Year Ender 2022: 2022ರ ಟೀಮ್ ಇಂಡಿಯಾದ ಬೆಸ್ಟ್ ಬ್ಯಾಟ್ಸ್ಮನ್ ಯಾರು ಗೊತ್ತಾ?
TV9 Web | Updated By: ಝಾಹಿರ್ ಯೂಸುಫ್
Updated on:
Dec 31, 2022 | 7:38 PM
Year Ender 2022: ಕೆಲ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗೆ ಮೂರು ಮಾದರಿಯಲ್ಲಿ ಈ ವರ್ಷ ಟೀಮ್ ಇಂಡಿಯಾ ಪರ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟ್ಸ್ಮನ್ಗಳ ಪಟ್ಟಿ ಇಲ್ಲಿದೆ.
1 / 5
Year Ender 2022: 2022 ರಲ್ಲಿ ಟೀಮ್ ಇಂಡಿಯಾ ಪರ ಅಬ್ಬರಿಸಿದವರಿಗಿಂತ ಕಳಪೆ ಪ್ರದರ್ಶನ ನೀಡಿದವರೇ ಹೆಚ್ಚು. ಪರಿಣಾಮ ಭಾರತ ತಂಡವು ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ನಲ್ಲಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಯಿತು.
2 / 5
ಇದಾಗ್ಯೂ ಕೆಲ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೀಗೆ ಮೂರು ಮಾದರಿಯಲ್ಲಿ ಈ ವರ್ಷ ಟೀಮ್ ಇಂಡಿಯಾ ಪರ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟ್ಸ್ಮನ್ಗಳ ಪಟ್ಟಿ ಇಲ್ಲಿದೆ.
3 / 5
ರಿಷಭ್ ಪಂತ್: 2022 ರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಅಬ್ಬರಿಸಿದ್ದ ಯುವ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್. ಒಟ್ಟು 12 ಇನಿಂಗ್ಸ್ನಲ್ಲಿ ಬ್ಯಾಟ್ ಬೀಸಿದ್ದ ಪಂತ್ 61.81 ಸರಾಸರಿಯಲ್ಲಿ ಒಟ್ಟು 680 ರನ್ ಕಲೆಹಾಕಿದ್ದಾರೆ. ಈ ಮೂಲಕ ಈ ವರ್ಷ ಟೆಸ್ಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.
4 / 5
ಶ್ರೇಯಸ್ ಅಯ್ಯರ್: ಏಕದಿನ ಕ್ರಿಕೆಟ್ನಲ್ಲಿ 2022 ರಲ್ಲಿ ಟೀಮ್ ಇಂಡಿಯಾ ಪರ ಮಿಂಚಿದ ಆಟಗಾರನೆಂದರೆ ಶ್ರೇಯಸ್ ಅಯ್ಯರ್. 15 ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ್ದ ಅಯ್ಯರ್ 55.69 ಸರಾಸರಿಯಲ್ಲಿ ಒಟ್ಟು 724 ಕಲೆಹಾಕಿದ್ದಾರೆ. ಈ ಮೂಲಕ ವರ್ಷದ ಭಾರತೀಯ ಏಕದಿನ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
5 / 5
ಸೂರ್ಯಕುಮಾರ್ ಯಾದವ್: 2022 ರಲ್ಲಿ ಟಿ20 ಕ್ರಿಕೆಟ್ನಲ್ಲಿ ಅಬ್ಬರಿಸುವ ಮೂಲಕ ಸೂರ್ಯಕುಮಾರ್ ಯಾದವ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. 31 ಇನಿಂಗ್ಸ್ನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ಸೂರ್ಯ 46.56 ರ ಸರಾಸರಿಯಲ್ಲಿ ಒಟ್ಟು 1164 ರನ್ ಕಲೆಹಾಕಿದ್ದಾರೆ. ಈ ಮೂಲಕ ಒಂದು ವರ್ಷದೊಳಗೆ ಟಿ20 ಕ್ರಿಕೆಟ್ನಲ್ಲಿ ಸಾವಿರ ರನ್ ಪೂರೈಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.
Published On - 7:32 pm, Sat, 31 December 22