
2022 ರಲ್ಲಿ ಒಟ್ಟು 11 ಕ್ರಿಕೆಟಿಗರು ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿದರು. ಇದರಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರೂ ಸೇರಿದ್ದಾರೆ. ಇನ್ನೂ ಕೆಲವು ವಿದೇಶಿ ಕ್ರಿಕೆಟಿಗರು ಭಾರತೀಯ ಹುಡುಗಿಯರೊಂದಿಗೆ ಸಪ್ತಪದಿ ತುಳಿದರು. ಇನ್ನು ಕೆಲವರು ತಮ್ಮ ಸಹಪಾಠಿಯನ್ನೇ ತಮ್ಮ ಸಂಗಾತಿಯನ್ನಾಗಿ ಆರಿಸಿಕೊಂಡರೆ, ಇನ್ನೂ ಕೆಲವರು 66 ನೇ ವಯಸ್ಸಿನಲ್ಲಿ ಮದುವೆಯಾಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಒಟ್ಟಾರೆ 2022ರಲ್ಲಿ ಮದುವೆಯಾದ 11 ಕ್ರಿಕೆಟಿಗರ ಮಾಹಿತಿ ಇಲ್ಲಿದೆ.

ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಇತ್ತೀಚೆಗೆ ತನ್ನ ಸಹಪಾಠಿಯೊಂದಿಗೆ ಇಸ್ಲಾಮಾಬಾದ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಆಸೀಸ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಈ ವರ್ಷದ ಮಾರ್ಚ್‌ನಲ್ಲಿ ಭಾರತೀಯ ಮೂಲದ ವಿನಿ ರಾಮನ್ ಅವರನ್ನು ವರಿಸಿದರು. ಮೊದಲು ಆಸ್ಟ್ರೇಲಿಯಾದಲ್ಲಿ ಮದುವೆಯಾದ ಈ ಲವ್ ಬರ್ಡ್ಸ್ ಮಾರ್ಚ್ 27 ರಂದು ದಕ್ಷಿಣ ಭಾರತದ ಸಂಪ್ರದಾಯ ಮತ್ತು ಪದ್ಧತಿಗಳ ಪ್ರಕಾರ ಮತ್ತೊಮ್ಮೆ ಮದುವೆಯಾದರು.

ಟೀಂ ಇಂಡಿಯಾ ವೇಗಿ ದೀಪಕ್ ಚಾಹರ್ ಈ ವರ್ಷ ತಮ್ಮ ಗೆಳತಿ ಜಯಭರದ್ವಾಜ್ ಅವರನ್ನು ವಿವಾಹವಾದರು. ಆಗ್ರಾದಲ್ಲಿ ನಡೆದ ಈ ಮದುವೆಯಲ್ಲಿ ಹಲವು ಕ್ರಿಕೆಟಿಗರು ಕೂಡ ಉಪಸ್ಥಿತರಿದ್ದರು.

ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಕ್ಯಾಥರೀನ್ ಬ್ರಂಟ್ ಮತ್ತು ನೇಟ್ ಸೀವರ್ ಎಂಬ ಈ ಇಬ್ಬರು ಆಟಗಾರ್ತಿಯರು 30 ಮೇ 2022 ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದರು.

ಟೀಂ ಇಂಡಿಯಾದ ಹಿರಿಯ ಕ್ರಿಕೆಟಿಗ ಅರುಣ್ ಲಾಲ್ 66 ನೇ ವಯಸ್ಸಿನಲ್ಲಿ ಎರಡನೇ ಬಾರಿಗೆ ವರ ಆಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಲಾಲ್ ತಮ್ಮ ಗೆಳತಿ ಬುಲ್ಬುಲ್ ಸಾಹಾ ಅವರನ್ನು ಕೋಲ್ಕತ್ತಾದಲ್ಲಿ ವಿವಾಹವಾದರು. ಅಚ್ಚರಿ ಎಂದರೆ ಅವರ ಮಾಜಿ ಪತ್ನಿ ರೀನಾ ಕೂಡ ಈ ಮದುವೆಗೆ ಒಪ್ಪಿದ್ದರು.

ಚರಿತ್ ಅಸಲಂಕ, ಪಾತುಂ ನಿಸ್ಸಾಂಕ, ಕಸುನ್ ರಜಿತ. ಈ ಮೂವರು ಶ್ರೀಲಂಕಾದ ಕ್ರಿಕೆಟಿಗರು ಒಂದೇ ದಿನ ಅಂದರೆ 28 ನವೆಂಬರ್ 2022 ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದರು.

ನ್ಯೂಜಿಲೆಂಡ್ ಕ್ರಿಕೆಟಿಗ ಜಿಮ್ಮಿ ನೀಶಮ್ ಅವರು ತಮ್ಮ ದೀರ್ಘಕಾಲದ ಸಂಗಾತಿ ಅಲೆಕ್ಸ್ ಮೆಕ್ಲಿಯೋಡ್ ಸ್ಮಿತ್ ಅವರನ್ನು ಡಿಸೆಂಬರ್ ಮೊದಲ ವಾರದಲ್ಲಿ ವಿವಾಹವಾದರು.

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಸ್ಪಿನ್ನರ್ ರಾಹುಲ್ ಶರ್ಮಾ ಡಿಸೆಂಬರ್ 8 ರಂದು ತಮ್ಮ ಗೆಳತಿಯೊಂದಿಗೆ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದರು.
Published On - 4:22 pm, Wed, 28 December 22