Updated on:Feb 26, 2023 | 4:42 PM
ಐಪಿಎಲ್‌ಗೆ ಕ್ಷಣಗಣನೆ ಆರಂಭವಾಗಿದೆ. ವೇಳಾಪಟ್ಟಿಯ ಪ್ರಕಾರ, ಐಪಿಎಲ್ 16 ನೇ ಆವೃತ್ತಿಯು ಮಾರ್ಚ್ 31 ರಂದು ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಇದರೊಂದಿಗೆ ಮಿಲಿಯನ್ ಡಾಲರ್ ಟೂರ್ನಿಯ ಅಬ್ಬರ ಶುರುವಾಗಲಿದೆ.
ಈಗಾಗಲೇ ಎಲ್ಲಾ ಪ್ರಾಂಚೈಸಿಗಳು ತಮ್ಮ ತಮ್ಮ ತಂಡಗಳ ನಾಯಕರ ಹೆಸರನ್ನು ಬಹಿರಂಗಪಡಿಸಿವೆ. ಇದರೊಂದಿಗೆ ಪ್ರತಿ ಆವೃತ್ತಿಯಲ್ಲೂ ಒಂದಲ್ಲ ಒಂದು ವಿಚಾರಕ್ಕೆ ಸದ್ದು ಮಾಡುವ ಐಪಿಎಲ್, ಈ ಬಾರಿ ತಂಡಗಳ ನಾಯಕರಿಗೆ ಸಿಗುತ್ತಿರುವ ಸಂಬಳದಿಂದ ಸಾಕಷ್ಟು ಚರ್ಚೆಗೊಳಗಾಗಿದೆ.
ಅಷ್ಟಕ್ಕೂ ಒಂದು ಅಚ್ಚರಿಯ ಸಂಗತಿಯೆಂದರೆ ಐಪಿಎಲ್ನ ಅತ್ಯಂತ ದುಬಾರಿ ನಾಯಕ ಎಂಬ ಖ್ಯಾತಿಗೆ ಕನ್ನಡಿಗ ಕೆಎಲ್ ರಾಹುಲ್ ಪಾತ್ರರಾಗಿದ್ದಾರೆ.
ರಾಷ್ಟ್ರೀಯ ತಂಡದಲ್ಲಿ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಲೋಕೇಶ್ ರಾಹುಲ್ ಐಪಿಎಲ್ನಲ್ಲಿ ಮಾತ್ರ ಅತ್ಯಂತ ದುಬಾರಿ ಆಟಗಾರ. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿರುವ ರಾಹುಲ್ ಒಂದು ಆವೃತ್ತಿಗೆ 17 ಕೋಟಿ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ.
ರಾಹುಲ್ ನಂತರ ರೋಹಿತ್ ಶರ್ಮಾ ಟೂರ್ನಿಯ ಅತ್ಯಂತ ದುಬಾರಿ ನಾಯಕನಾಗಿದ್ದು. ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿರುವ ರೋಹಿತ್ 16 ಕೋಟಿ ರೂಪಾಯಿ ಪಡೆಯಲಿದ್ದಾರೆ.
ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿರುವ ಹಾರ್ದಿಕ್ ಪಾಂಟ್ಯ 15 ಕೋಟಿ ಸಂಬಳ ಪಡೆಯುತ್ತಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ 14 ಕೋಟಿ ಪಡೆಯುತ್ತಿದ್ದಾರೆ.
ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ 12.25 ಕೋಟಿ ಸಂಬಳ ಪಡೆಯುತ್ತಿದ್ದಾರೆ.
ಚೆನ್ನೈ ತಂಡದ ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ 12 ಕೋಟಿ ಸಂಬಳ ಪಡೆಯಲಿದ್ದಾರೆ.
ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿರುವ ಶಿಖರ್ ಧವನ್ ಒಂದು ಆವೃತ್ತಿಗೆ 8.25 ಕೋಟಿ ಸಂಭಾವನೆ ಪಡೆಯಲಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿರುವ ಫಾಪ್ ಡುಪ್ಲೆಸಿಸ್ 7 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ನೂತನ ನಾಯಕನಾಗಿ ಆಯ್ಕೆಯಾಗಿರುವ ಡೇವಿಡ್ ವಾರ್ನರ್ 6.25 ಕೋಟಿ ಸಂಬಳ ಪಡೆಯಲಿದ್ದಾರೆ.
ಹಾಗೆಯೇ ಸನ್ರೈಸರ್ಸ್ ಹೈದರಾಬಾದ್ ತಂಡದ ನೂತನ ನಾಯಕನಾಗಿರುವ ಏಡೆನ್ ಮಾರ್ಕ್ರಾಮ್ 2.60 ಕೋಟಿ ಸಂಬಳ ಪಡೆಯಲಿದ್ದಾರೆ.
Published On - 4:42 pm, Sun, 26 February 23