Updated on: Feb 26, 2023 | 6:08 PM
ವುಮೆನ್ಸ್ ಪ್ರೀಮಿಯರ್ ಲೀಗ್ಗೆ ವೇದಿಕೆ ಸಜ್ಜಾಗಿದೆ. ಮಾರ್ಚ್ 4 ರಿಂದ ಶುರುವಾಗಲಿರುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ.
ಇದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸ್ ಟೀಮ್ ಇಂಡಿಯಾ ಆಟಗಾರ್ತಿ ಹರ್ಮನ್ಪ್ರೀತ್ ಕೌರ್ ಅವರನ್ನು ತಂಡದ ನಾಯಕಿಯಾಗಿ ಆಯ್ಕೆ ಮಾಡಿದೆ.
ಟೀಮ್ ಇಂಡಿಯಾ ಪರ 151 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಹರ್ಮನ್ಪ್ರೀತ್ ಕೌರ್ ಪ್ರಸ್ತುತ ಭಾರತ ತಂಡದ ನಾಯಕಿಯಾಗಿದ್ದಾರೆ. ಇದೇ ಕಾರಣದಿಂದಾಗಿ ಸ್ಟಾರ್ ಆಟಗಾರ್ತಿಯನ್ನೇ ಮುಂಬೈ ಇಂಡಿಯನ್ಸ್ ನಾಯಕಿಯಾಗಿ ಆಯ್ಕೆ ಮಾಡಿದೆ.
ಟೀಮ್ ಇಂಡಿಯಾ ಪರ 151 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಹರ್ಮನ್ಪ್ರೀತ್ ಕೌರ್ ಪ್ರಸ್ತುತ ಭಾರತ ತಂಡದ ನಾಯಕಿಯಾಗಿದ್ದಾರೆ. ಇದೇ ಕಾರಣದಿಂದಾಗಿ ಸ್ಟಾರ್ ಆಟಗಾರ್ತಿಗೆ ತಂಡದ ಚುಕ್ಕಾಣಿ ನೀಡಲಾಗಿದೆ.
ಭಾರತದ ಪರ ಟಿ20 ಕ್ರಿಕೆಟ್ನಲ್ಲಿ 136 ಇನಿಂಗ್ಸ್ ಆಡಿರುವ ಹರ್ಮನ್ 1 ಶತಕ ಹಾಗೂ 10 ಅರ್ಧಶತಕಗಳೊಂದಿಗೆ ಒಟ್ಟು 3058 ರನ್ ಕಲೆಹಾಕಿದ್ದಾರೆ. ಅಂದರೆ ಇಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಟಿ20 ಪಂದ್ಯವಾಡಿದ ಹಾಗೂ ಅತ್ಯಧಿಕ ರನ್ಗಳಿಸಿದ ಆಟಗಾರ್ತಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿರುವುದು ವಿಶೇಷ.
ಇಲ್ಲಿ ವಿಶೇಷ ಎಂದರೆ ಭಾರತ ತಂಡದ ನಾಯಕ ಹಾಗೂ ನಾಯಕಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿರುವುದು. ಅಂದರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪುರುಷರ ತಂಡವನ್ನು ಮುನ್ನಡೆಸುತ್ತಿದ್ದರೆ, ಇದೀಗ ಭಾರತ ಮಹಿಳಾ ತಂಡ ನಾಯಕಿ ಹರ್ಮನ್ಪ್ರೀತ್ ಕೌರ್ ಮುಂಬೈ ಇಂಡಿಯನ್ಸ್ ವುಮೆನ್ಸ್ ಟೀಮ್ನ ಕ್ಯಾಪ್ಟನ್ ಆಗಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾದ ನಾಯಕ-ನಾಯಕಿ ಮುಂಬೈ ಇಂಡಿಯನ್ಸ್ ತಂಡದ ಸಾರಥ್ಯವಹಿಸಿದಂತಾಗಿದೆ.
ಇನ್ನು ಈಗಾಗಲೇ ವುಮೆನ್ಸ್ ಪ್ರೀಮಿಯರ್ ಲೀಗ್ಗಾಗಿ ಮುಂಬೈ ಇಂಡಿಯನ್ಸ್ ಜೆರ್ಸಿಯನ್ನು ಅನಾವರಣಗೊಳಿಸಿದೆ. ತಂಡದ ಚೊಚ್ಚಲ ಜೆರ್ಸಿಯು ಮುಂಬೈ ಇಂಡಿಯನ್ಸ್ ತಂಡದ ಟ್ರೇಡ್ ಮಾರ್ಕ್ ಆಗಿರುವ ಬ್ಲೂ ಬಣ್ಣದಲ್ಲಿ ವಿನ್ಯಾಸಗೊಳಿಸಲಾಗಿದೆ.