WTC Final 2023: ಯಾರಾಗಲಿದ್ದಾರೆ ಟೀಮ್ ಇಂಡಿಯಾ ವಿಕೆಟ್ ಕೀಪರ್?

| Updated By: ಝಾಹಿರ್ ಯೂಸುಫ್

Updated on: Jun 03, 2023 | 10:23 PM

WTC Final 2023: ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್.

1 / 7
WTC Final 2023: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯಕ್ಕೆ ಇನ್ನು ದಿನಗಳು ಮಾತ್ರ ಉಳಿದಿವೆ. ಜೂನ್ 7 ರಿಂದ ಇಂಗ್ಲೆಂಡ್​ನ ಓವಲ್ ಮೈದಾನದಲ್ಲಿ ಶುರುವಾಗಲಿರುವ ಫೈನಲ್ ಪಂದ್ಯಕ್ಕಾಗಿ ಈಗಾಗಲೇ ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡಿವೆ. ಇದರ ನಡುವೆ ಟೀಮ್ ಇಂಡಿಯಾಗೆ ಹೊಸ ಚಿಂತೆಯೊಂದು ಶುರುವಾಗಿದೆ.

2 / 7
ಏಕೆಂದರೆ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್ ಪ್ರಸ್ತುತ ತಂಡದಲ್ಲಿಲ್ಲ. ಇನ್ನು ಹೆಚ್ಚುವರಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಯ್ಕೆಯಾಗಿದ್ದ ಕೆಎಲ್ ರಾಹುಲ್ ಕೂಡ ಗಾಯದ ಕಾರಣ ಫೈನಲ್ ಪಂದ್ಯದಿಂದ ಹೊರಗುಳಿದಿದ್ದಾರೆ.

3 / 7
ಇದೀಗ ತಂಡದಲ್ಲಿ ವಿಕೆಟ್ ಕೀಪರ್​ಗಳಾಗಿ ಸ್ಥಾನ ಪಡೆದಿರುವುದು ಕೆಎಸ್ ಭರತ್ ಹಾಗೂ ಇಶಾನ್ ಕಿಶನ್. ಇವರಿಬ್ಬರಿಗೂ ಅನುಭವದ ಕೊರೆತೆಯಿದೆ. ಅದರಲ್ಲೂ ವಿದೇಶಿ ಪಿಚ್​ನಲ್ಲಿ ಟೆಸ್ಟ್ ಆಡಿದ ಯಾವುದೇ ಅನುಭವವಿಲ್ಲ. ಹೀಗಾಗಿ ಇವರಿಬ್ಬರಲ್ಲಿ ಯಾರನ್ನು ಪ್ಲೇಯಿಂಗ್ ಇಲೆವೆನ್​ಗೆ ಆಯ್ಕೆ ಮಾಡಲಿದ್ದಾರೆ ಎಂಬುದೇ ಪ್ರಶ್ನೆ.

4 / 7
ಇಲ್ಲಿ ಕೆಎಸ್ ಭರತ್ ಟೀಮ್ ಇಂಡಿಯಾ ಪರ ಕೇವಲ 4 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕಲೆಹಾಕಿದ ಒಟ್ಟು ಸ್ಕೋರ್ ಕೇವಲ 101 ರನ್ ಮಾತ್ರ. ಇದಲ್ಲದೆ 7 ಕ್ಯಾಚ್ ಹಾಗೂ 1 ಸ್ಟಂಪ್ ಔಟ್ ಮಾಡಿದ್ದಾರೆ.

5 / 7
ಮತ್ತೊಂದೆಡೆ ಇಶಾನ್ ಕಿಶನ್ ಇನ್ನೂ ಕೂಡ ಟೆಸ್ಟ್ ಕ್ರಿಕೆಟ್​ ಪಾದರ್ಪಣೆ ಮಾಡಿಲ್ಲ. ಇದಾಗ್ಯೂ ಟೀಮ್ ಇಂಡಿಯಾ ಪರ ಏಕದಿನ ಹಾಗೂ ಟಿ20 ಕ್ರಿಕೆಟ್​ನಲ್ಲಿ ಹಲವು ಬಾರಿ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದ್ದಾರೆ. ಈ ವೇಳೆ ಒಟ್ಟು 17 ಕ್ಯಾಚ್ ಹಾಗೂ 4 ಸ್ಟಂಪ್ ಔಟ್ ಮಾಡಿದ್ದಾರೆ.

6 / 7
ಅಂದರೆ ಇಲ್ಲಿ ಇಬ್ಬರಿಗೂ ಟೆಸ್ಟ್ ಕ್ರಿಕೆಟ್​ನ ಅನುಭವದ ಕೊರತೆ ಇರುವುದು ಸ್ಪಷ್ಟ. ಇದಾಗ್ಯೂ ಕೆಲ ಪಂದ್ಯಗಳನ್ನಾಡಿದ ಕೆಎಸ್ ಭರತ್​ಗೆ ಅವಕಾಶ ನೀಡಲಿದ್ದಾರಾ? ಅಥವಾ ಆಕ್ರಮಣಕಾರಿ ಬ್ಯಾಟಿಂಗ್​ಗಾಗಿ ಇಶಾನ್ ಕಿಶನ್​ ಅವರನ್ನು ಕಣಕ್ಕಿಳಿಸಲಿದ್ದಾರಾ ಕಾದು ನೋಡಬೇಕಿದೆ.

7 / 7
ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ಗೆ ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್, ಇಶಾನ್ ಕಿಶನ್ (ವಿಕೆಟ್ ಕೀಪರ್).