WTC Final 2023: ಕಿಂಗ್ ಕೊಹ್ಲಿ ಎಂದರೆ ಆಸೀಸ್ ಬೌಲರ್​ಗಳಿಗೆ ನಡುಕ! ಯಾಕೆ ಗೊತ್ತಾ?

|

Updated on: Jun 03, 2023 | 9:52 AM

WTC Final 2023: ಆಸೀಸ್ ತಂಡದ ವಿರುದ್ಧ ಕೊಹ್ಲಿ 8 ಶತಕ ಸಿಡಿಸಿದ್ದು, ಸುಮಾರು ಎರಡು ಸಾವಿರ ರನ್ ಗಳಿಸಿದ್ದಾರೆ.

1 / 6
ಜೂನ್ 7ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಾಗಿ ಭಾರತ- ಆಸ್ಟ್ರೇಲಿಯಾ ತಂಡಗಳು ಈಗಾಗಲೇ ತಾಲೀಮು ಆರಂಭಿಸಿವೆ. ಉಭಯ ತಂಡಗಳಲ್ಲಿ ಬಲಾಢ್ಯರೇ ತುಂಬಿದ್ದು, ಫೈನಲ್​ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸತತ ಎರಡನೇ ಬಾರಿಗೆ ಭಾರತ ಫೈನಲ್​ಗೆ ಲಗ್ಗೆ ಇಟ್ಟಿದ್ದರೆ, ಕಾಂಗರೂಗಳು ಮೊದಲ ಬಾರಿಗೆ ಫೈನಲ್ ಆಡುತ್ತಿದ್ದಾರೆ. ಹೀಗಾಗಿ ಉಭಯ ತಂಡಗಳಿಗೂ ಇದು ಪ್ರತಿಷ್ಠೆಯ ಕಣವಾಗಿದೆ. ಆದರೆ ಚೊಚ್ಚಲ ಟೆಸ್ಟ್ ಚಾಂಪಿಯನ್​ಶಿಪ್ ಗೆಲ್ಲಬೇಕೆಂದಿರುವ ಕಾಂಗರೂಗಳಿಗೆ ಕಿಂಗ್ ಕೊಹ್ಲಿಯ ಭಯ ಕಾಡಲಾರಂಭಿಸಿದೆ.

2 / 6
ವಾಸ್ತವವಾಗಿ ಆಸೀಸ್ ಪಡೆ ಕಿಂಗ್ ಕೊಹ್ಲಿ ವಿಚಾರದಲ್ಲಿ ಇಷ್ಟೊಂದು ಭಯ ಪಡಲು ಕಾರಣ, ಆಸೀಸ್ ವಿರುದ್ಧ ಕೊಹ್ಲಿಯ ಬ್ಯಾಟಿಂಗ್ ಟ್ರ್ಯಾಕ್ ರೆಕಾರ್ಡ್​. ಅಂದಹಾಗೆ, ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾದ ಮಾಜಿ ನಾಯಕ ಕೊಹ್ಲಿ ದಾಖಲೆ ಅತ್ಯುತ್ತಮವಾಗಿದೆ. ಈ ತಂಡದ ವಿರುದ್ಧ ಕೊಹ್ಲಿ 8 ಶತಕ ಸಿಡಿಸಿದ್ದು, ಸುಮಾರು ಎರಡು ಸಾವಿರ ರನ್ ಗಳಿಸಿದ್ದಾರೆ. ಇದರ ಹೊರತಾಗಿಯೂ, ಕೊಹ್ಲಿ ನಾಯಕ ಪ್ಯಾಟ್ ಕಮಿನ್ಸ್ ವಿರುದ್ಧ ಕೊಂಚ ತಿಣುಕಾಡಿರುವುದನ್ನು ಬಿಟ್ಟರೆ, ಇತರರ ಎದುರು ಅಬ್ಬರಿಸಿದ್ದಾರೆ.

