WTC Final 2023: ಓವಲ್ ಮೈದಾನದಲ್ಲಿ ಉಭಯ ತಂಡಗಳ ಪ್ರದರ್ಶನ ಹೇಗಿದೆ ಗೊತ್ತಾ?
WTC Final 2023: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇದುವರೆಗೆ ಒಟ್ಟು 106 ಟೆಸ್ಟ್ ಪಂದ್ಯಗಳು ನಡೆದಿವೆ. ಇದರಲ್ಲಿ ಆಸ್ಟ್ರೇಲಿಯಾ 44 ಪಂದ್ಯಗಳನ್ನು ಗೆದ್ದಿದ್ದರೆ, ಭಾರತ ತಂಡ 32 ಪಂದ್ಯಗಳನ್ನು ಗೆದ್ದಿದೆ.
1 / 7
ಲಂಡನ್‌ನ ಓವಲ್ ಮೈದಾನದಲ್ಲಿ ಜೂನ್ 7 ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಭಾರತ- ಆಸ್ಟ್ರೇಲಿಯಾ ತಂಡಗಳು ಸಜ್ಜಾಗಿವೆ. ಈ ಉಭಯ ತಂಡಗಳಿಗೂ ಓವಲ್ ಮೈದಾನ ತಟಸ್ಥ ವೇದಿಕೆಯಾಗಿದ್ದು, ಇಲ್ಲಿ ಎರಡೂ ತಂಡಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಈ ಮೈದಾನದಲ್ಲಿ ಉಭಯ ತಂಡಗಳ ಟೆಸ್ಟ್ ದಾಖಲೆಯನ್ನು ನೋಡುವುದಾದರೆ..
2 / 7
ಭಾರತ ತಂಡ ಇದುವರೆಗೆ ಓವಲ್‌ನಲ್ಲಿ 14 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದರಲ್ಲಿ ಭಾರತ ತಂಡ ಕೇವಲ 2 ಪಂದ್ಯಗಳನ್ನು ಗೆದ್ದಿದ್ದರೆ, 5 ಪಂದ್ಯಗಳಲ್ಲಿ ಸೋತಿದೆ. ಹಾಗೆಯೇ 7 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ.
3 / 7
ಇನ್ನು 2021 ರಲ್ಲಿ ಇದೇ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದ ಟೀಮ್ ಇಂಡಿಯಾ 157 ರನ್‌ಗಳಿಂದ ಗೆಲುವು ಸಾಧಿಸಿತ್ತು.
4 / 7
ಆ ಪಂದ್ಯದಲ್ಲಿ ಭಾರತದ ಹಾಲಿ ನಾಯಕ ರೋಹಿತ್ ಶರ್ಮಾ 127 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
5 / 7
ಆಸ್ಟ್ರೇಲಿಯ ತಂಡ ಇಲ್ಲಿ ಒಟ್ಟು 38 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಈ ಪೈಕಿ ತಂಡ ಕೇವಲ 7ರಲ್ಲಿ ಗೆಲುವು ಸಾಧಿಸಿದ್ದರೆ, 17 ಪಂದ್ಯಗಳಲ್ಲಿ ಸೋಲನುಭವಿಸಿದೆ. ಇನ್ನುಳಿದಂತೆ 14 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ.
6 / 7
ಹಾಗೆಯೇ ಉಭಯ ತಂಡಗಳ ಟೆಸ್ಟ್ ಮುಖಾಮುಖಿಯನ್ನು ನೋಡುವುದಾದರೆ, ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇದುವರೆಗೆ ಒಟ್ಟು 106 ಟೆಸ್ಟ್ ಪಂದ್ಯಗಳು ನಡೆದಿವೆ. ಇದರಲ್ಲಿ ಆಸ್ಟ್ರೇಲಿಯಾ 44 ಪಂದ್ಯಗಳನ್ನು ಗೆದ್ದಿದ್ದರೆ, ಭಾರತ ತಂಡ 32 ಪಂದ್ಯಗಳನ್ನು ಗೆದ್ದಿದೆ. 29 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದ್ದು, ಒಂದು ಪಂದ್ಯ ಟೈ ಆಗಿದೆ.
7 / 7
ಭಾರತ ಕೊನೆಯದಾಗಿ 2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ರೂಪದಲ್ಲಿ ಐಸಿಸಿ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಹೀಗಿರುವಾಗ 10 ವರ್ಷಗಳಿಂದ ಕಾಡುತ್ತಿರುವ ಐಸಿಸಿ ಟ್ರೋಫಿಯ ಬರವನ್ನು ಟೀಂ ಇಂಡಿಯಾ ಕೊನೆಗೊಳಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ.