WPL 2024: ಆರ್‌ಸಿಬಿ ಅಲ್ಲ..: ಪಂದ್ಯಾವಳಿಯ ಅತ್ಯುತ್ತಮ ತಂಡವನ್ನು ಹೆಸರಿಸಿದ ದಾದಾ
WPL 2024: ಆರ್‌ಸಿಬಿ ಮಹಿಳಾ ತಂಡಕ್ಕೆ ಶುಭ ಹಾರೈಸಿರುವ ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ, ಲೀಗ್ನಲ್ಲಿ ಮೂರನೇ ಸ್ಥಾನ ಪಡೆದು, ಮೊದಲೆರಡು ಸ್ಥಾನ ಪಡೆದಿದ್ದ ತಂಡಗಳನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆರ್ಸಿಬಿಗೆ ಶುಭಾಶಯ ಎಂದಿದ್ದಾರೆ.
1 / 5
ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ಗೆ ಅದ್ಧೂರಿ ತೆರೆಬಿದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಟ್ರೋಫಿ ಎತ್ತಿಹಿಡಿದಿದೆ. ಲೀಗ್ನಲ್ಲಿ ಹಲವು ಏರಿಳಿತಗಳನ್ನು ಕಂಡು ಚಾಂಪಿಯನ್ ಪಟ್ಟಕ್ಕೇರಿದ ಆರ್ಸಿಬಿಗೆ ಎಲ್ಲೆಡೆಯಿಂದ ಶುಭಾಷಯಗಳ ಮಹಾಪೂರವೇ ಹರಿದಬರುತ್ತಿದೆ.
2 / 5
ಅದರಂತೆ ಆರ್‌ಸಿಬಿ ಮಹಿಳಾ ತಂಡಕ್ಕೆ ಶುಭ ಹಾರೈಸಿರುವ ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ, ಲೀಗ್ನಲ್ಲಿ ಮೂರನೇ ಸ್ಥಾನ ಪಡೆದು, ಮೊದಲೆರಡು ಸ್ಥಾನ ಪಡೆದಿದ್ದ ತಂಡಗಳನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆರ್ಸಿಬಿಗೆ ಶುಭಾಶಯ ಎಂದಿದ್ದಾರೆ.
3 / 5
ಹಾಗೆಯೇ ಫೈನಲ್ನಲ್ಲಿ ಸೋತ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಹಾಡಿಹೊಗಳಿರುವ ದಾದಾ, ವೆಲ್ ಡನ್ ಡೆಲ್ಲಿ ಕ್ಯಾಪಿಟಲ್ಸ್. ಪ್ರಶಸ್ತಿ ಗೆಲ್ಲಲು ಸಾಧ್ಯವಾಗದಿದ್ದರೂ, ಸತತ ಎರಡನೇ ಬಾರಿಗೆ ಫೈನಲ್ ಆಡುವುದು ದೊಡ್ಡ ವಿಷಯ. ಇದಕ್ಕಾಗಿ, ಮೆಗ್ ಲ್ಯಾನಿಂಗ್ ಮತ್ತು ತಂಡವನ್ನು ಹೊಗಳದಿರಲು ಸಾಧ್ಯವಿಲ್ಲ. ನಿಮ್ಮದು ಪಂದ್ಯಾವಳಿಯ ಅತ್ಯುತ್ತಮ ತಂಡ ಎಂದಿದ್ದಾರೆ.
4 / 5
ಇನ್ನು ಪಂದ್ಯದ ಬಗ್ಗೆ ಹೇಳುವುದಾದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಪರ ಆರಂಭಿಕರು ಒಟ್ಟಾಗಿ ಸ್ಕೋರ್ ಬೋರ್ಡ್‌ಗೆ 64 ರನ್ ಸೇರಿಸಿದರು. ಆದರೆ ಆ ನಂತರ ಇಡೀ ಪಂದ್ಯದ ಪರಿಸ್ಥಿತಿಯೇ ಬದಲಾಯಿತು. ಆರ್‌ಸಿಬಿ ದಾಳಿಗೆ ನಲುಗಿದ ತಂಡದ ಉಳಿದ 9 ಡೆಲ್ಲಿ ಬ್ಯಾಟ್ಸ್‌ಮನ್‌ಗಳು ಕೇವಲ 49 ರನ್ ಸೇರಿಸಿ ಡಗೌಟ್‌ಗೆ ಮರಳಿದರು. ಇಡೀ ತಂಡ 20 ಓವರ್ ಕೂಡ ಆಡಲು ಸಾಧ್ಯವಾಗದೆ 113 ರನ್‌ಗಳಿಗೆ ಆಲೌಟ್ ಆಯಿತು.
5 / 5
ಆದಾಗ್ಯೂ, ಕಡಿಮೆ ಸ್ಕೋರ್‌ನ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮವಾಗಿ ಹೋರಾಡಿ ಕೊನೆಯ ಓವರ್‌ವರೆಗೆ ಪಂದ್ಯವನ್ನು ರೋಚಕಗೊಳಿಸಿತು. ಆದರೆ ಅಂತಿಮವಾಗಿ ಆರ್‌ಸಿಬಿ ತಂಡ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು. ತಂಡದ ಪರ ಅಗ್ರ 3 ಬ್ಯಾಟ್ಸ್‌ಮನ್‌ಗಳು 30 ಪ್ಲಸ್ ರನ್ ಕಲೆಹಾಕಿ ತಂಡಕ್ಕೆ ಗೆಲುವು ತಂದುಕೊಟ್ಟರು.