IPL 2024: ‘ಹಾರ್ದಿಕ್‌ ಮನವೊಲಿಸಲು ಎಂದಿಗೂ ಪ್ರಯತ್ನಿಸಲಿಲ್ಲ’; ಗುಜರಾತ್ ಕೋಚ್ ನೆಹ್ರಾ

IPL 2024: ಐಪಿಎಲ್ ಆರಂಭಕ್ಕೂ ಮುನ್ನ ಪಾಂಡ್ಯ ತಂಡವನ್ನು ತೊರೆದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿರುವ ಕೋಚ್ ಆಶಿಸ್ ನೆಹ್ರಾ, ಹಾರ್ದಿಕ್​ರನ್ನು ತಂಡದಲ್ಲಿಯೇ ಉಳಿಯುವಂತೆ ನಾನು ಎಂದಿಗೂ ಮನವೊಲಿಸುವ ಕೆಲಸ ಮಾಡಲಿಲ್ಲ ಎಂದಿದ್ದಾರೆ.

ಪೃಥ್ವಿಶಂಕರ
|

Updated on: Mar 16, 2024 | 5:45 PM

ಕಳೆದೆರಡು ಆವೃತ್ತಿಗಳಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಫೈನಲ್​ಗೆ ಮುನ್ನಡೆಸಿ ಒಂದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಈ ಬಾರಿಯ ಐಪಿಎಲ್​ನಿಂದ ಮುಂಬೈ ಇಂಡಿಯನ್ಸ್‌ ತಂಡದ ಪರ ನಾಯಕನಾಗಿ ಕಣಕ್ಕಿಳಿಯಲು ತಯಾರಿ ಆರಂಭಿಸಿದ್ದಾರೆ.

1 / 7
ವಾಸ್ತವವಾಗಿ ಲೀಗ್ ಆರಂಭಕ್ಕೂ ಮುನ್ನ ನಡೆದ ಮಿನಿ ಹರಾಜಿನ ಬಳಿಕ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಟ್ರೇಡಿಂಗ್ ಮೂಲಕ ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು. ಎರಡು ಬಾರಿ ತಂಡವನ್ನು ಫೈನಲ್​ನತ್ತ ಮುನ್ನಡೆಸಿದ್ದ ಪಾಂಡ್ಯ ಇದಕ್ಕಿದಂತೆ ಗುಜರಾತ್ ತಂಡವನ್ನು ತೊರೆದಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.

2 / 7
ಇತ್ತ ಮುಂಬೈ ಇಂಡಿಯನ್ಸ್‌ ತಂಡವನ್ನು ಸೇರಿಕೊಂಡ ಹಾರ್ದಿಕ್ ಪಾಂಡ್ಯಗೆ ತಂಡದ ನಾಯಕತ್ವವನ್ನು ನೀಡಲಾಯಿತು. ಯಶಸ್ವಿ ನಾಯಕ ರೋಹಿತ್​ ಶರ್ಮಾರನ್ನು ಕೆಳಗಿಳಿಸಿ ಪಾಂಡ್ಯಗೆ ನಾಯಕತ್ವ ಹಸ್ತಾಂತರಿಸಿದಕ್ಕೆ ರೋಹಿತ್ ಅಭಿಮಾನಿಗಳು ಮುಂಬೈ ಪ್ರಾಂಚೈಸಿ ವಿರುದ್ಧ ಕಿಡಿಕಾರಿದ್ದರು

3 / 7
ಆದರೆ ಹಾರ್ದಿಕ್ ಪಾಂಡ್ಯ ಗುಜರಾತ್ ತಂಡವನ್ನು ಏಕೆ ತೊರೆದರು ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಇದಕ್ಕೆ ಪೂರಕವಾಗಿ ಪಾಂಡ್ಯ ತಂಡವನ್ನು ತೊರೆದಿದ್ದು ಏಕೆ ಎಂಬುದಕ್ಕೆ ಗುಜರಾತ್ ಫ್ರಾಂಚೈಸಿಯಾಗಲಿ ಅಥವಾ ತಂಡದ ಕೋಚ್ ಆಶಿಸ್ ನೆಹ್ರಾ ಆಗಲಿ ಯಾವುದೇ ಹೇಳಿಕೆ ನೀಡಿರಲಿಲ್ಲ.

4 / 7
ಆದರೀಗ ಐಪಿಎಲ್ ಆರಂಭಕ್ಕೂ ಮುನ್ನ ಪಾಂಡ್ಯ ತಂಡವನ್ನು ತೊರೆದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿರುವ ಕೋಚ್ ಆಶಿಸ್ ನೆಹ್ರಾ, ಹಾರ್ದಿಕ್​ರನ್ನು ತಂಡದಲ್ಲಿಯೇ ಉಳಿಯುವಂತೆ ನಾನು ಎಂದಿಗೂ ಮನವೊಲಿಸುವ ಕೆಲಸ ಮಾಡಲಿಲ್ಲ ಎಂದಿದ್ದಾರೆ.

5 / 7
ಈ ಬಗ್ಗೆ ಮಾತನಾಡಿರುವ ನೆಹ್ರಾ, ‘ನಾನು ಹಾರ್ದಿಕ್‌ಗೆ ಮನವೊಲಿಸಲು ಎಂದಿಗೂ ಪ್ರಯತ್ನಿಸಲಿಲ್ಲ. ಆಟವು ಪ್ರಗತಿಯಲ್ಲಿರುವ ರೀತಿಯಲ್ಲಿ ಆಟಗಾರರು ಪ್ರಸ್ತುತ ತಂಡವನ್ನು ತೊರೆದು ಬೇರೆ ತಂಡವನ್ನು ಸೇರಿಕೊಳ್ಳುವುದು ಸರ್ವೆ ಸಾಮಾನ್ಯ ಆಟಗಾರರ ಈ ರೀತಿಯ ನಡೆಯನ್ನು ನಾವು ಫುಟ್‌ಬಾಲ್​ನಲ್ಲಿ ನೋಡಬಹುದು.

6 / 7
ಹೀಗಾಗಿ ನಾವು ಹಾರ್ದಿಕ್‌ಗೆ ಗುಜರಾತ್‌ ತಂಡದಲ್ಲಿ ಇರುವಂತೆ ನಾವು ಮನವೊಲಿಸುವ ಕೆಲಸ ಮಾಡಲಿಲ್ಲ. ಅವರು ಹೋಗಬೇಕೆಂದು ಬಯಸಿದ್ದರು ಮತ್ತು ಹೋದರು ಎಂದು ಆಶಿಶ್ ನೆಹ್ರಾ ಸ್ಪಷ್ಟವಾಗಿ ಹೇಳಿದ್ದಾರೆ. ಇದರರ್ಥ ಪಾಂಡ್ಯ ಒಬ್ಬರಿಂದ ತಂಡ ಯಶಸ್ಸಿನತ್ತ ಸಾಗಲಿಲ್ಲ ಎಂಬುದು ನೆಹ್ರಾ ಅವರ ಮಾತಿನಿಂದ ಸ್ಪಷ್ಟವಾದಂತ್ತಾಗಿದೆ.

7 / 7
Follow us
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ

ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್

ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ

ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್

ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ

ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್

ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ

Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ

‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