World Cup Qualifiers 2023: 6 ವಿಕೆಟ್ ಕಬಳಿಸಿದ ಹಸರಂಗ: ಶ್ರೀಲಂಕಾಗೆ 175 ರನ್​ಗಳ ಭರ್ಜರಿ ಜಯ

| Updated By: ಝಾಹಿರ್ ಯೂಸುಫ್

Updated on: Jun 19, 2023 | 11:20 PM

World Cup Qualifiers 2023: 356 ರನ್​ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಯುಎಇ ತಂಡಕ್ಕೆ ಸ್ಪಿನ್ ಮೋಡಿಗಾರ ವನಿಂದು ಹಸರಂಗ ಮಾರಕವಾಗಿ ಪರಿಣಮಿಸಿದರು.

1 / 5
World Cup Qualifiers 2023: ಏಕದಿನ ವಿಶ್ವಕಪ್ 2023 ರ ಅರ್ಹತಾ ಸುತ್ತಿನ ಪಂದ್ಯದಲ್ಲಿ ಯುಎಇ ವಿರುದ್ಧ ಶ್ರೀಲಂಕಾ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಅಮೋಘ ಗೆಲುವಿನ ರೂವಾರಿ ವನಿಂದು ಹಸರಂಗ.

2 / 5
ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ತಂಡವು ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ಪರ ಆರಂಭಿಕರಾದ ಪಾತುಂ ನಿಸ್ಸಾಂಕ (57) ಹಾಗೂ ಕರುಣರತ್ನೆ (52) ಅರ್ಧಶತಕ ಬಾರಿಸಿದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕುಸಾಲ್ ಮೆಂಡಿಸ್ 78 ರನ್​ ಕಲೆಹಾಕಿದರು.

3 / 5
ಇನ್ನು ಸಮರವಿಕ್ರಮ 73 ರನ್​ ಬಾರಿಸಿದರೆ, ಅಸಲಂಕಾ ಕೇವಲ 23 ಎಸೆತಗಳಲ್ಲಿ 48 ರನ್​ ಚಚ್ಚಿದರು. ಹಾಗೆಯೇ ಅಂತಿಮ ಹಂತದಲ್ಲಿ ವನಿಂದು ಹಸರಂಗ 12 ಎಸೆತಗಳಲ್ಲಿ ಅಜೇಯ 23 ರನ್ ಬಾರಿಸಿದರು. ಇದರೊಂದಿಗೆ ನಿಗದಿತ 50 ಓವರ್​ಗಳಲ್ಲಿ ಶ್ರೀಲಂಕಾ ತಂಡವು 6 ವಿಕೆಟ್ ನಷ್ಟಕ್ಕೆ 355 ರನ್ ಕಲೆಹಾಕಿತು.

4 / 5
356 ರನ್​ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಯುಎಇ ತಂಡಕ್ಕೆ ಸ್ಪಿನ್ ಮೋಡಿಗಾರ ವನಿಂದು ಹಸರಂಗ ಮಾರಕವಾಗಿ ಪರಿಣಮಿಸಿದರು. ಯುಎಇ 2 ವಿಕೆಟ್ ನಷ್ಟಕ್ಕೆ 82 ರನ್​ಗಳಿಸಿದ್ದ ವೇಳೆ ದಾಳಿಗಿಳಿದ ಹಸರಂಗ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಿಗೆ ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ ಹಾದಿ ತೋರಿಸಿದರು.

5 / 5
8 ಓವರ್​ ಬೌಲಿಂಗ್ ಮಾಡಿದ್ದ ಹಸರಂಗ ಕೇವಲ 24 ರನ್ ನೀಡಿ 6 ವಿಕೆಟ್ ಉರುಳಿಸಿದರು. ಇದರೊಂದಿಗೆ ಯುಎಇ ತಂಡವು 39 ಓವರ್​ಗಳಲ್ಲಿ 180 ರನ್​ಗಳಿಗೆ ಸರ್ವಪತನ ಕಂಡಿತು. ಇತ್ತ ಶ್ರೀಲಂಕಾ ತಂಡವು 175 ರನ್​ಗಳ ಭರ್ಜರಿ ಜಯದೊಂದಿಗೆ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಶುಭಾರಂಭ ಮಾಡಿದೆ.

Published On - 11:20 pm, Mon, 19 June 23