ಟಿ20 ವಿಶ್ವಕಪ್‌ನಲ್ಲಿ ಗಿಲ್ ಸ್ಥಾನಕ್ಕೆ ಕುತ್ತು; ರೋಹಿತ್ ಜೊತೆ ಈತನೇ ಓಪನರ್..!
T20 World Cup 2024: ಸರಣಿಯ ಮೊದಲ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಇಂಜುರಿಯಿಂದಾಗಿ ಆಡಿರಲಿಲ್ಲ. ಆದರೆ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಜೈಸ್ವಾಲ್ ಕೇವಲ ಕೇವಲ 34 ಎಸೆತಗಳಲ್ಲಿ 68 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ಈ ಮೂಲಕ ಟಿ20ಗೆ ನಾನು ಸೂಕ್ತ ಬ್ಯಾಟರ್ ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟರು.
1 / 7
ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ ವಶಪಡಿಸಿಕೊಂಡಿದೆ. ಈ ಸರಣಿಯಲ್ಲಿ ಭಾರತ ಇದುವರೆಗೆ 2-0 ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. 2ನೇ ಟಿ20ಯಲ್ಲಿ ಅಫ್ಘಾನ್ ನೀಡಿದ 173 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ಆರಂಭಿಕ ಯಶಸ್ವಿ ಜೈಸ್ವಾಲ್ ಹಾಗೂ ಶಿವಂ ದುಬೆ ಅವರ ಸ್ಫೋಟಕ ಬ್ಯಾಟಿಂಗ್ನ ಆಧಾರದ ಮೇಲೆ ಸುಲಭವಾಗಿ ಗೆಲುವಿನ ದಡ ಸೇರಿತು.
2 / 7
ವಾಸ್ತವವಾಗಿ ಸರಣಿಯ ಮೊದಲ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಇಂಜುರಿಯಿಂದಾಗಿ ಆಡಿರಲಿಲ್ಲ. ಆದರೆ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದಿದ್ದ ಜೈಸ್ವಾಲ್ ಕೇವಲ ಕೇವಲ 34 ಎಸೆತಗಳಲ್ಲಿ 68 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದರು. ಈ ಮೂಲಕ ಟಿ20ಗೆ ನಾನು ಸೂಕ್ತ ಬ್ಯಾಟರ್ ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟರು.
3 / 7
ಎರಡನೇ ಟಿ20 ಪಂದ್ಯದಲ್ಲಿ 200 ಸ್ಟ್ರೈಕ್ ರೇಟ್‌ನಲ್ಲಿ ಸಿಡಿಲಬ್ಬರದ 68 ರನ್‌ಗಳ ಇನ್ನಿಂಗ್ಸ್ ಆಡಿದ ಯಶಸ್ವಿ, 5 ಬೌಂಡರಿ ಮತ್ತು 6 ಸಿಕ್ಸರ್‌ಗಳನ್ನು ಸಹ ಸಿಡಿಸಿದರು. ಈ ಮೂಲಕ ಆರಂಭಿಕನಾಗಿ ತಂಡಕ್ಕೆ ಅವಶ್ಯಕ ರೀತಿಯಲ್ಲಿ ಬ್ಯಾಟ್ ಬೀಸಿದರು. ಗೆಲುವಿನ ಅರ್ಧಶತಕ ಸಿಡಿಸುವುದರೊಂದಿಗೆ ಜೈಸ್ವಾಲ್, ತಂಡದ ಮತ್ತೊಬ್ಬ ಆರಂಭಿಕ ಶುಭ್ಮನ್ ಗಿಲ್ ಸ್ಥಾನಕ್ಕೂ ಕೊಳ್ಳಿ ಇಟ್ಟರು.
4 / 7
ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯನ್ನು ಟೀಂ ಇಂಡಿಯಾ ಮುಂಬರುವ ಟಿ20 ವಿಶ್ವಕಪ್ನ ತಯಾರಿಯಾಗಿ ನೋಡುತ್ತಿದೆ. ಹೀಗಾಗಿ ಈ ಸರಣಿಯಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ. ಅದರಂತೆ ಮೊದಲ ಟಿ20 ಪಂದ್ಯದಲ್ಲಿ ಅವಕಾಶ ಪಡೆದಿದ್ದ ಗಿಲ್ ಆಯ್ಕೆ ಮಂಡಳಿಯ ಗಮನ ಸೆಳೆಯುವಲ್ಲಿ ವಿಫಲರಾಗಿದ್ದರು.
5 / 7
ಹೀಗಾಗಿ ಎರಡನೇ ಟಿ20 ಪಂದ್ಯದಲ್ಲಿ ಗಿಲ್ ಬದಲು ಯಶಸ್ವಿ ಜೈಸ್ವಾಲ್ಗೆ ನೀಡಲಾಯಿತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಜೈಸ್ವಾಲ್ ಸ್ಫೋಟಕ ಅರ್ಧಶತಕ ಸಿಡಿಸಿದಲ್ಲದೆ ಶಿವಂ ದುಬೆ ಅವರೊಂದಿಗೆ ಅಮೋಘ ಜೊತೆಯಾಟವನ್ನು ನಡೆಸಿದರು.
6 / 7
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಟಿ20 ಸರಣಿಯ ನಂತರ ಭಾರತ ವಿಶ್ವಕಪ್ ಆಡಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಯಶಸ್ವಿ ಭಾರತ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಇದೇ ವೇಳೆ ಶುಭಮನ್ ಗಿಲ್ ತಂಡದಲ್ಲಿ ಆಡುವುದು ಕಷ್ಟವಾಗಲಿದೆ.
7 / 7
ಹೀಗಾಗಿ ಯಶಸ್ವಿ ಟಿ20ಯಲ್ಲಿ ಗಿಲ್ ಸ್ಥಾನವನ್ನು ಶಾಶ್ವತವಾಗಿ ಕಿತ್ತುಕೊಳ್ಳುವ ಸಾಧ್ಯತೆ ಇದೆ. ಈಗ ಜನವರಿ 17 ರಂದು ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಮೂರನೇ ಟಿ20 ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಯಶಸ್ವಿ ಪ್ರದರ್ಶನದ ಬಗ್ಗೆ ತಂಡದ ಆಯ್ಕೆಗಾರರು ವಿಶೇಷ ಗಮನ ಹರಿಸಲಿದ್ದಾರೆ.