Yuzvendra Chahal: ಚಹಲ್ ಭರ್ಜರಿ ಸ್ಪಿನ್ ಮೋಡಿ: ಮೆಗಾ ಹರಾಜಿಗೂ ಮುನ್ನ ಕೈಬಿಟ್ಟು ಆರ್​ಸಿಬಿ ತಪ್ಪು ಮಾಡಿತೇ?

| Updated By: ಝಾಹಿರ್ ಯೂಸುಫ್

Updated on: Dec 13, 2021 | 6:12 PM

Vijay Hazare Trophy 2021: ಈ ಮೂಲಕ ಹರ್ಯಾಣ ತಂಡದ ಗೆಲುವಿನಲ್ಲಿ ಯುಜುವೇಂದ್ರ ಚಹಲ್ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಅತ್ತ ಮೆಗಾ ಹರಾಜಿಗೂ ಮುನ್ನವೇ ದೇಶೀಯ ಅಂಗಳದಲ್ಲಿ ಸ್ಪಿನ್ ಮೋಡಿ ಮಾಡುತ್ತಿರುವ ಚಹಲ್ ಅವರ ಖರೀದಿಗಾಗಿ ಐಪಿಎಲ್ ಫ್ರಾಂಚೈಸಿಗಳು ಒಲವು ಹೊಂದಿದೆ.

1 / 5
 ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 15 ಗೂ ಮುನ್ನ ಆರ್​ಸಿಬಿ ತಂಡವು ಮೂವರು ಆಟಗಾರರನ್ನು ಉಳಿಸಿಕೊಂಡಿತ್ತು. ಅದರಂತೆ ತಂಡದಲ್ಲಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಇದ್ದಾರೆ. ಆದರೆ ಐಪಿಎಲ್​ನ ಯಶಸ್ವಿ ಸ್ಪಿನ್ ಬೌಲರ್ ಯುಜುವೇಂದ್ರ ಚಹಲ್ ಅವರನ್ನು ರಿಲೀಸ್ ಮಾಡಿ ಆರ್​ಸಿಬಿ ಅಚ್ಚರಿ ಮೂಡಿತ್ತು.

2 / 5
ಆದರೀಗ ಆರ್​ಸಿಬಿ ಟೀಮ್ ಮ್ಯಾನೇಜ್ಮೆಂಟ್​ನ ನಿರ್ಧಾರ ತಪ್ಪು ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ ಚಹಲ್. ಹೌದು, ವಿಜಯ್ ಹಜಾರೆ ಟೂರ್ನಿಯಲ್ಲಿ ಹರ್ಯಾಣ ಪರ ಆಡುತ್ತಿರುವ ಚಹಲ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.

3 / 5
4 ಪಂದ್ಯಗಳನ್ನು ಆಡಿರುವ ಚಹಲ್ 38.1 ಓವರ್​ನಲ್ಲಿ ನೀಡಿರುವುದು ಕೇವಲ 164 ರನ್​ ಮಾತ್ರ. ಅಂದರೆ ಕೇವಲ 4.29 ಸರಾಸರಿಯಲ್ಲಿ ರನ್​ ಬಿಟ್ಟುಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ 11 ವಿಕೆಟ್ ಉರುಳಿಸುವ ಮೂಲಕ ಮಿಂಚಿದ್ದಾರೆ.

4 / 5
ಹೈದರಾಬಾದ್ ವಿರುದ್ದ 10 ಓವರ್ ಮಾಡಿದ್ದ ಚಹಲ್ 42 ರನ್​ ನೀಡಿ 3 ವಿಕೆಟ್ ಪಡೆದಿದ್ದರು. ಇನ್ನು ಜಾರ್ಖಂಡ್ ವಿರುದ್ದದ ಪಂದ್ಯದಲ್ಲಿ 10 ಓವರ್​ಗಳಲ್ಲಿ 48 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ ಸೌರಾಷ್ಟ್ರ ವಿರುದ್ದ 8.1 ಓವರ್​ನಲ್ಲಿ 31 ರನ್​ಗೆ 2 ವಿಕೆಟ್ ಪಡೆದಿದ್ದರು. ದೆಹಲಿ ವಿರುದ್ದದ ಪಂದ್ಯದಲ್ಲಿ 10 ಓವರ್​ಗಳಲ್ಲಿ 48 ರನ್​ ನೀಡಿ 3 ವಿಕೆಟ್ ಉರುಳಿಸಿದ್ದಾರೆ.

5 / 5
ಈ ಮೂಲಕ ಹರ್ಯಾಣ ತಂಡದ ಗೆಲುವಿನಲ್ಲಿ ಯುಜುವೇಂದ್ರ ಚಹಲ್ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಅತ್ತ ಮೆಗಾ ಹರಾಜಿಗೂ ಮುನ್ನವೇ ದೇಶೀಯ ಅಂಗಳದಲ್ಲಿ ಸ್ಪಿನ್ ಮೋಡಿ ಮಾಡುತ್ತಿರುವ ಚಹಲ್ ಅವರ ಖರೀದಿಗಾಗಿ ಐಪಿಎಲ್ ಫ್ರಾಂಚೈಸಿಗಳು ಒಲವು ಹೊಂದಿದೆ. ಹೀಗಾಗಿ ಮೆಗಾ ಹರಾಜಿಗೂ ಮುನ್ನವೇ ಚಹಲ್ ಹೊಸ ತಂಡಗಳ ಪಾಲಾದರೂ ಅಚ್ಚರಿಪಡಬೇಕಿಲ್ಲ.