WTC Final 2023: ಫೈನಲ್ ಪಂದ್ಯಕ್ಕೆ ಗ್ರೀನ್ ಪಿಚ್: ಬ್ಯಾಟರ್ಗಳಿಗೆ ನಡುಕ ಶುರು..!
TV9 Web | Updated By: ಝಾಹಿರ್ ಯೂಸುಫ್
Updated on:
Jun 06, 2023 | 7:30 PM
WTC Final 2023: ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ನಾಲ್ವರು ವೇಗಿಗಳು ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದೇ ಹೇಳಬಹುದು. ಹೀಗಾಗಿಯೇ ಗ್ರೀನ್ ಪಿಚ್ನಲ್ಲಿ ಆಸ್ಟ್ರೇಲಿಯಾ ವೇಗಿಗಳನ್ನು ಎದುರಿಸುವುದು ಟೀಮ್ ಇಂಡಿಯಾ ಬ್ಯಾಟರ್ಗಳಿಗೆ ಸವಾಲಾಗಿರಲಿದೆ.
1 / 7
WTC Final 2023: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂಗ್ಲೆಂಡ್ನ ಓವಲ್ ಮೈದಾನದಲ್ಲಿ ನಾಳೆಯಿಂದ (ಜೂ.7) ಆರಂಭವಾಗಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ.
2 / 7
ಇದೀಗ ಓವಲ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯಕ್ಕಾಗಿ ಸಜ್ಜುಗೊಳಿಸಲಾಗಿರುವ ಪಿಚ್ನ ಮೇಲ್ಮೈ ಅನಾವರಣಗೊಂಡಿದೆ. ಹಸಿರು ಹುಲ್ಲಿನಿಂದ ಕೂಡಿರುವ ಪಿಚ್ ಇದೀಗ ಟೀಮ್ ಇಂಡಿಯಾ ಆಟಗಾರರ ಚಿಂತೆಯನ್ನು ಹೆಚ್ಚಿಸಿದೆ.
3 / 7
ಏಕೆಂದರೆ ಗ್ರೀನ್ ಪಿಚ್ ಎಂಬುದು ಬೌಲರ್ಗಳಿಗೆ ಸಹಕಾರಿಯಾಗಿರುತ್ತದೆ. ಅದರಲ್ಲೂ ವೇಗದ ಬೌಲರ್ಗಳಿಗೆ ಹಸಿರು ಮೇಲ್ಮೈ ಪಿಚ್ ಒಂದು ರೀತಿಯ ಸ್ವರ್ಗ. ಏಕೆಂದರೆ ಗ್ರೀನ್ ಪಿಚ್ನಲ್ಲಿ ವೇಗಿಗಳು ಉತ್ತಮವಾಗಿ ಸ್ವಿಂಗ್ ಮಾಡಬಲ್ಲರು.
4 / 7
ಹಾಗೆಯೇ ಅನಿರೀಕ್ಷಿತ ಬೌನ್ಸರ್ಗಳು ಎದುರಾಗಲಿದೆ. ಇದರ ಜೊತೆಗೆ ಚೆಂಡು ವೇಗವಾಗಿ ಪುಟಿದೇಳುವುದರಿಂದ ಬ್ಯಾಟ್ಸ್‌ಮನ್‌ಗಳಿಗೆ ಕ್ರಿಸ್ ಕಚ್ಚಿ ನಿಲ್ಲುವುದೇ ದೊಡ್ಡ ಸವಾಲಾಗಿರುತ್ತದೆ.
5 / 7
ಇತ್ತ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳನ್ನೇ ನೆಚ್ಚಿಕೊಂಡಿರುವ ತಂಡ. ಏಕೆಂದರೆ ತಂಡದಲ್ಲಿ ಅತ್ಯುತ್ತಮ ವೇಗಿಗಳಾಗಿರುವುದು ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್. ಇನ್ನು ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಗಾಯದ ಕಾರಣ ಫೈನಲ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
6 / 7
ಆದರೆ ಅತ್ತ ಎಡಗೈ ವೇಗಿಯಾಗಿ ಮಿಚೆಲ್ ಸ್ಟಾರ್ಕ್ ಇದ್ದು, ಬಲಗೈ ವೇಗಿ ಪ್ಯಾಟ್ ಕಮಿನ್ಸ್ ಸಾಥ್ ನೀಡಲಿದ್ದಾರೆ. ಇದರ ಜೊತೆಗೆ ಸ್ಕಾಟ್ ಬೋಲ್ಯಾಂಡ್ ಕೂಡ ಕಣಕ್ಕಿಳಿಯುವುದು ಖಚಿತ. ಹಾಗೆಯೇ ಆಲ್ರೌಂಡರ್ ಆಗಿ ಕಾಣಿಸಿಕೊಳ್ಳಲಿರುವ ಕ್ಯಾಮರೋನ್ ಗ್ರೀನ್ ಕೂಡ ವೇಗದ ಬೌಲರ್.
7 / 7
ಅಂದರೆ ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ನಾಲ್ವರು ವೇಗಿಗಳು ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದೇ ಹೇಳಬಹುದು. ಹೀಗಾಗಿಯೇ ಗ್ರೀನ್ ಪಿಚ್ನಲ್ಲಿ ಆಸ್ಟ್ರೇಲಿಯಾ ವೇಗಿಗಳನ್ನು ಎದುರಿಸುವುದು ಟೀಮ್ ಇಂಡಿಯಾ ಬ್ಯಾಟರ್ಗಳಿಗೆ ಸವಾಲಾಗಿರಲಿದೆ. ಈ ಸವಾಲನ್ನು ಮೆಟ್ಟಿ ನಿಂತು ಭಾರತ ತಂಡ ವಿಶ್ವ ಚಾಂಪಿಯನ್ ಆಗಲಿದೆಯಾ ಕಾದು ನೋಡಬೇಕಿದೆ.