ಟೀಮ್ ಇಂಡಿಯಾದಲ್ಲಿಲ್ಲ ಸ್ಥಾನ, ವಿದೇಶಿ ತಂಡದ ಪರ 9 ವಿಕೆಟ್ ಕಬಳಿಸಿದ ಯುಜ್ವೇಂದ್ರ ಚಹಲ್
Yuzvendra Chahal: ಇಂಗ್ಲೆಂಡ್ ಕೌಂಟಿ ಕ್ರಿಕೆಟ್ನಲ್ಲಿ ಯುಜ್ವೇಂದ್ರ ಚಹಲ್ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ್ದಾರೆ. ಈ ಟೂರ್ನಿಯಲ್ಲಿ ನಾರ್ಥಾಂಪ್ಟನ್ ಶೈರ್ ತಂಡದ ಪರ ಕಣಕ್ಕಿಳಿದಿರುವ ಚಹಲ್ 9 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇದಕ್ಕೂ ಮುನ್ನ ಒನ್ ಡೇ ಕಪ್ನಲ್ಲೂ 5 ವಿಕೆಟ್ ಉರುಳಿಸಿದ್ದರು. ಇದೀಗ ಟೆಸ್ಟ್ ಪಂದ್ಯದಲ್ಲೂ ಸ್ಪಿನ್ ಮೋಡಿ ಮಾಡಿದ್ದಾರೆ.
1 / 6
ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಪ್ರಸ್ತುತ ನಡೆಯುತ್ತಿರುವ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಕಾಣಿಸಿಕೊಂಡಿಲ್ಲ. ಅತ್ತ ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಗೂ ಆಯ್ಕೆಯಾಗಿಲ್ಲ. ಇದಾಗ್ಯೂ ಚಹಲ್ ಅವರ ಸ್ಪಿನ್ ಮೋಡಿ ಮಾತ್ರ ಮುಂದುವರೆದಿದೆ. ಅದು ಸಹ ದೂರದ ಇಂಗ್ಲೆಂಡ್ನಲ್ಲಿ ಎಂಬುದು ವಿಶೇಷ.
2 / 6
ಹೌದು, ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಯುಜ್ವೇಂದ್ರ ಚಹಲ್ ಇಂಗ್ಲೆಂಡ್ನಲ್ಲಿ ಕೌಂಟಿ ಚಾಂಪಿಯನ್ಶಿಪ್ ಟೂರ್ನಿ ಆಡುತ್ತಿದ್ದಾರೆ. ನಾರ್ಥಾಂಪ್ಟನ್ ಶೈರ್ ಪರ ಹೊಸ ಇನಿಂಗ್ಸ್ ಆರಂಭಿಸಿರುವ ಚಹಲ್ ಇದೀಗ 9 ವಿಕೆಟ್ ಕಬಳಿಸಿ ಸಂಚಲನ ಸೃಷ್ಟಿಸಿದ್ದಾರೆ.
3 / 6
ನಾರ್ಥಾಂಪ್ಟನ್ನ ಕೌಂಟಿ ಮೈದಾನದಲ್ಲಿ ನಡೆದ ಕೌಂಟಿ ಚಾಂಪಿಯನ್ಶಿಪ್ನ 47ನೇ ಪಂದ್ಯದಲ್ಲಿ ನಾರ್ಥಾಂಪ್ಟನ್ ಶೈರ್ ಮತ್ತು ಡರ್ಬಿಶೈರ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಾರ್ಥಾಂಪ್ಟನ್ ಶೈರ್ 219 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿದ ಡರ್ಬಿಶೈರ್ ವಿರುದ್ಧ ಚಹಲ್ ಸ್ಪಿನ್ ಮೋಡಿ ಮಾಡಿದರು.
4 / 6
ಲೆಗ್ ಸ್ಪಿನ್ ಮೂಲಕ ಡರ್ಬಿಶೈರ್ ಬ್ಯಾಟರ್ಗಳನ್ನು ಕಟ್ಟಿಹಾಕಿದ ಯುಜ್ವೇಂದ್ರ ಚಹಲ್ 16.3 ಓವರ್ಗಳಲ್ಲಿ ಕೇವಲ 45 ರನ್ ನೀಡಿ 5 ವಿಕೆಟ್ ಕಬಳಿಸಿದರು. ಈ ಮೂಲಕ ಎದುರಾಳಿ ತಂಡವು ಕೇವಲ 165 ರನ್ಗಳಿಗೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದಾದ ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ ನಾರ್ಥಾಂಪ್ಟನ್ ಶೈರ್ ತಂಡವು 211 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
5 / 6
ಮೊದಲ ಇನಿಂಗ್ಸ್ನ ಹಿನ್ನಡೆಯೊಂದಿಗೆ ಕೇವಲ 266 ರನ್ಗಳ ಗುರಿ ಪಡೆದ ಡರ್ಬಿಶೈರ್ಗೆ ಮತ್ತೊಮ್ಮೆ ಆಘಾತ ನೀಡುವಲ್ಲಿ ಯುಜ್ವೇಂದ್ರ ಚಹಲ್ ಯಶಸ್ವಿಯಾದರು. ಈ ಇನಿಂಗ್ಸ್ನಲ್ಲಿ 18 ಓವರ್ಗಳನ್ನು ಎಸೆದ ಚಹಲ್ ಕೇವಲ 54 ರನ್ ನೀಡಿ 4 ವಿಕೆಟ್ ಉರುಳಿಸಿದರು. ಪರಿಣಾಮ ಡರ್ಬಿಶೈರ್ ತಂಡವು ಕೇವಲ 132 ರನ್ಗಳಿಗೆ ಆಲೌಟ್ ಆಯಿತು.
6 / 6
ಇತ್ತ ಯುಜ್ವೇಂದ್ರ ಚಹಲ್ ಅವರ ಸ್ಪಿನ್ ಮೋಡಿಯೊಂದಿಗೆ ನಾರ್ಥಾಂಪ್ಟನ್ ಶೈರ್ ತಂಡವು ಈ ಪಂದ್ಯದಲ್ಲಿ 133 ರನ್ಗಳ ಭರ್ಜರಿ ಜಯ ಸಾಧಿಸಿದೆ. ಅಂದಹಾಗೆ ಈ 9 ವಿಕೆಟ್ಗಳೊಂದಿಗೆ ಚಹಲ್ ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ 100 ವಿಕೆಟ್ಗಳನ್ನು ಪೂರೈಸಿರುವುದು ವಿಶೇಷ.
Published On - 2:08 pm, Thu, 12 September 24