
ಇಂಗ್ಲೆಂಡ್ನ ನಾರ್ಥಾಂಪ್ಟನ್ನ ಕೌಂಟಿ ಮೈದಾನದಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್ಶಿಪ್ನ 47ನೇ ಪಂದ್ಯದಲ್ಲಿ ಯುಜ್ವೇಂದ್ರ ಚಹಲ್ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನಾರ್ಥಾಂಪ್ಟನ್ ಶೈರ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು.

ಪ್ರಥಮ ಇನಿಂಗ್ಸ್ನಲ್ಲಿ ನಾರ್ಥಾಂಪ್ಟನ್ ಶೈರ್ ತಂಡವನ್ನು ಡರ್ಬಿಶೈರ್ ಬೌಲರ್ಗಳು ಕೇವಲ 219 ರನ್ಗಳಿಗೆ ಆಲೌಟ್ ಮಾಡಿದ್ದರು. ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ಡರ್ಬಿಶೈರ್ ಪಡೆಗೆ ಯುಜ್ವೇಂದ್ರ ಚಹಲ್ ಆಘಾತದ ಮೇಲೆ ಆಘಾತ ನೀಡಿದರು.

ಅತ್ಯುತ್ತಮ ಸ್ಪಿನ್ ಮೋಡಿ ಮಾಡಿದ ಯುಜ್ವೇಂದ್ರ ಚಹಲ್ 16.3 ಓವರ್ಗಳಲ್ಲಿ 45 ರನ್ ನೀಡಿ 5 ವಿಕೆಟ್ ಉರುಳಿಸಿದರು. ಈ ಮೂಲಕ ಡರ್ಬಿಶೈರ್ ತಂಡವನ್ನು ಕೇವಲ 165 ರನ್ಗಳಿಗೆ ಆಲೌಟ್ ಮಾಡುವಲ್ಲಿ ಚಹಲ್ ಪ್ರಮುಖ ಪಾತ್ರವಹಿಸಿದರು.

ಈ ಐದು ವಿಕೆಟ್ಗಳೊಂದಿಗೆ ಯುಜ್ವೇಂದ್ರ ಚಹಲ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 100 ವಿಕೆಟ್ಗಳ ಸಾಧನೆ ಮಾಡಿದ್ದಾರೆ. ಈವರೆಗೆ 38 ಫಸ್ಟ್ ಕ್ಲಾಸ್ ಪಂದ್ಯಗಳನ್ನಾಡಿರುವ ಚಹಲ್ ಒಟ್ಟು 102 ವಿಕೆಟ್ ಕಬಳಿಸಿದ್ದಾರೆ. ಇದೇ ವೇಳೆ 3 ಬಾರಿ 5 ವಿಕೆಟ್ಗಳನ್ನು ಉರುಳಿಸಿದ್ದಾರೆ.

ಇದಕ್ಕೂ ಮುನ್ನ ಯುಜ್ವೇಂದ್ರ ಚಹಲ್ ಕೌಂಟಿ ಕ್ರಿಕೆಟ್ನಲ್ಲಿ ಒನ್ ಡೇ ಕಪ್ ಟೂರ್ನಿ ಆಡಿದ್ದರು. ನಾರ್ಥಾಂಪ್ಟನ್ ಶೈರ್ ತಂಡದ ಪರ ಕಣಕ್ಕಿಳಿದಿದ್ದ ಚಹಲ್ ಚೊಚ್ಚಲ ಪಂದ್ಯದಲ್ಲೇ ಐದು ವಿಕೆಟ್ ಉರುಳಿಸಿದ್ದರು. ಕೆಂಟ್ ತಂಡದ ವಿರುದ್ಧದ ಈ ಪಂದ್ಯದಲ್ಲಿ 10 ಓವರ್ ಎಸೆತಗಳನ್ನು ಎಸೆದಿದ್ದ ಚಹಲ್ 5 ಮೇಡನ್ ಓವರ್ಗಳೊಂದಿಗೆ ಕೇವಲ 14 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದ್ದರು. ಇದೀಗ ಕೌಂಟಿ ಚಾಂಪಿಯನ್ಶಿಪ್ನಲ್ಲೂ ಐದು ವಿಕೆಟ್ಗಳ ಸಾಧನೆ ಮಾಡಿದ್ದಾರೆ.

ಇನ್ನು ಯುಜ್ವೇಂದ್ರ ಚಹಲ್ ಅವರ ಸ್ಪಿನ್ ಮೋಡಿಯಿಂದಾಗಿ ಮೊದಲ ಇನಿಂಗ್ಸ್ನಲ್ಲಿ 54 ರನ್ಗಳ ಮುನ್ನಡೆ ಪಡೆದಿರುವ ನಾರ್ಥಾಂಪ್ಟನ್ ಶೈರ್ ತಂಡವು ಇನಿಂಗ್ಸ್ ಆರಂಭಿಸಿದೆ. ಅಲ್ಲದೆ 46 ಓವರ್ಗಳ ಮುಕ್ತಾಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 178 ರನ್ ಕಲೆಹಾಕಿ, 232 ರನ್ಗಳ ಮುನ್ನಡೆ ಪಡೆದುಕೊಂಡಿದೆ.