Sign In

By signing in or creating an account, you agree with Associated Broadcasting Company's Terms & Conditions and Privacy Policy.

Sam Curran: ಐಪಿಎಲ್ ಇತಿಹಾಸದಲ್ಲೇ ದಾಖಲೆ ಮೊತ್ತಕ್ಕೆ ಸೇಲ್ ಆದ ತಕ್ಷಣ ಸ್ಯಾಮ್ ಕುರ್ರನ್ ಹೇಳಿದ್ದೇನು ಗೊತ್ತೇ?

IPL 2023 Auction: ಐಪಿಎಲ್ ಆಕ್ಷನ್​ 2023 ರಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಬರೋಬ್ಬರಿ 18.50 ಕೋಟಿ ರೂ. ಗಳ ದಾಖಲೆ ಮೊತ್ತಕ್ಕೆ ಸೇಲ್ ಆದ ಬಳಿಕ ಪ್ರತಿಕ್ರಿಯೆ ನೀಡಿರುವ ಸ್ಯಾಮ್ ಕುರ್ರನ್ ಏನು ಹೇಳಿದ್ದಾರೆ ನೋಡಿ.

TV9 Web
| Updated By: Vinay Bhat

Updated on:Dec 24, 2022 | 10:13 AM

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ನಡೆದ ಮಿನಿ ಹರಾಜು ಮಕ್ತಾಯಗೊಂಡಿದೆ. ಕೆಲ ಅಚ್ಚರಿಯ ಆಯ್ಕೆಗಳು ಕೂಡ ನಡೆದಿದ್ದು ದಾಖಲೆ ಕೂಡ ನಿರ್ಮಾಣವಾಗಿದೆ. ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕುರ್ರನ್ ಐಪಿಎಲ್ ಇತಿಹಾಸದಲ್ಲಿಯೇ ದಾಖಲೆಯ ಬೆಲೆಗೆ ಮಾರಾಟವಾಗಿದ್ದಾರೆ.

1 / 8
2022ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಟೂರ್ನಿ ಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಸ್ಯಾಮ್‌ ಕುರ್ರನ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಬರೋಬ್ಬರಿ 18.50 ಕೋಟಿ ರೂ. ಗಳಿಗೆ ಖರೀದಿಸಿತು. ಐಪಿಎಲ್‌ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಖರೀದಿ ಇದಾಗಿದೆ. ಇದಕ್ಕೂ ಮುನ್ನ 2021ರ ಐಪಿಎಲ್‌ ಮಿನಿ ಹರಾಜಿನಲ್ಲಿ ಕ್ರಿಸ್‌ ಮಾರಿಸ್‌ ಅವರು 16.25 ಕೋಟಿ ರೂ. ಗಳಿಗೆ ರಾಜಸ್ಥಾನ್‌ ರಾಯಲ್ಸ್‌ ಪಡೆದುಕೊಂಡಿತ್ತು.

2 / 8
2019ಕ್ಕೂ ಮುಂಚಿನ ಹರಾಜಿನಲ್ಲಿ ಕುರ್ರನ್ ಪಂಜಾಬ್ ಕಿಂಗ್ಸ್ ತಂಡಕ್ಕೆ 7.2 ಕೋಟಿ ರೂ. ಗೆ ಮಾರಾಟವಾಗಿದ್ದರು. ನಂತರದಲ್ಲಿ 5.5 ಕೋಟಿ ರೂ. ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬಿಕರಿಯಾಗಿದ್ದರು. ಇದೀಗ 2022ರ ಟಿ20 ವಿಶ್ವಕಪ್​ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಕುರ್ರನ್ ದಾಖಲೆ ಮೊತ್ತಕ್ಕೆ ಪಂಜಾಬ್ ಪಾಲಾಗಿದ್ದಾರೆ.

3 / 8
ಐಪಿಎಲ್ ಆಕ್ಷನ್​ನಲ್ಲಿ ದಾಖಲೆ ಮೊತ್ತಕ್ಕೆ ಸೇಲ್ ಆದ ಬಳಿಕ ಪ್ರತಿಕ್ರಿಯೆ ನೀಡಿರುವ ಸ್ಯಾಮ್ ಕುರ್ರನ್ ಏನು ಹೇಳಿದ್ದಾರೆ ನೋಡಿ.

