136 ರನ್, 1 ವಿಕೆಟ್, 2 ಕ್ಯಾಚ್, ಮೆಕ್‌ಮುಲ್ಲೆನ್ ಅಬ್ಬರ..! ಸೂಪರ್ ಸಿಕ್ಸ್ಗೆ ಸ್ಕಾಟ್ಲೆಂಡ್ ಎಂಟ್ರಿ
World Cup Qualifiers: ಸ್ಕಾಟ್ಲೆಂಡ್ ಪರ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಮೆಕ್‌ಮುಲ್ಲೆನ್ 121 ಎಸೆತಗಳಲ್ಲಿ 14 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ 136 ರನ್ ಚಚ್ಚಿದರು.
1 / 5
ಭಾನುವಾರ ನಡೆದ ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ಸ್ ಪಂದ್ಯದಲ್ಲಿ ಒಮಾನ್ ತಂಡವನ್ನು 76 ರನ್‌ಗಳಿಂದ ಮಣಿಸಿದ ಸ್ಕಾಟ್ಲೆಂಡ್ ತಂಡ ವಿಶ್ವಕಪ್ ಕ್ವಾಲಿಫೈಯರ್ಸ್ ಸೂಪರ್ ಸಿಕ್ಸ್ ಹಂತಕ್ಕೆ ಎಂಟ್ರಿಕೊಟ್ಟಿದೆ. ಇತ್ತ ಸ್ಕಾಟ್ಲೆಂಡ್ ವಿರುದ್ಧ ಸೋಲುಂಡ ಒಮನ್ ಕೂಡ ಸೂಪರ್ ಸಿಕ್ಸ್ಗೆ ಟಿಕೆಟ್ ಖಚಿತ ಪಡಿಸಿಕೊಂಡಿದೆ.
2 / 5
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ಮೆಕ್‌ಮುಲ್ಲೆನ್ ಅವರ ಬಿರುಸಿನ ಶತಕದ ಆಧಾರದ ಮೇಲೆ 50 ಓವರ್‌ಗಳಲ್ಲಿ 320 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಒಮನ್ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 244 ರನ್ ಗಳಿಸಲಷ್ಟೇ ಶಕ್ತವಾಯಿತು.
3 / 5
ಸ್ಕಾಟ್ಲೆಂಡ್ ಪರ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಮೆಕ್‌ಮುಲ್ಲೆನ್ 121 ಎಸೆತಗಳಲ್ಲಿ 14 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ 136 ರನ್ ಚಚ್ಚಿದರು. ಒಮನ್ ಪರ ಬಿಲಾಲ್ ಖಾನ್ 5 ವಿಕೆಟ್ ಪಡೆದರು. ಇನ್ನು 321 ರನ್‌ಗಳ ಗುರಿ ಬೆನ್ನಟ್ಟಿದ ಒಮನ್ ಪರ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ನಸೀಮ್ ಖುಷಿ ಗರಿಷ್ಠ 69 ರನ್ ಗಳಿಸಿದರು.
4 / 5
ಇನ್ನು ಬ್ಯಾಟಿಂಗ್ನಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ್ದ ಮೆಕ್‌ಮುಲ್ಲೆನ್ ಬೌಲಿಂಗ್ನಲ್ಲೂ ಅದ್ಭುತ ಪ್ರದರ್ಶನ ನೀಡಿದರು. ಒಮನ್ ತಂಡದ ಆರಂಭಿಕ ಆಟಗಾರ ಕಶ್ಯಪ್ ಪ್ರಜಾಪತಿ ಅವರ ವಿಕೆಟ್ ಪಡೆದ ಮೆಕ್‌ಮುಲ್ಲೆನ್, ಇದಾದ ನಂತರ ಅಯಾನ್ ಖಾನ್ ಮತ್ತು ಶೋಯೆಬ್ ಖಾನ್ ಅವರ ಅದ್ಭುತ ಕ್ಯಾಚ್ ತೆಗೆದುಕೊಂಡರು.
5 / 5
ಕಳೆದ ವರ್ಷಾಂತ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ 24ರ ಹರೆಯದ ಮೆಕ್‌ಮುಲ್ಲೆನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟು 7 ತಿಂಗಳಾಗಿದೆ. ಮೆಕ್‌ಮುಲ್ಲೆನ್ ಸ್ಕಾಟ್‌ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಕ್ರೀಡೆ ಮತ್ತು ಮನೋವಿಜ್ಞಾನವನ್ನು ಅಧ್ಯಯನ ಮಾಡಿದ್ದಾರೆ.