WPL Prize Money 2024: ಡಬ್ಲ್ಯುಪಿಎಲ್ ವಿನ್ನರ್, ರನ್ನರ್ಅಪ್ಗೆ ಸಿಗುವ ಬಹುಮಾನವೆಷ್ಟು?
WPL Prize Money 2024: ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡೂ ತಂಡಗಳಿಗೂ ಇದು ಚೊಚ್ಚಲ ಪ್ರಶಸ್ತಿಯಾಗಿರುವುದರಿಂದ ಯಾವ ತಂಡ ಗೆದ್ದರೂ ಇತಿಹಾಸ ನಿರ್ಮಾಣವಾಗಲಿದೆ. ಈ ನಡುವೆ ಈ ಲೀಗ್ನ ವಿಜೇತರಿಗೆ ಹಾಗೂ ರನ್ನರ್ ಅಪ್ ತಂಡಕ್ಕೆ ಸಿಗುವ ಬಹುಮಾನದ ಮೊತ್ತವೆಷ್ಟು ಎಂಬುದರ ಬಗ್ಗೆ ಚರ್ಚೆ ಶುರುವಾಗಿದೆ.
1 / 6
ಮಹಿಳಾ ಪ್ರೀಮಿಯರ್ ಲೀಗ್ನ ಎರಡನೇ ಆವೃತ್ತಿಯ ಫೈನಲ್ ಪಂದ್ಯ ಇದೇ ಭಾನುವಾರ ಅಂದರೆ ಮಾರ್ಚ್ 17 ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ.
2 / 6
ಎರಡೂ ತಂಡಗಳಿಗೂ ಇದು ಚೊಚ್ಚಲ ಪ್ರಶಸ್ತಿಯಾಗಿರುವುದರಿಂದ ಯಾವ ತಂಡ ಗೆದ್ದರೂ ಇತಿಹಾಸ ನಿರ್ಮಾಣವಾಗಲಿದೆ. ಈ ನಡುವೆ ಈ ಲೀಗ್ನ ವಿಜೇತರಿಗೆ ಹಾಗೂ ರನ್ನರ್ ಅಪ್ ತಂಡಕ್ಕೆ ಸಿಗುವ ಬಹುಮಾನದ ಮೊತ್ತವೆಷ್ಟು ಎಂಬುದರ ಬಗ್ಗೆ ಚರ್ಚೆ ಶುರುವಾಗಿದೆ.
3 / 6
ವಾಸ್ತವವಾಗಿ ಎರಡನೇ ಆವೃತ್ತಿಯ ವಿಜೇತರಿಗೆ ಹಾಗೂ ರನ್ನರ್ ಅಪ್ ತಂಡಗಳಿಗೆ ನೀಡಲಾಗುವ ಬಹುಮಾನದ ಮೊತ್ತವೆಷ್ಟು ಎಂಬುದರ ಬಗ್ಗೆ ಬಿಸಿಸಿಐ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಹೀಗಾಗಿ ಕಳೆದ ಆವೃತ್ತಿಯ ವಿಜೇತರಿಗೆ ನೀಡಿದ ಬಹುಮಾನದ ಮೊತ್ತವನ್ನೇ ಈ ಬಾರಿಯೂ ನೀಡುವ ಸಾಧ್ಯತೆಗಳಿವೆ.
4 / 6
ಕಳೆದ ಬಾರಿ ಅಂದರೆ ಚೊಚ್ಚಲ ಆವೃತ್ತಿಯ ವಿಜೇತ ತಂಡವಾಗಿದ್ದ ಮುಂಬೈ ಇಂಡಿಯನ್ಸ್ಗೆ 6 ಕೋಟಿ ರೂ. ಬಹುಮಾನವನ್ನು ನೀಡಲಾಗಿತ್ತು. ಹಾಗೆಯೇ ಕಳೆದ ಬಾರಿಯ ರನ್ನರ್ ಅಪ್ ತಂಡಕ್ಕೆ 3 ಕೋಟಿ ರೂಪಾಯಿ ಬಹುಮಾನವನ್ನು ನೀಡಲಾಗಿತ್ತು.
5 / 6
ಇನ್ನು ಎರಡನೇ ಆವೃತ್ತಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ 1 ಕೋಟಿ ರೂ ಬಹುಮಾನ ಸಿಗಲಿದೆ. ಏಕೆಂದರೆ ಕಳೆದ ಬಾರಿಯೂ ಮೂರನೇ ಸ್ಥಾನ ಪಡೆದುಕೊಂಡಿದ್ದ ತಂಡಕ್ಕೆ ಇದೇ ಮೊತ್ತವನ್ನು ಬಹುಮಾನವನ್ನಾಗಿ ನೀಡಲಾಗಿತ್ತು.
6 / 6
ತಂಡದ ಜತೆಗೆ ಆಟಗಾರ್ತಿಯರು ಕೂಡ ತಮ್ಮ ವೈಯಕ್ತಿಕ ಪ್ರದರ್ಶನದ ಆಧಾರದ ಮೇಲೆ ಬಹುಮಾನ ಪಡೆಯಲ್ಲಿದ್ದು, ಅದರಂತೆ ಸೀಸನ್‌ನ ಆಟಗಾರ್ತಿಗೆ 5 ಲಕ್ಷ, ಆರೆಂಜ್ ಕ್ಯಾಪ್‌ಗೆ 5 ಲಕ್ಷ, ಪರ್ಪಲ್ ಕ್ಯಾಪ್‌ಗೆ 5 ಲಕ್ಷ, ಕ್ಯಾಚ್ ಆಫ್ ದಿ ಸೀಸನ್‌ಗೆ 5 ಲಕ್ಷ, ಈ ಆವೃತ್ತಿಯ ಉದಯೋನ್ಮುಖ ಆಟಗಾರ್ತಿಗೆ 5 ಲಕ್ಷ, ಸೀಸನ್‌ನ ಪವರ್‌ಫುಲ್ ಸ್ಟ್ರೈಕರ್ 5 ಲಕ್ಷ, ಪಂದ್ಯದ ಆಟಗಾರ್ತಿ (ಫೈನಲ್ ) 2.5 ಲಕ್ಷ, ಸ್ಟ್ರೈಕರ್ ಆಫ್ ದಿ ಮ್ಯಾಚ್ 1 ಲಕ್ಷ ರೂ. ಬಹುಮಾನ ಸಿಗಲಿದೆ.