Updated on:Dec 28, 2022 | 11:12 AM
ಕತಾರ್ನಲ್ಲಿ ನಡೆದ ಫಿಫಾ ವಿಶ್ವಕಪ್ನಲ್ಲಿ ಅರ್ಜೇಂಟಿನಾ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಲಿಯೋನೆಲ್ ಮೆಸ್ಸಿಗೆ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಹಾಗೆಯೇ ಭಾರತದಲ್ಲೂ ಮೆಸ್ಸಿಗಿರುವ ಅಭಿಮಾನಿಗಳ ಬಳಗ ಕಡಿಮೆ ಏನಿಲ್ಲ. ಈ ಅಭಿಮಾನಿಗಳ ಬಳಗದಲ್ಲಿ ಧೋನಿ ಮಗಳು ಜೀವಾ ಕೂಡ ಸೇರಿದ್ದಾರೆ. ಇದೀಗ ಮೆಸ್ಸಿಯ ಪುಟ್ಟ ಅಭಿಮಾನಿಗೆ ಬೆಲೆ ಕಟ್ಟಲಾಗದ ಉಡುಗೊರೆಯೊಂದು ಸಿಕ್ಕಿದೆ.
ಜೀವಾ ಧೋನಿಗೆ ಸಿಕ್ಕಿರುವ ಅಂತಹ ಅಮೂಲ್ಯವಾದ ಉಡುಗೊರೆ ಏನೆಂದರೆ ಅದು, ಕಾಲ್ಚೆಂಡಿನ ಚತುರ ಲಿಯೋನೆಲ್ ಮೆಸ್ಸಿ ಸಹಿ ಮಾಡಿರುವ ಅರ್ಜೇಂಟಿನಾ ತಂಡದ ಜೆರ್ಸಿ.
ಮೆಸ್ಸಿ ಸಹಿ ಮಾಡಿರುವ ಅರ್ಜೇಂಟಿನಾ ತಂಡದ ಜೆರ್ಸಿ ತೊಟ್ಟಿರುವ ಜೀವಾ ಅವರ ಫೋಟೋವನ್ನು ಸಾಕ್ಷಿ ಧೋನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ತಂದೆಯಂತೆಯೇ ಮಗಳು ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.
ಜೆರ್ಸಿಯ ಮೇಲೆ ತನ್ನ ಸಹಿ ಮಾಡಿರುವ ಮೆಸ್ಸಿ ಅದರೊಂದಿಗೆ ‘ಪಾರಾ ಜೀವಾ’ ಎಂತಲೂ ಬರೆದಿದ್ದಾರೆ. ‘ಪಾರಾ ಜೀವಾ’ ಎಂದರೆ ‘ಜೀವಾಳಿಗಾಗಿ’ ಎಂಬುದಾಗಿದೆ.
ಮಗಳಂತೆ ಧೋನಿಗೂ ಫುಟ್ಬಾಲ್ ಎಂದರೆ ಬಲು ಅಚ್ಚುಮೆಚ್ಚು. ಸ್ವತಃ ಕ್ರಿಕೆಟಿಗರಾಗಿರುವ ಧೋನಿ ಇಂಡಿಯನ್ ಸೂಪರ್ ಲೀಗ್ ತಂಡದ ಚೆನ್ನೈಯಿನ್ ಎಫ್‌ಸಿಯ ಸಹ-ಮಾಲೀಕರೂ ಆಗಿದ್ದಾರೆ.
Published On - 10:55 am, Wed, 28 December 22