WTC: ಕನ್ನಡಿಗನಿಗೆ 2ನೇ ಸ್ಥಾನ; ಡಬ್ಲ್ಯುಟಿಸಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿರುವ ಟೀಂ ಇಂಡಿಯಾ ಆಟಗಾರರಿವರು

WTC: ಕಿವೀಸ್ ವಿರುದ್ಧ ಮೊದಲ ಆವೃತ್ತಿಯ ಫೈನಲ್ ಆಡಿದ್ದ ಭಾರತಕ್ಕೆ ಚಾಂಪಿಯನ್ ಪಟ್ಟ ದೊರಕಿರಲಿಲ್ಲ. ಇದೀಗ ಕಾಂಗರೂಗಳ ವಿರುದ್ಧ ಫೈನಲ್​ ಕಾಳಗ ನಡೆಸುತ್ತಿರುವ ಟೀಂ ಇಂಡಿಯಾಕ್ಕೆ ಟೆಸ್ಟ್ ವಿಶ್ವಕಪ್ ಗೆಲ್ಲುವ ಎರಡನೇ ಅವಕಾಶ ದೊರೆತಿದೆ.

ಪೃಥ್ವಿಶಂಕರ
|

Updated on: Jun 03, 2023 | 5:21 PM

ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ಗೆ ಟೀಂ ಇಂಡಿಯಾ ಸಜ್ಜಾಗಿದೆ. ಕಿವೀಸ್ ವಿರುದ್ಧ ಮೊದಲ ಆವೃತ್ತಿಯ ಫೈನಲ್ ಆಡಿದ್ದ ಭಾರತಕ್ಕೆ ಚಾಂಪಿಯನ್ ಪಟ್ಟ ದೊರಕಿರಲಿಲ್ಲ. ಇದೀಗ ಕಾಂಗರೂಗಳ ವಿರುದ್ಧ ಫೈನಲ್​ ಕಾಳಗ ನಡೆಸುತ್ತಿರುವ ಟೀಂ ಇಂಡಿಯಾಕ್ಕೆ ಟೆಸ್ಟ್ ವಿಶ್ವಕಪ್ ಗೆಲ್ಲುವ ಎರಡನೇ ಅವಕಾಶ ದೊರೆತಿದೆ.

1 / 7
ಇನ್ನು ಈ ಎರಡು ಆವೃತ್ತಿಗಳಲ್ಲಿ ಟೀಂ ಇಂಡಿಯಾ ಪರ ಹಲವು ಆಟಗಾರರ ಅದ್ಭುತ ಪ್ರದರ್ಶನ ನೀಡಿದ್ದಾರೆ. ತವರು ಹಾಗೂ ವಿದೇಶಿ ನೆಲದಲ್ಲಿ ಶತಕದ ಮೇಲೆ ಶತಕ ಬಾರಿಸುತ್ತಾ ಟೀಂ ಇಂಡಿಯಾ ಫೈನಲ್​ಗೇರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಹಾಗಿದ್ದರೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಟೀಂ ಇಂಡಿಯಾ ಪರ  ಅತಿ ಹೆಚ್ಚು ಶತಕ ಸಿಡಿಸಿರುವ ಆಟಗಾರರು ಯಾರು ಎಂಬುದನ್ನು ನೋಡುವುದಾದರೆ..

2 / 7
ರೋಹಿತ್ ಶರ್ಮಾ, 6 ಶತಕ: ಪ್ರಸ್ತುತ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಈ ಎರಡೂ ಆವೃತ್ತಿಯಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಾರೆ. 2019-21 ರ ಮೊದಲ ಆವೃತ್ತಿಯಲ್ಲಿ 12 ಟೆಸ್ಟ್ ಪಂದ್ಯಗಳನ್ನಾಡಿದ್ದ ಶರ್ಮಾ ನಾಲ್ಕು ಶತಕಗಳೊಂದಿಗೆ 1,094 ರನ್ ಕಲೆಹಾಕಿದ್ದರು. ಆದರೆ 2021-23 ರ ಎರಡನೇ ಆವೃತ್ತಿಯಲ್ಲಿ ರೋಹಿತ್ ಪ್ರದರ್ಶನ ಅಷ್ಟು ಉತ್ತಮವಾಗಿಲ್ಲ. ಹೀಗಾಗಿ ರೋಹಿತ್ ಕೇವಲ ಎರಡು ಶತಕಗಳೊಂದಿಗೆ 700 ರನ್ ಬಾರಿಸಿದ್ದಾರೆ.

