ಮೈದಾನದಲ್ಲಿ ಆಡುವುದಿಲ್ಲ ಎಂದಿದ್ದ ಪಾಕ್ ಆ ಬಳಿಕ, ವಿಶ್ವಕಪ್ ವೇಳಾಪಟ್ಟಿಯಲ್ಲಿ 2 ಸ್ಥಳಗಳನ್ನು ಬದಲಿಸಬೇಕು ಎಂದಿತ್ತು.

2 / 6
ಇದೀಗ ಹೊಸ ವರಸೆ ತೆಗೆದಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಫ್ಘಾನಿಸ್ತಾನ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲು ನಿರಾಕರಿಸಿದೆ. ಪಾಕಿಸ್ತಾನಿ ಚಾನೆಲ್ ಜಿಯೋ ನ್ಯೂಸ್ ಪ್ರಕಾರ, ಪಿಸಿಬಿ ಅಫ್ಘಾನಿಸ್ತಾನ ವಿರುದ್ಧದ ಅಭ್ಯಾಸ ಪಂದ್ಯವನ್ನು ಆಡಲು ನಿರಾಕರಿಸಿದೆ. ಅಲ್ಲದೆ ಈ ಬಗ್ಗೆ ಪಿಸಿಬಿ ತನ್ನ ಲಿಖಿತ ಬೇಡಿಕೆಯನ್ನು ಐಸಿಸಿಗೆ ಕಳುಹಿಸಿದೆ ಎಂದು ವರದಿ ಮಾಡಿದೆ.

3 / 6
ಪಿಸಿಬಿ ಕಳುಹಿಸಿರುವ ಲಿಖಿತ ಬೇಡಿಕೆಯಲ್ಲಿ, ಏಷ್ಯನ್ ಅಲ್ಲದ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಯೋಜಿಸಲು ಮನವಿ ಮಾಡಿದೆ. ಇದಕ್ಕೆ ಕಾರಣವನ್ನೂ ನೀಡಿರುವ ಪಿಸಿಬಿ, ವಿಶ್ವಕಪ್​ಗೂ ಮುನ್ನ ನಮ್ಮ ತಂಡ ಏಷ್ಯಾಕಪ್​ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಪಂದ್ಯಗಳನ್ನು ಆಡಿರುತ್ತದೆ.

4 / 6
ಹೀಗಾಗಿ ಅಭ್ಯಾಸ ಪಂದ್ಯವನ್ನು ಏಷ್ಯಾನ್ ಅಲ್ಲದ (ಪ್ರಮುಖವಾಗಿ ಭಾರತ, ಶ್ರೀಲಂಕಾ, ಅಪ್ಘಾನಿಸ್ತಾನ) ರಾಷ್ಟ್ರಗಳ ವಿರುದ್ಧ ಆಡುವ ಮನವಿಯನ್ನು ಐಸಿಸಿ ಮುಂದಿರಿಸಿದೆ ಎಂದು ಇನ್​ಸೈಡ್ ಸ್ಫೋರ್ಟ್​ ವರದಿ ಮಾಡಿದೆ.

5 / 6
ಇದರೊಂದಿಗೆ ಎರಡು ಪಂದ್ಯಗಳ ಸ್ಥಳ ಬದಲಾವಣೆಗೆ ಮನವಿ ಮಾಡಿರುವ ಪಾಕಿಸ್ತಾನ, ತನ್ನ ಮನವಿಯಲ್ಲಿ ಅಫ್ಘಾನ್ ವಿರುದ್ಧ ಚೆನ್ನೈನಲ್ಲಿ ನಡೆಯುವ ಪಂದ್ಯ ಹಾಗೂ ಆಸೀಸ್ ವಿರುದ್ಧ ಬೆಂಗಳೂರಿನಲ್ಲಿ ನಡೆಯಲ್ಲಿರುವ ಪಂದ್ಯವನ್ನು ಚೆನ್ನೈಗೆ ಬದಲಾಯಿಸುವಂತೆ ಕೇಳಿಕೊಂಡಿದೆ ಎಂದು ವರದಿಯಾಗಿದೆ.

6 / 6
ವಾಸ್ತವವಾಗಿ ಚೆನ್ನೈನಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲು ಪಾಕಿಸ್ತಾನಿ ತಂಡ ಹಿಂದೇಟು ಹಾಕುತ್ತಿದೆ. ಏಕೆಂದರೆ ಚೆನ್ನೈ ಪಿಚ್ ಸ್ಪಿನ್ನರ್​ಗಳಿಗೆ ಹೆಚ್ಚು ಸಹಕಾರಿ. ಅಲ್ಲದೆ ಅಫ್ಘನ್ ತಂಡದಲ್ಲಿ ಕ್ವಾಲಿಟಿ ಸ್ಪಿನ್ನರ್‌ಗಳಿರುವುದರಿಂದ ಈ ಪಿಚ್​ನಲ್ಲಿ ನಮ್ಮ ತಂಡಕ್ಕೆ ಹಿನ್ನಡೆಯಾಗಲಿದೆ. ಹಾಗೆಯೇ ಬೆಂಗಳೂರು ಪಿಚ್ ವೇಗಿಗಳಿಗೆ ಹೆಚ್ಚು ನೆರವಾಗುವುದರಿಂದ ಇದರ ಲಾಭವನ್ನು ಆಸ್ಟ್ರೇಲಿಯಾ ಪಡೆಯುತ್ತದೆ. ಹೀಗಾಗಿ ಈ ಎರಡೂ ಪಂದ್ಯಗಳ ಸ್ಥಳಗಳನ್ನು ಅದಲು ಬದಲು ಮಾಡಬೇಕು ಎಂಬುದು ಪಾಕ್ ಮನವಿಯಾಗಿದೆ.