Year Ender 2021: ರೋಹಿತ್, ರಿಷಬ್​ಗೆ ಸ್ಥಾನ; ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿ ಹೀಗಿದೆ

| Updated By: ಪೃಥ್ವಿಶಂಕರ

Updated on: Dec 23, 2021 | 2:43 PM

Year Ender 2021: ಆಸ್ಟ್ರೇಲಿಯ ನೆಲದಲ್ಲಿ ಭಾರತ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ. ಇದಾದ ನಂತರ, ಭಾರತ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ನಂತಹ ತಂಡಗಳೊಂದಿಗೆ ತವರಿನಲ್ಲಿ ಸರಣಿಯನ್ನು ಗೆದ್ದಿದೆ.

1 / 5
2021 ರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ ಗಳಿಸಿದವರು: ಟೆಸ್ಟ್ ಕ್ರಿಕೆಟ್ ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿದೆ. ಇದೇ ವರ್ಷದಲ್ಲಿ, ಮೊದಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ನಡೆಯಿತು. ಇದಲ್ಲದೇ ಆಸ್ಟ್ರೇಲಿಯ ನೆಲದಲ್ಲಿ ಭಾರತ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ. ಇದಾದ ನಂತರ, ಭಾರತ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ನಂತಹ ತಂಡಗಳೊಂದಿಗೆ ತವರಿನಲ್ಲಿ ಸರಣಿಯನ್ನು ಗೆದ್ದಿದೆ. ಈಗ ಈ ವರ್ಷಾಂತ್ಯಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಭಾರತ-ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ-ಇಂಗ್ಲೆಂಡ್ ಈ ವರ್ಷ ಅಂತಿಮ ಟೆಸ್ಟ್‌ನಲ್ಲಿ ಮುಖಾಮುಖಿಯಾಗಲಿವೆ. ಅದಕ್ಕೂ ಮುನ್ನ ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವ ಬ್ಯಾಟ್ಸ್‌ಮನ್‌ಗಳು ಹೆಚ್ಚು ಮಿಂಚಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

2 / 5
ಇಂಗ್ಲೆಂಡ್ ನಾಯಕ ಜೋ ರೂಟ್ ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. 2021 ರಲ್ಲಿ, ರೂಟ್ 14 ಟೆಸ್ಟ್‌ಗಳಲ್ಲಿ 62.69 ಸರಾಸರಿಯಲ್ಲಿ 1630 ರನ್ ಗಳಿಸಿದರು. ಈ ಸಮಯದಲ್ಲಿ, ರೂಟ್ ಆರು ಶತಕ ಮತ್ತು ಮೂರು ಅರ್ಧಶತಕಗಳನ್ನು ಸಹ ಗಳಿಸಿದರು. ರೂಟ್ ಈ ವರ್ಷ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. 2021 ರಲ್ಲಿ ರೂಟ್ ಅವರ ಅತ್ಯುತ್ತಮ ಪ್ರದರ್ಶನ 228 ರನ್.

3 / 5
ಭಾರತ ತಂಡದ ಸ್ಟಾರ್ ಓಪನರ್ ರೋಹಿತ್ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಭಾಗವಾಗದಿರಬಹುದು. ಆದರೆ, ಈ ಪುರಾತನ ಕ್ರಿಕೆಟ್ ಮಾದರಿಯಲ್ಲಿ, ಈ ವರ್ಷ ಅವರ ಬ್ಯಾಟ್‌ನಿಂದ ಸಾಕಷ್ಟು ರನ್‌ಗಳು ಬಂದವು. ರೋಹಿತ್ 2021ರಲ್ಲಿ 20 ಟೆಸ್ಟ್‌ಗಳಲ್ಲಿ 47.68ರ ಸರಾಸರಿಯಲ್ಲಿ 906 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಹಿಟ್‌ಮ್ಯಾನ್ ಎರಡು ಶತಕ ಮತ್ತು ನಾಲ್ಕು ಅರ್ಧಶತಕಗಳನ್ನು ಗಳಿಸಿದರು.

4 / 5
ಶ್ರೀಲಂಕಾ ಟೆಸ್ಟ್ ತಂಡದ ನಾಯಕ ದಿಮುತ್ ಕರುಣಾರತ್ನೆ ಈ ವರ್ಷ ಸಾಕಷ್ಟು ಮುನ್ನಡೆ ಸಾಧಿಸಿದ್ದಾರೆ. ಆದರೆ, ಕರುಣಾರತ್ನೆ ಕಳೆದ ವರ್ಷವೂ ಸಾಕಷ್ಟು ರನ್ ಗಳಿಸಿದ್ದರು. ಈ ವರ್ಷ ಕೇವಲ ಏಳು ಟೆಸ್ಟ್‌ಗಳಲ್ಲಿ ದಿಮುತ್ ಕರುಣರತ್ನೆ ಅವರ ಬ್ಯಾಟ್ 902 ರನ್ ಗಳಿಸಿದೆ. 2021ರಲ್ಲಿ ಕರುಣಾರತ್ನೆ ಸರಾಸರಿ 69.38. ಈ ಬಾರಿ ಅವರು ನಾಲ್ಕು ಶತಕ ಮತ್ತು ಮೂರು ಅರ್ಧ ಶತಕಗಳನ್ನು ಗಳಿಸಿದರು. ಈ ವರ್ಷ ಕರುಣರತ್ನೆ 244 ರನ್ ಗಳಿಸಿದ್ದು ಅತ್ಯುತ್ತಮ ಸಾಧನೆಯಾಗಿದೆ.

5 / 5
 ರಿಷಬ್ ಪಂತ್

ರಿಷಬ್ ಪಂತ್

Published On - 2:42 pm, Thu, 23 December 21