Updated on:Mar 02, 2023 | 12:34 PM
ಮಹಿಳಾ ಕ್ರಿಕೆಟಿಗರಿಗಾಗಿ ಬಿಸಿಸಿಐ ಮೊದಲ ಬಾರಿಗೆ ಆಯೋಜಿಸಿರುವ ಮಹಿಳಾ ಪ್ರೀಮಿಯರ್ ಲೀಗ್ ಮಾರ್ಚ್ 4 ರಿಂದ ಪ್ರಾರಂಭವಾಗಲಿದೆ. ಮೊದಲ ಸೀಸನ್‌ನಲ್ಲಿ ಐದು ತಂಡಗಳು WPL ಟ್ರೋಫಿಗಾಗಿ ಪೈಪೋಟಿ ನಡೆಸಲಿವೆ.
ಇನ್ನೆರಡು ದಿನಗಳಲ್ಲಿ ಡಬ್ಲ್ಯುಪಿಎಲ್ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹೊರತುಪಡಿಸಿ ಉಳಿದ ನಾಲ್ಕು ತಂಡಗಳು ತಮ್ಮ ತಂಡದ ನಾಯಕಿಯರನ್ನು ಪ್ರಕಟಿಸಿವೆ.
ಮುಂಬೈ ಇಂಡಿಯನ್ಸ್- ಹರ್ಮನ್‌ಪ್ರೀತ್ ಕೌರ್ (ಭಾರತ)
ಗುಜರಾತ್ ಜೈಂಟ್ಸ್ - ಬೆತ್ ಮೂನಿ (ಆಸ್ಟ್ರೇಲಿಯಾ)
ರಾಯಲ್ ಚಾಲೆಂಜರ್ಸ್ ಬೆಂಗಳೂರು - ಸ್ಮೃತಿ ಮಂಧಾನ (ಭಾರತ)
ಯುಪಿ ವಾರಿಯರ್ಸ್ - ಅಲಿಸ್ಸಾ ಹೀಲಿ (ಆಸ್ಟ್ರೇಲಿಯಾ)
ಡೆಲ್ಲಿ ಕ್ಯಾಪಿಟಲ್ಸ್ ಮಾತ್ರ ಇನ್ನು ಯಾರು ತಮ್ಮ ತಂಡವನ್ನು ಮುನ್ನಡೆಸುತ್ತಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ, ಟೀಂ ಇಂಡಿಯಾ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಅಥವಾ ಆಸ್ಟ್ರೇಲಿಯಾದ ಕ್ರಿಕೆಟರ್ ಮೆಗ್ ಲ್ಯಾನಿಂಗ್ ಅವರಿಗೆ ಈ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.
Published On - 12:34 pm, Thu, 2 March 23