4 / 8
ಐಪಿಎಲ್ ಹರಾಜಿನ ಹಿಂದಿನ ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ. ನಾನು ಸಾಕಷ್ಟು ಉತ್ಸುಕನಾಗಿದ್ದೆ. ಆಕ್ಷನ್ ಯಾವರೀತಿ ಹೊಗಬಹುದೆಂಬ ಕುತೂಹಲವಿತ್ತು. ಇದೀಗ ನಂಬಲು ಸಾಧ್ಯವಾಗುತ್ತಿಲ್ಲ. ನಾನು ಸಾಧಿಸಬೇಕು ಎಂಬುದನ್ನು ಪಡೆಯಲು ಈಗ ಯಶಸ್ವಿಯಾಗಿದ್ದೇನೆ. ಈರೀತಿಯದನ್ನು ಸ್ವೀಕರಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ ಎಂದು ಸ್ಯಾಮ್ ಹೇಳಿದ್ದಾರೆ.

5 / 8
ನಾನು 4 ವರ್ಷಗಳ ಹಿಂದೆ ಐಪಿಎಲ್ ಜೀವನ ಆರಂಭಿಸಿದ್ದು ಇದೇ ಪಂಜಾಬ್ ತಂಡದಿಂದ. ಈಗ ಪುನಃ ಅದೇ ತಂಡಕ್ಕೆ ಮರಳಿದ್ದೇನೆ. ಹಿಂದಿನ ತಂಡಕ್ಕೆ ಮರಳಿ ಸೇರಿರುವುದಕ್ಕೆ ಖುಷಿ ಇದೆ. ನನ್ನ ಜೊತೆ ಇನ್ನೂ ಕೆಲ ಇಂಗ್ಲಿಷ್ ಆಟಗಾರರಿದ್ದು, ಪಂಜಾಬ್ ತಂಡ ಸೇರಲು ಕುತೂಹಲಕಾರಿ ಆಗಿದ್ದೇನೆ ಎಂಬುದು ಸ್ಯಾಮ್ ಮಾತು.

6 / 8
ಹೋಮ್ ಗ್ರೌಂಡ್ ಮೊಹಾಲಿ ಬಗ್ಗೆ ಮಾತನಾಡಿದ ಕುರ್ರನ್, ಮೊಹಾಲಿ ಸ್ಟೇಡಿಂನ ನನಗೆ ಚೆನ್ನಾಗಿ ತಿಳಿದಿದೆ. ಅದು ನನಗೆ ಸಹಕಾರಿ ಆಗುತ್ತದೆ. ಅಲ್ಲದೆ ನನಗೆ ಸಹಾಯ ಮಾಡಲು ತಂಡದಲ್ಲಿ ಅನೇಕ ಆಟಗಾರರಿದ್ದಾರೆ. ಐಪಿಎಲ್ 2023 ರಲ್ಲಿ ವಿಶ್ವಾದಿಂದ ಆಡುತ್ತೇನೆ. ನಾವು ಅದ್ಭುತ ವಿಶ್ವಕಪ್​ನಿಂದ ಟೂರ್ನಿಯಲ್ಲಿ ಗೆದ್ದು ಬಂದಿದ್ದೇವೆ. ಭಾರತಕ್ಕೆ ಬರಲು ಕಾತುರನಾಗಿದ್ದೇನೆ ಎಂದು ಹೇಳಿದ್ದಾರೆ.

7 / 8
ಐಪಿಎಲ್ ಮಿನಿ ಹರಾಜಿನಲ್ಲಿ ಕುರ್ರನ್ ಜೊತೆ ಇನ್ನೂ ನಾಲ್ಕು ಆಟಗಾರರು ದೊಡ್ಡ ಮೊತ್ತಕ್ಕೆ ಸೇಲ್ ಆದರು. ಕ್ಯಾಮ್ರೊನ್ ಗ್ರೀನ್ ಅವರನ್ನು 17.50 ಕೋಟಿ ರೂಪಾಯಿಗೆ ಮುಂಬೈ ಇಂಡಿಯನ್ಸ್​ ಖರೀದಿ ಮಾಡಿತು. ಬೆನ್ ಸ್ಟೋಕ್ಸ್ ಅವರನ್ನು ಸಿಎಸ್​ಕೆ ತಂಡವು ಬರೋಬ್ಬರಿ 16. 25 ಕೋಟಿ ರೂ. ನೀಡಿ ಖರೀದಿಸಿತು. ನಿಕೋಲಸ್ ಪೂರನ್ ಅವರನ್ನು 16 ಕೋಟಿಗೆ ಲಕ್ನೋ ಸೂಪರ್ ಜೇಂಟ್ಸ್ ಪಡೆದುಕೊಂಡಿತು. ಹ್ಯಾರಿ ಬ್ರೂಕ್ 13.25 ಕೋಟಿ ರೂ. ಗೆ ಸನ್​ರೈಸರ್ಸ್​ ಹೈದರಾಬಾದ್ ಪಾಲಾದರು.

8 / 8

Published On - 10:12 am, Sat, 24 December 22

Follow us