WTC Final 2023: ‘462′..? ಆಸೀಸ್ ತಂಡಕ್ಕೆ ಎಂಟ್ರಿಕೊಟ್ಟಿರುವ ಮೈಕೆಲ್ ನೆಸರ್ ಬೌಲಿಂಗ್ ಪ್ರದರ್ಶನ ಹೇಗಿದೆ?

|

Updated on: Jun 05, 2023 | 11:28 AM

WTC Final 2023: ಕಳೆದ ಆಶಸ್​​ನಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ತಂಡದಿಂದ ಕೈಬಿಟ್ಟಿದ್ದರಿಂದಾಗಿ ನೆಸರ್​ಗೆ ಆಸೀಸ್ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತ್ತು.

1 / 7
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಜೋಶ್ ಹೇಜಲ್‌ವುಡ್ ಬದಲಿಯಾಗಿ ಆಸ್ಟ್ರೇಲಿಯಾ ತಂಡಕ್ಕೆ ಮೈಕಲ್ ನೆಸರ್ ಅವರನ್ನು ಆಯ್ಕೆ ಮಾಡಲಾಗಿದೆ. ನೆಸರ್ ಈ ಮೊದಲು ಕಳೆದ ಬಾರಿಯ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.

2 / 7
ವಾಸ್ತವವಾಗಿ, 33 ವರ್ಷ ವಯಸ್ಸಿನ ಬಲಗೈ ವೇಗದ ಬೌಲರ್ ನೆಸರ್, ಆಸ್ಟ್ರೇಲಿಯಾ ಪರ ಟೆಸ್ಟ್ ಪಾದಾರ್ಪಣೆ ಮಾಡಿದ 462 ನೇ ಆಟಗಾರರಾಗಿದ್ದಾರೆ. ಕಳೆದ ಆಶಸ್​​ನಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ತಂಡದಿಂದ ಕೈಬಿಟ್ಟಿದ್ದರಿಂದಾಗಿ ನೆಸರ್​ಗೆ ಆಸೀಸ್ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತ್ತು.

3 / 7
ಇದೀಗ ಜೋಶ್ ಹೇಜಲ್‌ವುಡ್ ಬದಲಿಗೆ ತಂಡಕ್ಕೆ ಆಯ್ಕೆಯಾಗಿರುವ ಮೈಕಲ್, ಟೀಂ ಇಂಡಿಯಾ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಇದಕ್ಕೆ ಕಾರಣವೂ ಇದ್ದು, ಈ ಮೊದಲು ನೆಸರ್ ಬೌಲಿಂಗ್​ ಅನ್ನು ಟೀಂ ಇಂಡಿಯಾ ಆಟಗಾರರು ಎದುರಿಸಿಲ್ಲ. ಇದರೊಂದಿಗೆ ಹೇಜಲ್​ವುಡ್ ಸ್ಥಾನಕ್ಕೆ ಮತ್ತೊಬ್ಬ ಸ್ಪರ್ಧಿಯಾಗಿರುವ ಬೋಲ್ಯಾಂಡ್ ಟೀಂ ಇಂಡಿಯಾ ವಿರುದ್ಧ ಅಂತಾ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.

4 / 7
ಇನ್ನು ಮೈಕಲ್ ನೆಸರ್ ಅವರ ವೃತ್ತಿ ಜೀವನವನ್ನು ನೋಡುವುದಾದರೆ, ಡಿಸೆಂಬರ್ 2021 ರಲ್ಲಿ ಆಡಿದ ಆಶಸ್ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಆಸೀಸ್ ತಂಡಕ್ಕೆ ನೆಸರ್ ಪಾದಾರ್ಪಣೆ ಮಾಡಿದರು. ಗ್ಲೆನ್ ಮೆಕ್‌ಗ್ರಾತ್ ಅವರಿಂದ ಟೆಸ್ಟ್ ಕ್ಯಾಪ್ ಪಡೆದ ನೆಸರ್, ತನ್ನ ಮೊದಲ ಟೆಸ್ಟ್‌ನಲ್ಲಿ ಕೇವಲ 2 ವಿಕೆಟ್‌ಗಳನ್ನು ಪಡೆದಿದ್ದರು.

5 / 7
ಮೈಕಲ್ ಇದುವರೆಗೆ ಕೇವಲ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಆ ಎರಡೂ ಟೆಸ್ಟ್​ ಪಂದ್ಯಗಳನ್ನು ಅಡಿಲೇಡ್‌ನಲ್ಲಿಯೇ ಆಡಿದ್ದಾರೆ. ಇದರಲ್ಲಿ ಅವರು 7 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೀಗ ನೆಸರ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನಾಡಿ 6 ತಿಂಗಳುಗಳು ಕಳೆದಿವೆ. ಹೀಗಾಗಿ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಅವರು ಆಡಿದರೆ, ಅದು ಭಾರತದ ವಿರುದ್ಧ ಅವರ ಮೊದಲ ಟೆಸ್ಟ್ ಪಂದ್ಯವಾಗಲಿದೆ.

6 / 7
ಇನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 96 ಪಂದ್ಯಗಳನ್ನಾಡಿರುವ ನೆಸರ್ 347 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮೇ ತಿಂಗಳಿನಲ್ಲಿ ನಡೆದ ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ಗ್ಲಾಮೊರ್ಗಾನ್ ತಂಡದ ಪರ ಆಡಿದ್ದ ನೆಸರ್, ಯಾರ್ಕ್‌ಶೈರ್ ವಿರುದ್ಧದ ಪಂದ್ಯದಲ್ಲಿ ಕೇವಲ 32 ರನ್ ನೀಡಿ ಬರೋಬ್ಬರಿ 7 ವಿಕೆಟ್ ಉರುಳಿಸಿದ್ದರು.

7 / 7
ನೆಸರ್ ತನ್ನ ಟೆಸ್ಟ್‌ಗೆ ಪದಾರ್ಪಣೆ ಮಾಡುವ ಮೊದಲು, 17 ಪಂದ್ಯಗಳಿಗೆ ಆಸೀಸ್ ತಂಡದಲ್ಲಿ ಆಯ್ಕೆಯಾಗಿದ್ದರು. ಆದರೆ, ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೆ ಅವಕಾಶ ಸಿಕ್ಕ ಮೊದಲೆರಡು ಪಂದ್ಯಗಳಲ್ಲಿಯೇ ತನ್ನ ಉಪಯುಕ್ತತೆಯನ್ನು ಸಾಬೀತುಪಡಿಸಿದ ನೆಸರ್, ಈಗ ಡಬ್ಲ್ಯುಟಿಸಿ ಫೈನಲ್‌ನಂತಹ ದೊಡ್ಡ ಪಂದ್ಯಕ್ಕೆ ತಂಡದಲ್ಲಿ ಆಯ್ಕೆಯಾಗಿದ್ದಾರೆ.