- Kannada News Photo gallery Cricket photos Kannada News | WTC Final 2023: Tom Moody’s India playing XI for WTC final
WTC Final 2023: ಟೀಮ್ ಇಂಡಿಯಾ ಪ್ಲೇಯಿಂಗ್ 11 ಹೆಸರಿಸಿದ ಟಾಮ್ ಮೂಡಿ
WTC Final 2023: ಪಂದ್ಯಕ್ಕೆ ಭಾರತ ತಂಡದ ಸ್ಟಾರ್ ಆಟಗಾರರಾದ ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್, ರಿಷಭ್ ಪಂತ್ ಅಲಭ್ಯರಾಗಿದ್ದಾರೆ. ಹೀಗಾಗಿ ಇವರ ಸ್ಥಾನದಲ್ಲಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದೇ ಕುತೂಹಲ.
Updated on: Jun 03, 2023 | 9:22 PM

WTC Final 2023: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕಾಗಿ ದಿನಗಣನೆ ಶುರುವಾಗಿದೆ. ಜೂನ್ 7 ರಿಂದ ಇಂಗ್ಲೆಂಡ್ ಓವಲ್ನ ಮೈದಾನದಲ್ಲಿ ಶುರುವಾಗಲಿರುವ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ.

ಉಭಯ ತಂಡಗಳು ಬಲಿಷ್ಠವಾಗಿರುವ ಕಾರಣ ಈ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದೇ ಈಗ ಕುತೂಹಲ. ಅದರಲ್ಲೂ ಟೀಮ್ ಇಂಡಿಯಾದಿಂದ ಸ್ಟಾರ್ ಆಟಗಾರರು ಹೊರಗುಳಿದಿರುವ ಕಾರಣ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ ಕಂಡು ಬರುವುದು ಖಚಿತ.

ಏಕೆಂದರೆ ಈ ಪಂದ್ಯಕ್ಕೆ ಭಾರತ ತಂಡದ ಸ್ಟಾರ್ ಆಟಗಾರರಾದ ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್, ರಿಷಭ್ ಪಂತ್ ಅಲಭ್ಯರಾಗಿದ್ದಾರೆ. ಹೀಗಾಗಿ ಇವರ ಸ್ಥಾನದಲ್ಲಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಈ ಕುತೂಹಲಕ್ಕೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಟಾಮ್ ಮೂಡಿ.

ಚಾನೆಲ್ ಚರ್ಚೆಯೊಂದರಲ್ಲಿ ಮಾತನಾಡಿದ ಟಾಮ್ ಮೂಡಿ, ಭಾರತ ತಂಡವು ಮಧ್ಯಮ ಕ್ರಮಾಂಕವನ್ನು ಮತ್ತಷ್ಟು ಬಲಪಡಿಸಬೇಕು. ಹೀಗಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಪಿನ್ ಆಲ್ರೌಂಡರ್ ಅಶ್ವಿನ್ಗಿಂತ ಅಜಿಂಕ್ಯ ರಹಾನೆಗೆ ಚಾನ್ಸ್ ನೀಡುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಾಗೆಯೇ ವಿಕೆಟ್ ಕೀಪರ್ ಆಗಿ ಯುವ ದಾಂಡಿಗ ಇಶಾನ್ ಕಿಶನ್ಗಿಂತಲೂ ಕೆಎಸ್ ಭರತ್ ಅವರನ್ನು ಆಯ್ಕೆ ಮಾಡುವುದು ಸೂಕ್ತ ಎಂದಿದ್ದಾರೆ. ಏಕೆಂದರೆ ತಂಡದಲ್ಲಿ ಜಡೇಜಾ, ಶಾರ್ದೂಲ್ರಂತಹ ಆಲ್ರೌಂಡರ್ಗಳಿದ್ದಾರೆ. ಹೀಗಾಗಿ ಭರತ್ಗೆ ಚಾನ್ಸ್ ನೀಡುವುದು ಉತ್ತಮ ಎಂದಿದ್ದಾರೆ. ಅದರಂತೆ ಟಾಮ್ ಮೂಡಿ ಆಯ್ಕೆ ಮಾಡಿದ ಟೀಮ್ ಇಂಡಿಯಾ ಆಡುವ ಬಳಗ ಈ ಕೆಳಗಿನಂತಿದೆ...

ರೋಹಿತ್ ಶರ್ಮಾ (ನಾಯಕ)

ಶುಭಮನ್ ಗಿಲ್

ಚೇತೇಶ್ವರ ಪೂಜಾರ

ವಿರಾಟ್ ಕೊಹ್ಲಿ

ಅಜಿಂಕ್ಯ ರಹಾನೆ

ಕೆಎಸ್ ಭರತ್ (ವಿಕೆಟ್ ಕೀಪರ್)

ರವೀಂದ್ರ ಜಡೇಜಾ

ಶಾರ್ದೂಲ್ ಠಾಕೂರ್

ಮೊಹಮ್ಮದ್ ಶಮಿ

ಮೊಹಮ್ಮದ್ ಸಿರಾಜ್

ಉಮೇಶ್ ಯಾದವ್
