Ranji Trophy: ರಣಜಿ ಅಂಗಳದಲ್ಲಿ 156 ರನ್ ಚಚ್ಚಿದ ಯಶಸ್ವಿ ಜೈಸ್ವಾಲ್

Updated on: Nov 04, 2025 | 5:04 PM

Yashasvi Jaiswal Century: ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಆಡುತ್ತಿರುವ ಯಶಸ್ವಿ ಜೈಸ್ವಾಲ್ ರಾಜಸ್ಥಾನ ವಿರುದ್ಧ ಶತಕ ಸಿಡಿಸಿದ್ದಾರೆ. ಈ ಶತಕವು ಮುಂಬೈ ತಂಡಕ್ಕೆ ಚೇತರಿಕೆ ನೀಡಿದೆ. ಇದು ಜೈಸ್ವಾಲ್ ಅವರ ಉತ್ತಮ ಫಾರ್ಮ್ ಅನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ. 45 ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸರಾಸರಿ ಹೊಂದಿರುವ ಆರಂಭಿಕ ಆಟಗಾರ ಎಂಬ ಅವರ ದಾಖಲೆಯನ್ನು ಈ ಪ್ರದರ್ಶನ ಎತ್ತಿ ತೋರಿಸುತ್ತದೆ.

1 / 5
ಭಾರತ ಟೆಸ್ಟ್ ತಂಡದ ಖಾಯಂ ಆರಂಭಿಕ ಸ್ಥಾನವನ್ನು ಪಡೆದುಕೊಂಡಿರುವ ಯಶಸ್ವಿ ಜೈಸ್ವಾಲ್ ಪ್ರಸ್ತುತ ದೇಶೀ ಟೂರ್ನಿ ರಣಜಿ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಈ ಟೂರ್ನಿಯಲ್ಲಿ ಮುಂಬೈ ಪರ ಆಡುತ್ತಿರುವ ಜೈಸ್ವಾಲ್, ರಾಜಸ್ಥಾನ ವಿರುದ್ಧದ ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದಾರೆ. ಈ ಶತಕದ ಮೂಲಕ ರಾಜಸ್ಥಾನ ವಿರುದ್ಧ ಸ್ವಲ್ಪ ಹಿನ್ನಡೆಯಲ್ಲಿ ಕಾಣುತ್ತಿದ್ದ ಮುಂಬೈ ತಂಡದ ಇನ್ನಿಂಗ್ಸ್​ಗೆ ಚೇತರಿಕೆ ನೀಡಿದ್ದಾರೆ.

2 / 5
ರಾಜಸ್ಥಾನ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ 120 ಎಸೆತಗಳಲ್ಲಿ 11 ಬೌಂಡರಿಗಳ ಸಹಿತ ತಮ್ಮ ಶತಕ ಪೂರೈಸಿದರು. ಇದರೊಂದಿಗೆ ನಾಲ್ಕು ರೆಡ್-ಬಾಲ್ ಇನ್ನಿಂಗ್ಸ್‌ಗಳಲ್ಲಿ ಜೈಸ್ವಾಲ್ ಎರಡು ಶತಕಗಳು ಸೇರಿದಂತೆ ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ. ರಾಜಸ್ಥಾನ ವಿರುದ್ಧದ ಅವರ ರಣಜಿ ಟ್ರೋಫಿ ಶತಕವು ಅವರ ವೃತ್ತಿಜೀವನದ 17 ನೇ ಪ್ರಥಮ ದರ್ಜೆ ಶತಕವಾಗಿದೆ.

3 / 5
ಯಶಸ್ವಿ ಜೈಸ್ವಾಲ್ ರಾಜಸ್ಥಾನ ವಿರುದ್ಧ ಶತಕ ಗಳಿಸುವ ಮೂಲಕ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಸಾಬೀತುಪಡಿಸಿದ್ದಲ್ಲದೆ, 45 ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸರಾಸರಿ ಹೊಂದಿರುವ ಆರಂಭಿಕ ಆಟಗಾರ ಎಂಬುದನ್ನು ಮತ್ತೆ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

4 / 5
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕನಿಷ್ಠ 2,000 ಟೆಸ್ಟ್ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ, ಯಶಸ್ವಿ ಜೈಸ್ವಾಲ್ 1980 ರಿಂದ ಆರಂಭಿಕ ಆಟಗಾರರಲ್ಲಿ ಅತ್ಯಧಿಕ ಸರಾಸರಿಯನ್ನು ಹೊಂದಿದ್ದಾರೆ. ಅವರ 52.60 ಸರಾಸರಿಯು ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ ಅವರ 50.73 ಸರಾಸರಿಯನ್ನು ಮೀರಿಸಿದೆ.

5 / 5
ರಾಜಸ್ಥಾನ ವಿರುದ್ಧ ಯಶಸ್ವಿ ಜೈಸ್ವಾಲ್ ಶತಕ ಸಿಡಿಸಿದ್ದು ತಂಡಕ್ಕೆ ಬಲ ನೀಡಿದೆ. ಏಕೆಂದರೆ ರಾಜಸ್ಥಾನ ಮೊದಲ ಇನ್ನಿಂಗ್ಸ್‌ನಲ್ಲಿ 300 ಕ್ಕೂ ಹೆಚ್ಚು ರನ್‌ಗಳ ಗಣನೀಯ ಮುನ್ನಡೆ ಸಾಧಿಸಿತ್ತು. ಹೀಗಾಗಿ ಮುಂಬೈಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಬಲವಾದ ಆರಂಭದ ಅಗತ್ಯವಿತ್ತು.  ಅದರಂತೆ ಯಶಸ್ವಿ ಜೈಸ್ವಾಲ್ ಮತ್ತು ಮುಶೀರ್ ಖಾನ್ ಇಬ್ಬರು ಮೊದಲ ವಿಕೆಟ್‌ಗೆ 149 ರನ್‌ಗಳ ಜೊತೆಯಾಟ ನೀಡಿದರು.

Published On - 5:03 pm, Tue, 4 November 25