3 / 6
ಇನ್ನು ಆಸೀಸ್ ವೇಗಿಗಳ ವಿರುದ್ಧ ಕೊಹ್ಲಿ ಬ್ಯಾಟ್ ಯಾವ ರೀತಿ ಸದ್ದು ಮಾಡಿದ ಎಂಬುದನ್ನು ನೋಡುವುದಾದರೆ.. ಕೊಹ್ಲಿ ಇಲ್ಲಿಯವರೆಗೆ ಟೆಸ್ಟ್‌ನಲ್ಲಿ ಕಮಿನ್ಸ್ ವಿರುದ್ಧ ಕೇವಲ 82 ರನ್ ಸಿಡಿಸಿದ್ದಾರೆ. ಆದರೆ ಆಸೀಸ್ ನಾಯಕ, ಕಿಂಗ್ ಕೊಹ್ಲಿಯನ್ನು 5 ಬಾರಿ ಬೇಟೆಯಾಡಿದ್ದಾರೆ. ಅಂದರೆ, ಕಮಿನ್ಸ್ ವಿರುದ್ಧ ಕೊಹ್ಲಿ ಕೇವಲ 16ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.

4 / 6
ಇದಕ್ಕೆ ವ್ಯತಿರಿಕ್ತವಾಗಿ, ಪ್ಯಾಟ್ ಕಮ್ಮಿನ್ಸ್ ಅವರನ್ನು ಬಿಟ್ಟರೆ, ಆಸ್ಟ್ರೇಲಿಯಾದ ಇತರ 3 ಪ್ರಮುಖ ಬೌಲರ್‌ಗಳ ವಿರುದ್ಧ, ಕೊಹ್ಲಿಯ ಬ್ಯಾಟ್ ಸಾಕಷ್ಟು ರನ್‌ ಮಳೆ ಸುರಿಸಿದೆ. ಆಸೀಸ್ ಮತ್ತೊಬ್ಬ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ವಿರುದ್ಧ ಕೊಹ್ಲಿ 73 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಅಂದರೆ ಸ್ಟಾರ್ಕ್​ ಬೌಲಿಂಗ್​ನಲ್ಲಿ ಕೊಹ್ಲಿ 211 ರನ್ ಕಲೆ ಹಾಕಿದ್ದು, 3 ಬಾರಿ ಮಾತ್ರ ವಿಕೆಟ್ ಒಪ್ಪಿಸಿದ್ದಾರೆ.

5 / 6
ಹಾಗೆಯೇ ಆರ್​ಸಿಬಿ ತಂಡದಲ್ಲಿ ಆಡುತ್ತಿರುವ ಜೋಶ್ ಹ್ಯಾಜಲ್‌ವುಡ್ ವಿರುದ್ಧವೂ ಉತ್ತಮವಾಗಿ ಬ್ಯಾಟ್ ಬೀಸಿರುವ ಕೊಹ್ಲಿ 167 ರನ್ ಕಲೆ ಹಾಕಿದ್ದು, 3 ಬಾರಿ ಮಾತ್ರ ಹ್ಯಾಜಲ್‌ವುಡ್​ಗೆ ತಮ್ಮ ವಿಕೆಟ್ ನೀಡಿದ್ದಾರೆ.

6 / 6
ಇನ್ನು ಸ್ಪಿನ್ನರ್​ಗಳ ವಿಚಾರಕ್ಕೆ ಬಂದರೆ, ಕೊಹ್ಲಿ ಇಲ್ಲಿ ಕೊಂಚ ಎಡವಿರುವುದನ್ನು ಕಾಣಬಹುದಾಗಿದೆ. ಅನುಭವಿ ಆಫ್ ಸ್ಪಿನ್ನರ್ ನಾಥನ್ ಲಿಯಾನ್​ಗೆ ಅತ್ಯಧಿಕ ಬಾರಿ ಕೊಹ್ಲಿ ವಿಕೆಟ್ ಒಪ್ಪಿಸಿದ್ದಾರಾದರೂ, ರನ್ ಕಲೆ ಹಾಕುವ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಆಸೀಸ್ ಪರ 450ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ ಪಡೆದಿರುವ ಲಿಯಾನ್ 7 ಬಾರಿ ಕೊಹ್ಲಿಯನ್ನು ಔಟ್ ಮಾಡಿದ್ದಾರೆ. ಆದರೆ ಇದೇ ಲಿಯಾನ್ ವಿರುದ್ಧ 73ರ ಸರಾಸರಿಯಲ್ಲಿ ಕೊಹ್ಲಿ ಒಟ್ಟು 511 ರನ್ ಕಲೆಹಾಕಿದ್ದಾರೆ.