
ಇನ್ನು ಕೆಲವೇ ದಿನಗಳಲ್ಲಿ ಲಂಡನ್ನ ಓವಲ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಭಾರತ ತಂಡ ಸತತ ಎರಡನೇ ಬಾರಿಗೆ ಈ ಟೂರ್ನಿಯಲ್ಲಿ ಫೈನಲ್ ಆಡಲಿದೆ. ಇನ್ನು ಮೊದಲ ಬಾರಿಗೆ ಫೈನಲ್ಗೆ ಎಂಟ್ರಿಕೊಟ್ಟಿರುವ ಕಾಂಗರೂ ಪಡೆ ಯಾವ ಹನ್ನೊಂದರ ಬಳಗದೊಂದಿಗೆ ಕಣಕ್ಕಿಳಿಯಲಿದೆ ಎಂಬುದು ಎಲ್ಲರ ಕುತೂಹಲವಾಗಿದೆ. ಆ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಭಾರತದ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಆಡಿದ ತಂಡವೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆಡುವ ಸಾಧ್ಯತೆಗಳಿವೆ. ಹಾಗಿದ್ದರೆ ಫೈನಲ್ ಪಂದ್ಯದಲ್ಲಿ ಆಸೀಸ್ ತಂಡದಲ್ಲಿ ಯಾರಿಗೆಲ್ಲ ಅವಕಾಶ ಸಿಗಲಿದೆ ಎಂಬುದನ್ನು ನೋಡುವುದಾದರೆ..

ಡೇವಿಡ್ ವಾರ್ನರ್

ಉಸ್ಮಾನ್ ಖವಾಜಾ

ಮಾರ್ನಸ್ ಲಬುಶೇನ್

ಸ್ಟೀವ್ ಸ್ಮಿತ್

ಟ್ರಾವಿಸ್ ಹೆಡ್

ಕ್ಯಾಮರೂನ್ ಗ್ರೀನ್

ಅಲೆಕ್ಸ್ ಕ್ಯಾರಿ

ಪ್ಯಾಟ್ ಕಮ್ಮಿನ್ಸ್

ಮಿಚೆಲ್ ಸ್ಟಾರ್ಕ್

ನಾಥನ್ ಲಿಯಾನ್

ಜೋಶ್ ಹ್ಯಾಜಲ್ವುಡ್