WTC Final 2023: ಡಬ್ಲ್ಯುಟಿಸಿ ಫೈನಲ್​ನಲ್ಲಿ ಹಲವು ದಾಖಲೆಗಳ ಮೇಲೆ ಕಣ್ಣಿಟ್ಟ ಅಜಿಂಕ್ಯ ರಹಾನೆ..!

Updated on: May 31, 2023 | 6:23 PM

Ajinkya Rahane: ರಹಾನೆ ಈಗ ಡಬ್ಲ್ಯುಟಿಸಿ ಫೈನಲ್‌ಗಾಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಮರಳಿದ್ದು, ಇದೀಗ ಹಲವು ದಾಖಲೆಗಳನ್ನು ಸೃಷ್ಟಿಸುವ ಅವಕಾಶ ಸಿಕ್ಕಿದೆ.

1 / 7
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಜೂನ್ 7 ಮತ್ತು 11 ರ ನಡುವೆ ಇಂಗ್ಲೆಂಡ್‌ನ ಓವಲ್‌ನಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿದ್ದ ಭಾರತ ಇದೀಗ ಈ ತಂಡದ ವಿರುದ್ಧವೇ ಫೈನಲ್ ಆಡಲಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಜೂನ್ 7 ಮತ್ತು 11 ರ ನಡುವೆ ಇಂಗ್ಲೆಂಡ್‌ನ ಓವಲ್‌ನಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿದ್ದ ಭಾರತ ಇದೀಗ ಈ ತಂಡದ ವಿರುದ್ಧವೇ ಫೈನಲ್ ಆಡಲಿದೆ.

2 / 7

ಈ ಫೈನಲ್​ಗಾಗಿ ಈಗಾಗಲೇ ಟೀಂ ಇಂಡಿಯಾ ಲಂಡನ್ ತಲುಪಿದ್ದು, ಮೂರನೇ ಬ್ಯಾಚ್​ನಲ್ಲಿ ಅಜಿಂಕ್ಯ ರಹಾನೆ ಜೊತೆಗೆ ಕೆಎಸ್ ಭರತ್, ಶುಭ್​ಮನ್ ಗಿಲ್, ಶಮಿ ಮತ್ತು ರವೀಂದ್ರ ಜಡೇಜಾ ಐಪಿಎಲ್ 2023 ರ ಫೈನಲ್ ಮುಕ್ತಾಯದ ನಂತರ ಲಂಡನ್ ತಲುಪಿದ್ದಾರೆ.

3 / 7

ಇನ್ನು ಐಪಿಎಲ್​ನಲ್ಲಿ ಸಿಎಸ್‌ಕೆ ಪರ ಆಡಿದ್ದ ಅಜಿಂಕ್ಯ ರಹಾನೆ 14 ಪಂದ್ಯಗಳಲ್ಲಿ 172.49 ಸ್ಟ್ರೈಕ್ ರೇಟ್‌ನೊಂದಿಗೆ 326 ರನ್ ಬಾರಿಸಿದರು. ಈ ಅದ್ಭುತ ಪ್ರದರ್ಶನವೇ ರಹಾನೆಗೆ ಟೀಂ ಇಂಡಿಯಾದಲ್ಲಿ ಮತ್ತೆ ಅವಕಾಶ ಸಿಗುವಂತೆ ಮಾಡಿತು.

4 / 7

ಹೀಗಾಗಿ ರಹಾನೆ ಈಗ ಡಬ್ಲ್ಯುಟಿಸಿ ಫೈನಲ್‌ಗಾಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಮರಳಿದ್ದು, ಇದೀಗ ರಹಾನೆಗೆ ಹಲವು ದಾಖಲೆಗಳನ್ನು ಸೃಷ್ಟಿಸುವ ಅವಕಾಶ ಸಿಕ್ಕಿದೆ.

5 / 7

ಭಾರತ ಟೆಸ್ಟ್ ಕ್ರಿಕೆಟ್‌ನಲ್ಲಿ ರಹಾನೆ ಇದುವರೆಗೆ 4931 ರನ್ ಬಾರಿಸಿದ್ದುಇನ್ನು 69 ರನ್ ಸಿಡಿಸಿದರೆ ಟೆಸ್ಟ್ ಕ್ರಿಕೆಟ್‌ನಲ್ಲಿ 5000 ರನ್ ಪೂರೈಸಲಿದ್ದಾರೆ. ರಹಾನೆ ಟೆಸ್ಟ್ ಕ್ರಿಕೆಟ್​ನಲ್ಲಿ 12 ಶತಕ ಹಾಗೂ 25 ಅರ್ಧಶತಕಗಳನ್ನೂ ಸಿಡಿಸಿದ್ದಾರೆ.

6 / 7

ಇನ್ನು ಟೀಂ ಇಂಡಿಯಾದ ಉತ್ತಮ ಫೀಲ್ಡರ್​ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ರಹಾನೆ ಇದುವರೆಗೆ ಆಡಿರುವ ವ 82 ಪಂದ್ಯಗಳಲ್ಲಿ 99 ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ಇನ್ನೂ ಒಂದು ಕ್ಯಾಚ್‌ ಹಿಡಿದರೆ 100 ಕ್ಯಾಚ್‌ಗಳನ್ನು ಪೂರ್ಣಗೊಳಿಸಲಿದ್ದಾರೆ.

7 / 7

ಒಟ್ಟಾರೆಯಾಗಿ ರಹಾನೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 12,865 ರನ್‌ ಕಲೆಹಾಕಿದ್ದು, ಇನ್ನೂ 135 ರನ್‌ ಬಾರಿಸಿದರೆ ತಮ್ಮ 13,000 ರನ್‌ಗಳನ್ನು ಪೂರ್ಣಗೊಳಿಸಲಿದ್ದಾರೆ.

Published On - 6:21 pm, Wed, 31 May 23

Loading...
Unable to load recommendations.
Follow Us