Year Ender 2022: ಈ ವರ್ಷದ ಸಿಕ್ಸರ್ ಕಿಂಗ್ ಯಾರು ಗೊತ್ತಾ?
TV9 Web | Updated By: ಝಾಹಿರ್ ಯೂಸುಫ್
Updated on:
Dec 29, 2022 | 9:23 PM
Most Sixes in Cricket 2022: ಕೆಲ ಬ್ಯಾಟ್ಸ್ಮನ್ಗಳು ಬೌಲರ್ ಮೇಲೆ ಪರಾಕ್ರಮ ಮೆರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೀಗೆ ಕ್ರಿಕೆಟ್ ಅಂಗಳದಲ್ಲಿ ಈ ವರ್ಷ ಸಿಕ್ಸರ್ಗಳ ಸುರಿಮಳೆಗೈದ ಬ್ಯಾಟರ್ಗಳ ಪಟ್ಟಿ ಹೀಗಿದೆ...
1 / 6
2022ರ ವರ್ಷಾಂತ್ಯಕ್ಕೆ ಬಂದು ನಿಂತಿದ್ದೇವೆ. ಎಂದಿನಂತೆ ಈ ವರ್ಷ ಕೂಡ ಕೆಲ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ರೆ, ಮತ್ತೆ ಕೆಲವರು ಕಳಪೆ ಪ್ರದರ್ಶನದಿಂದ ಟೀಕೆಗೊಳಗಾಗಿದ್ದಾರೆ. ಇದಾಗ್ಯೂ ಕೆಲ ಬ್ಯಾಟ್ಸ್ಮನ್ಗಳು ಬೌಲರ್ ಮೇಲೆ ಪರಾಕ್ರಮ ಮೆರೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೀಗೆ ಕ್ರಿಕೆಟ್ ಅಂಗಳದಲ್ಲಿ ಈ ವರ್ಷ ಸಿಕ್ಸರ್ಗಳ ಸುರಿಮಳೆಗೈದ ಬ್ಯಾಟರ್ಗಳ ಪಟ್ಟಿ ಹೀಗಿದೆ...
2 / 6
1- ಸೂರ್ಯಕುಮಾರ್ ಯಾದವ್: ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಪಾಲಾಗಿದೆ. ಸೂರ್ಯ ಈ ವರ್ಷ 44 ಪಂದ್ಯಗಳಲ್ಲಿ 74 ಸಿಕ್ಸ್ ಸಿಡಿಸುವ ಮೂಲಕ 2022ರ ಸಿಕ್ಸರ್ ಕಿಂಗ್ ಎನಿಸಿಕೊಂಡಿದ್ದಾರೆ.
3 / 6
2- ನಿಕೋಲಸ್ ಪೂರನ್: ವೆಸ್ಟ್ ಇಂಡೀಸ್ನ ಎಡಗೈ ದಾಂಡಿಗ ನಿಕೋಲಸ್ ಪೂರನ್ ಈ ವರ್ಷ 44 ಇನಿಂಗ್ಸ್ನಲ್ಲಿ ಒಟ್ಟು 59 ಸಿಕ್ಸ್ ಬಾರಿಸಿದ್ದಾರೆ. ಈ ಮೂಲಕ ಸಿಕ್ಸರ್ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ.
4 / 6
3- ಮೊಹಮ್ಮದ್ ವಾಸಿಂ: ಯುಎಇ ತಂಡದ ಆಟಗಾರ ಮೊಹಮ್ಮದ್ ವಾಸಿಂ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವಾಸಿಂ ಈ ವರ್ಷ ಒಟ್ಟು 37 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದು, ಈ ವೇಳೆ 58 ಸಿಕ್ಸ್ಗಳನ್ನು ಬಾರಿಸಿದ್ದಾರೆ.
5 / 6
4- ಸಿಕಂದರ್ ರಾಜಾ: ಜಿಂಬಾಬ್ವೆ ತಂಡದ ಸ್ಟಾರ್ ಆಟಗಾರ ಸಿಕಂದರ್ ರಾಜಾ ಕೂಡ ಈ ವರ್ಷ ಸಿಕ್ಸರ್ ಕಿಂಗ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 2022ರಲ್ಲಿ 39 ಇನಿಂಗ್ಸ್ ಆಡಿರುವ ಸಿಕಂದರ್ ಒಟ್ಟು 55 ಸಿಕ್ಸ್ ಬಾರಿಸಿ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.
6 / 6
5- ರೋಹಿತ್ ಶರ್ಮಾ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಬಾರಿ ಕೂಡ ಸಿಕ್ಸ್ ವಿಷಯದಲ್ಲಿ ಬಿದ್ದಿಲ್ಲ. ಈ ವರ್ಷ ಒಟ್ಟು 39 ಇನಿಂಗ್ಸ್ ಆಡಿರುವ ಹಿಟ್ಮ್ಯಾನ್ 45 ಸಿಕ್ಸ್ಗಳನ್ನು ಬಾರಿಸಿದ್ದಾರೆ.