Year Ender 2022: ಈ ವರ್ಷ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳು ಇವರೇ..!
TV9 Web | Updated By: ಪೃಥ್ವಿಶಂಕರ
Updated on:
Dec 24, 2022 | 4:38 PM
Year Ender 2022: 2022 ರಲ್ಲಿ ಹಲವು ಬೌಲರ್‌ಗಳು ತಮ್ಮ ಕೈಚೆಳಕ ತೋರುವ ಮೂಲಕ ಟಿ20 ಕ್ರಿಕೆಟ್ನಲ್ಲೂ ಪ್ರಾಬಲ್ಯ ಮೆರೆದಿದ್ದಾರೆ. ಇವರಲ್ಲಿ ಭಾರತದ ಯುವ ಸೆನ್ಸೇಷನ್ ಅರ್ಷದೀಪ್ ಸಿಂಗ್ ಕೂಡ ಸೇರಿದ್ದಾರೆ.
1 / 6
2022 ರಲ್ಲಿ ಹಲವು ಬೌಲರ್‌ಗಳು ತಮ್ಮ ಕೈಚೆಳಕ ತೋರುವ ಮೂಲಕ ಟಿ20 ಕ್ರಿಕೆಟ್ನಲ್ಲೂ ಪ್ರಾಬಲ್ಯ ಮೆರೆದಿದ್ದಾರೆ. ಇವರಲ್ಲಿ ಭಾರತದ ಯುವ ಸೆನ್ಸೇಷನ್ ಅರ್ಷದೀಪ್ ಸಿಂಗ್ ಕೂಡ ಸೇರಿದ್ದಾರೆ. ಕೇವಲ ಟಿ20 ಬಗ್ಗೆ ಮಾತನಾಡುವುದಾದರೆ ಈ ವರ್ಷ ಹಲವು ಬೌಲರ್‌ಗಳು ಹೀರೋ ಆಗಿದ್ದಾರೆ. ಅಂತಹ ಟಾಪ್ ಐವರು ಬೌಲರ್‌ಗಳ ವಿವರ ಇಲ್ಲಿದೆ.
2 / 6
2022ರಲ್ಲಿ ಚುಟುಕು ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಐರ್ಲೆಂಡ್‌ನ ಜೋಸ್ ಲಿಟಲ್ ಅಗ್ರ ಸ್ಥಾನ ಪಡೆದಿದ್ದಾರೆ. ಈ ವರ್ಷ ಅವರು 18.92 ಸರಾಸರಿಯಲ್ಲಿ 39 ವಿಕೆಟ್ ಪಡೆದರು.
3 / 6
ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಈ ವರ್ಷ 30 ಇನ್ನಿಂಗ್ಸ್‌ಗಳಲ್ಲಿ 19.02 ಸರಾಸರಿಯಲ್ಲಿ 36 ವಿಕೆಟ್ ಪಡೆಯುವುದರೊಂದಿಗೆ ಎರಡನೇ ಸ್ಥಾನ ಪಡೆದುಕೊಂಡರು. ಅದರಲ್ಲೂ 4 ರನ್‌ಗೆ 5 ವಿಕೆಟ್ ಕಬಳಿಸಿದ್ದು ಅವರ ಶ್ರೇಷ್ಠ ಸಾಧನೆಯಾಗಿತ್ತು.
4 / 6
ಶ್ರೀಲಂಕಾದ ವನಿಂದು ಹಸರಂಗ ಅವರು 2022ರಲ್ಲಿ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಮೂರನೇ ಸ್ಥಾನದಲ್ಲಿದ್ದಾರೆ. ಈ ವರ್ಷ 19 ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿರುವ ಹಸರಂಗ 34 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
5 / 6
ಭಾರತದ ಯುವ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಈ ವರ್ಷ T20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ನಾಲ್ಕನೇ ಬೌಲರ್ ಆಗಿದ್ದಾರೆ. 2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅರ್ಷದೀಪ್ ಸಿಂಗ್ 20 ಇನ್ನಿಂಗ್ಸ್‌ಗಳಲ್ಲಿ 31 ವಿಕೆಟ್‌ಗಳನ್ನು ಪಡೆದರು.
6 / 6
2022 ರಲ್ಲಿ ಟಿ20 ಮಾದರಿಯಲ್ಲಿ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ 5 ನೇ ಸ್ಥಾನ ಪಡೆದಿರುವ ಪಾಕಿಸ್ತಾನದ ಹ್ಯಾರಿಸ್ ರೌಫ್, 23 ಇನ್ನಿಂಗ್ಸ್‌ಗಳಲ್ಲಿ 20.74 ಸರಾಸರಿಯಲ್ಲಿ 31 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.
Published On - 4:37 pm, Sat, 24 December 22