IPL 2024: ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಲು ಸಜ್ಜಾಗ ಯುಜ್ವೇಂದ್ರ ಚಹಾಲ್: ಇದುವರೆಗೆ ಯಾರೂ ಮಾಡಿಲ್ಲ ಈ ಸಾಧನೆ
Yuzvendra Chahal Record: 2024 ರ ಐಪಿಎಲ್‌ನಲ್ಲಿ ಚಹಲ್ 16 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಬೌಲರ್ ಎಂಬ ದಾಖಲೆಯನ್ನು ನಿರ್ಮಿಸಲು ಸಜ್ಜಾಗಿದ್ದಾರೆ. ಚಹಾಲ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು, ಅವರ ಹೆಸರಿಗೆ 187 ವಿಕೆಟ್‌ಗಳಿವೆ.
1 / 6
2024 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಯುಜ್ವೇಂದ್ರ ಚಹಾಲ್‌ಗೆ ಒಂದು ದೊಡ್ಡ ಅವಕಾಶವಾಗಿದೆ. ಏಕೆಂದರೆ ರಾಜಸ್ಥಾನ್ ರಾಯಲ್ಸ್ ಸ್ಟಾರ್ ಕಳೆದ 12 ತಿಂಗಳುಗಳಿಂದ ಭಾರತೀಯ ಏಕದಿನ ಮತ್ತು ಟಿ20I ತಂಡಗಳಲ್ಲಿ ಸ್ಥಾನ ಪಡೆದುಕೊಂಡಿಲ್ಲ. 2023-24 ಋತುವಿನ ಕೇಂದ್ರ ಒಪ್ಪಂದದಿಂದ ಕೂಡ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇವರನ್ನು ತೆಗೆದು ಹಾಕಲಾಗಿದೆ.
2 / 6
ಕುಲ್ದೀಪ್ ಯಾದವ್ ಮತ್ತು ರವಿ ಬಿಷ್ಟೋಯಿ ಅವರಿಗಿಂತ ಭಾರತೀಯ ವೈಟ್-ಬಾಲ್ ತಂಡದ ರ್ಯಾಂಕಿಂಗ್ನಿಂದ ಹಿಂದೆ ಬಿದ್ದಿದ್ದರೂ ಸಹ, ಚಹಾಲ್ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಪ್ರಮುಖ ಸ್ಪಿನ್ನರ್ ಆಗಿದ್ದಾರೆ. ರವಿಚಂದ್ರನ್ ಅಶ್ವಿನ್ ಜೊತೆಗೆ ಇವರು ತಂಡದಲ್ಲಿದ್ದಾರೆ. ಇದೀಗ ಐಪಿಎಲ್‌ನಲ್ಲಿ ಚಹಲ್ ಹೊಸ ದಾಖಲೆ ಸೃಷ್ಟಿಸುವ ತವಕದಲ್ಲಿದ್ದಾರೆ.
3 / 6
2024 ರ ಐಪಿಎಲ್‌ನಲ್ಲಿ ಚಹಲ್ 16 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಬೌಲರ್ ಎಂಬ ದಾಖಲೆಯನ್ನು ನಿರ್ಮಿಸಲು ಸಜ್ಜಾಗಿದ್ದಾರೆ. ಚಹಾಲ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು, ಅವರ ಹೆಸರಿಗೆ 187 ವಿಕೆಟ್‌ಗಳಿವೆ. ಈ ಹಿಂದೆ ಮುಂಬೈ ಇಂಡಿಯನ್ಸ್ ಪರ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಇವರು ಆಡಿದ್ದರು.
4 / 6
2024ರ ಐಪಿಎಲ್‌ನಲ್ಲಿ, ಚಹಾಲ್ ಐಪಿಎಲ್‌ನಲ್ಲಿ 200 ವಿಕೆಟ್‌ಗಳನ್ನು ಪಡೆದ ಮೊದಲ ಕ್ರಿಕೆಟಿಗನಾಗುವ ಅವಕಾಶವನ್ನು ಹೊಂದಿದ್ದಾರೆ. 33ರ ಹರೆಯದ ಅವರು ಮುಂಬರುವ ಋತುವಿನಲ್ಲಿ 13 ವಿಕೆಟ್ ಪಡೆದರೆ, ಈ ದೊಡ್ಡ ಮೈಲಿಗಲ್ಲನ್ನು ತಲುಪುತ್ತಾರೆ. ಇದುವರೆಗೆ ಐಪಿಎಲ್‌ನಲ್ಲಿ ಯಾವೊಬ್ಬ ಬೌಲರ್ ಈ ಸಾಧನೆ ಮಾಡಿಲ್ಲ.
5 / 6
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್: ಯುಜ್ವೇಂದ್ರ ಚಹಾಲ್ 187 ವಿಕೆಟ್, ಡ್ವೇನ್ ಬ್ರಾವೋ 183 ವಿಕೆಟ್, ಪಿಯೂಷ್ ಚಾವ್ಲಾ 179 ವಿಕೆಟ್, ಅಮಿತ್ ಮಿಶ್ರಾ 173 ವಿಕೆಟ್, ರವಿಚಂದ್ರನ್ ಅಶ್ವಿನ್ 171 ವಿಕೆಟ್, ಭುವನೇಶ್ವರ್ ಕುಮಾರ್ 170 ವಿಕೆಟ್ ಪಡೆದುಕೊಂಡಿದ್ದಾರೆ.
6 / 6
2022 ರಲ್ಲಿ ಆರ್‌ಆರ್‌ಗೆ ಸೇರಿದಾಗಿನಿಂದ, ಚಹಾಲ್ ಎರಡು ಋತುಗಳಲ್ಲಿ 48 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ ಮತ್ತು ಈಗಾಗಲೇ ಇತಿಹಾಸದಲ್ಲಿ ಅವರ ಐದನೇ ಅತಿ ಹೆಚ್ಚು ವಿಕೆಟ್ ಟೇಕರ್ ಆಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 2014 ರಿಂದ 2021 ವರೆಗೆ ಆಡಿದ್ದು, ಈ ಸಂದರ್ಭ 113 ಪಂದ್ಯಗಳಲ್ಲಿ 139 ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
Published On - 10:10 am, Tue, 19 March 24