3 / 7
ಮಯಾಂಕ್ ಅಗರ್ವಾಲ್, 4 ಶತಕ: ಟೀಂ ಇಂಡಿಯಾದ ಮಾಜಿ ಓಪನರ್, ಮಯಾಂಕ್ ಅಗರ್ವಾಲ್ ಮೊದಲ ಆವೃತ್ತಿಯಲ್ಲಿ ಆಡಿದ 12 ಟೆಸ್ಟ್‌ಗಳಲ್ಲಿ ಮೂರು ಶತಕಗಳು ಸೇರಿದಂತೆ 857 ರನ್‌ ಬಾರಿಸಿದ್ದರು. ಆದರೆ ಎರಡನೇ ಆವೃತ್ತಿಯಲ್ಲಿ ಫಾರ್ಮ್​ ಕಳೆದುಕೊಂಡ ಅಗರ್ವಾಲ್, ಏಳು ಪಂದ್ಯಗಳನ್ನಾಡಿ ಕೇವಲ ಒಂದು ಶತಕದೊಂದಿಗೆ 436 ರನ್‌ ಕಲೆಹಾಕಿದ್ದಾರೆ.

4 / 7
ಅಜಿಂಕ್ಯ ರಹಾನೆ, 3 ಶತಕ: ಭಾರತೀಯ ಟೆಸ್ಟ್ ತಂಡಕ್ಕೆ ಪುನರಾಗಮನವನ್ನು ಮಾಡಿರುವ ಮಾಜಿ ನಾಯಕ ಅಜಿಂಕ್ಯ ರಹಾನೆ ಮೊದಲ ಆವೃತ್ತಿಯಲ್ಲಿ ಮೂರು ಶತಕಗಳೊಂದಿಗೆ 1,159 ರನ್‌ ಕಲೆಹಾಕಿದ್ದರು. ಆದರೆ ಫಾರ್ಮ್​ ಕೊರತೆಯಿಂದಾಗಿ ರಹಾನೆ ಎರಡನೇ ಆವೃತ್ತಿಯಲ್ಲಿ ಆಡಿಲ್ಲ.

5 / 7
ವಿರಾಟ್ ಕೊಹ್ಲಿ, 3 ಶತಕ: ಕಿಂಗ್ ಕೊಹ್ಲಿ ಮೊದಲ ಆವೃತ್ತಿಯಲ್ಲಿ ಎರಡು ಶತಕಗಳೊಂದಿಗೆ 934 ರನ್‌ ಬಾರಿಸಿದ್ದರು. ಇನ್ನು ಎರಡನೇ ಆವೃತ್ತಿಯಲ್ಲಿ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ಕೊಹ್ಲಿ, ಈ ವರ್ಷದ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕೈಕ ಶತಕ ಸಿಡಿಸಿದರು.

6 / 7
ರಿಷಬ್ ಪಂತ್, 3 ಶತಕ: ಸದ್ಯ ಟೀಂ ಇಂಡಿಯಾದಿಂದ ಹೊರಗಿರುವ ಪಂತ್, ಮೊದಲ ಆವೃತ್ತಿಯಲ್ಲಿ ಆಡಿದ 12 ಟೆಸ್ಟ್‌ಗಳಿಂದ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳೊಂದಿಗೆ 707 ರನ್ ಬಾರಿಸಿದರು. ಎರಡನೇ ಆವೃತ್ತಿಯಲ್ಲೂ ಅಬ್ಬರಿಸಿದ್ದ ಪಂತ್, ಎರಡು ಶತಕ ಮತ್ತು ಐದು ಅರ್ಧ ಶತಕಗಳೊಂದಿಗೆ 868 ರನ್ ಕಲೆ ಹಾಕಿದ್ದರು.

7 / 7
Follow us
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ

ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್

ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