World Cup 2023: ಸೆಮಿಫೈನಲ್ ಆಡುಬಹುದಾದ ಐದು ತಂಡಗಳನ್ನು ಹೆಸರಿಸಿದ ದಾದಾ..!
Sourav Ganguly: ತಮ್ಮ 51ನೇ ವಸಂತಕ್ಕೆ ಕಾಲಿಟ್ಟ ಟೀಂ ಇಂಡಿಯಾದ ಮಾಜಿ ಸೌರವ್ ಗಂಗೂಲಿ ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ ಸೆಮಿ ಫೈನಲ್ ಆಡುವ ನಾಲ್ಕು ತಂಡಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
1 / 5
ನಿನ್ನೆಯಷ್ಟೆ ಅಂದರೆ, ಜುಲೈ 8 ರಂದು ತಮ್ಮ 51ನೇ ವಸಂತಕ್ಕೆ ಕಾಲಿಟ್ಟ ಟೀಂ ಇಂಡಿಯಾದ ಮಾಜಿ ಸೌರವ್ ಗಂಗೂಲಿ ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ ಸೆಮಿ ಫೈನಲ್ ಆಡುವ ನಾಲ್ಕು ತಂಡಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
2 / 5
13ನೇ ಏಕದಿನ ವಿಶ್ವಕಪ್ ಬಗ್ಗೆ ಮನಬಿಚ್ಚಿ ಮಾತನಾಡಿರುವ ಬಂಗಾಳದ ಹುಲಿ ಖ್ಯಾತಿಯ ಸೌರವ್ ಗಂಗೂಲಿ, ಸೆಮಿಫೈನಲ್ ಆಡುವ ಮೂರು ತಂಡಗಳ ಬಗ್ಗೆ ಖಚಿತವಾಗಿದ್ದರೂ, ನಾಲ್ಕೆನೇಯ ಹಾಗೂ ಕೊನೆಯ ತಂಡದ ವಿಚಾರದಲ್ಲಿ ಕೊಂಚ ಗೊಂದಲದಲ್ಲಿರುವುದಾಗಿ ಹೇಳಿಕೊಂಡಿದ್ದಾರೆ.
3 / 5
ತಮ್ಮ ಪ್ರಕಾರ ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ ಸೆಮಿಫೈನಲ್ ಆಡುವ ತಂಡಗಳನ್ನು ಹೆಸರಿಸಿರುವ ದಾದಾ, ಮೊದಲ ಮೂರು ಸ್ಥಾನಗಳಲ್ಲಿ ಕೊನೆಯ ಮೂರು ವಿಶ್ವಕಪ್ಗಳ ಚಾಂಪಿಯನ್‌ಗಳಾದ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಭಾರತವನ್ನು ಹೆಸರಿಸಿದ್ದಾರೆ.
4 / 5
ಆದರೆ ಸೆಮಿಫೈನಲ್ ಆಡುವ ನಾಲ್ಕನೇ ತಂಡದ ಬಗ್ಗೆ ಗೊಂದಲ ಹೊರಹಾಕಿರುವ ದಾದಾ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಸೆಮಿಫೈನಲ್ ಆಡುವುದು ಅನುಮಾನ ಎಂದಿದ್ದಾರೆ.
5 / 5
ಗಂಗೂಲಿ ಪ್ರಕಾರ, ಸೆಮಿಫೈನಲ್ ಆಡುವ ನಾಲ್ಕನೇ ತಂಡವಾಗಿ ನ್ಯೂಜಿಲೆಂಡ್ ಮೇಲೆ ಹೆಚ್ಚು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಐದನೇ ತಂಡವನ್ನು ಆಯ್ಕೆ ಮಾಡಿರುವ ದಾದಾ, ಪಾಕಿಸ್ತಾನಕ್ಕೆ ಐದನೇ ಸ್ಥಾನ ನೀಡಿದ್ದಾರೆ. ಹಾಗೆಯೇ ಭಾರತ ಮತ್ತು ಪಾಕಿಸ್ತಾನ ಈಡನ್ ಗಾರ್ಡನ್ಸ್ನಲ್ಲಿ ಸೆಮಿಫೈನಲ್ ಆಡಲಿವೆ ಎಂದಿದ್ದಾರೆ.